ಕೆ.ಆರ್​.ಸಾಗರ:ಕೃಷ್ಣರಾಜಸಾಗರ ಜಲಾಶಯದ ಅಣೆಕಟ್ಟೆ ನೀರಿನ ಮಟ್ಟ ಭಾನುವಾರ 100 ಅಡಿಗೆ ಇಳಿದಿದೆ. 124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಅಣೆಕಟ್ಟೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ 7 ಅಡಿಯಷ್ಟು ನೀರಿನ ಸಂಗ್ರಹ ಹೆಚ್ಚಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಕಾವೇರಿ ನದಿ ನೀರನ್ನು ಕುಡಿಯಲು ಅವಲಂಬಿಸಿರುವ ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ಜಿಲ್ಲೆಯ ಜನರಿಗೆ ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆ ಇರಲಾರದು.
ಪ್ರಸ್ತುತ ಬೆಳೆದು ನಿಂತಿರುವ ಬೆಳೆಗಳಿಗೆ ನೀರು ಹರಿಸಲಾಗುತ್ತಿದೆ. 2021ರ ನವೆಂಬರ್​ನಲ್ಲಿ ಅಣೆಕಟ್ಟೆ ತುಂಬಿದ ಕಾರಣ ನೀರಿನ ಸಂಗ್ರಹ ಉತ್ತಮವಾಗಿದೆ. ನೀರಿನ ಮಟ್ಟ 60 ಅಡಿಗೆ ತಲುಪಿದರೂ ಕುಡಿಯಲು ಬಳಸಬಹುದಾಗಿದೆ. ನೀರು ಸಂಗ್ರಹ ಮಟ್ಟ ಕುಸಿಯುತ್ತಿರುವ ಕಾರಣ ಅಣೆಕಟ್ಟೆ ಬರಿದಾಗಿ ಕಾಣಿಸುತ್ತಿದೆ.
ಉತ್ತಮವಾಗಿದೆ ನೀರಿನ ಸಂಗ್ರಹ:ಅಣೆಕಟ್ಟೆಯಲ್ಲಿ ಭಾನುವಾರ 100.40 (ಗರಿಷ್ಠ 124.80) ಅಡಿ, ಒಳಹರಿವು 665 ಕ್ಯೂಸೆಕ್​, ಹೊರ ಹರಿವು 3972 ಕ್ಯೂಸೆಕ್​, 23.269 (ಗರಿಷ್ಠ 49.454) ಟಿಎಂಸಿ ನೀರು ಸಂಗ್ರಹವಾಗಿದೆ. ಹಿಂದಿನ ಆರು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಉತ್ತಮವಾಗಿದೆ.
ವರ್ಷ ಸಂಗ್ರಹ ಮಟ್ಟ (ಅಡಿಗಳಲ್ಲಿ)2016 – 80.522017 – 73.212018 – 73.532019 – 91.082020 – 99.922021 – 93.75
ಐದು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಉತ್ತಮವಾಗಿದೆ. ಡ್ರಿಪ್​ ಯೋಜನೆಯಡಿ ಹಳೆಯ ಗೇಟುಗಳನ್ನು ಬದಲಾವಣೆ ಮಾಡಿದ್ದರಿಂದ ಸೋರಿಕೆ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗುವುದಿಲ್ಲ.| ಕೆ.ಜೆ.ವಿಜಯಕುಮಾರ್​ಅಧೀಕ್ಷಕ ಇಂಜಿನಿಯರ್​, ಕಾವೇರಿ ನೀರಾವರಿ ನಿಗಮ, ಮಂಡ್ಯ ವೃತ್ತ
ಬೆಡ್​ ರೂಮಲ್ಲಿ ಎಲೆಕ್ಟ್ರಿಕ್​​ ಸ್ಕೂಟರ್​ನ ಬ್ಯಾಟರಿ ಸ್ಫೋಟ: ಪತಿ ಸಾವು, ಪತ್ನಿ ಸ್ಥಿತಿ ಚಿಂತಾಜನಕ… ಸ್ಕೂಟರ್​ ಖರೀದಿಸಿದ ಮರುದಿನವೇ ದುರಂತ

ತುಮಕೂರು ಎಸ್​ಪಿ ಸರ್​, ಪ್ಲೀಸ್​ ನೀವೆ ನಮ್ಗೆ ದಾರಿ ತೋರ್ಸಿ… ಮನೆ ಮಾಲೀಕನ ಸಾಲಕ್ಕೆ ಕಂಗಾಲಾದ 35 ಕುಟುಂಬ

ಪಕ್ಕದ ರೂಮಲ್ಲಿ ಗಂಡ ಮಲಗಿದ್ರೂ ನಡೆದೇ ಹೋಯ್ತು ಘೋರ ದುರಂತ! ಬೆಳಗ್ಗೆ ಪತ್ನಿಯ ಕೋಣೆಗೆ ಹೋದವನಿಗೆ ಕಾದಿತ್ತು ಶಾಕ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − six =
Remember me
