ಶಿವಮೊಗ್ಗ:ಹಿಂದೂ ಶ್ರದ್ಧಾ ಕೇಂದ್ರಗಳ ಅತಿಕ್ರಮಣ ಅಸಾಧ್ಯ. ಅಯೋಧ್ಯೆ ನಮ್ಮದಾಗಿದೆ. ಕಾಶಿಯಲ್ಲೂ ಪುರಾತನ ದೇವಾಲಯದ ಕುರುಹು ಪತ್ತೆಯಾಗಿದೆ. ಮುಂದಿನ ದಿನಗಳಲ್ಲಿ ಮಥುರಾ ಕೂಡ ನಮ್ಮದಾಗಲಿದೆ ಎಂದು ಶಾಸಕ ಕೆ.ಎಸ್​.ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಶ್ವರಪ್ಪ, ಸುದೀರ್ಘ ಹೋರಾಟದ ಬಳಿಕ ಅಯೋಧ್ಯೆ ಮರಳಿ ಕೈ ಸೇರಿತು. ಕಾಶಿಯಲ್ಲಿ ಈಗ ಕಾನೂನು ಹೋರಾಟ ಆರಂಭವಾಗಿದೆ. ಹಿಂದೂ ಧಮೀರ್ಯರ ಶ್ರದ್ಧಾ ಕೇಂದ್ರಗಳನ್ನು ಅತಿಕ್ರಮಣ ಮಾಡಲು ಸಾಧ್ಯವಿಲ್ಲ. ಜ್ಞಾನವ್ಯಾಪಿ ಮಸೀದಿಯ ವಿಡಿಯೋ ಚಿತ್ರೀಕರಣ ಮಾಡಲು ಕೋರ್ಟ್​ ಅನುಮತಿ ನೀಡಿದ್ದು ಅತ್ಯಂತ ಸ್ವಾಗತಾರ್ಹ. ಈಗಾಗಲೇ ಅಲ್ಲಿ ಸ್ವರ್ಣಗೌರಿ, ಹನುಮಾನ್​ ವಿಗ್ರಹಗಳು ಪತ್ತೆಯಾದ ಬೆನ್ನಲ್ಲೇ ಬೃಹತ್​ ಶಿವಲಿಂಗವೂ ಸಿಕ್ಕಿರುವುದು ಹಿಂದುಗಳ ನಂಬಿಕೆಗೆ ಮತ್ತಷ್ಟು ಪುಷ್ಠಿ ಸಿಕ್ಕಿದೆ ಎಂದರು.
ಜ್ಞಾನವ್ಯಾಪಿ ಮಸೀದಿ ಕೆಡವಿ ವಿಶ್ವನಾಥ ದೇವಾಲಯ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಲೋಕಸಭಾ ಸದಸ್ಯ ಅಸಾದುದ್ದೀನ್​ ಓವೈಸಿ ಹೇಳಿರುವುದು ಹಾಸ್ಯಾಸ್ಪದ. ಜ್ಞಾನವ್ಯಾಪಿ ಜಾಗ ಓವೈಸಿ ಆಸ್ತಿಯಲ್ಲ. ಮೇಲಾಗಿ ಅವರು ಔರಂಗಜೇಬನ ಸಮಾಧಿಗೆ ತೆರಳಿ ಗೌರವ ಸಲ್ಲಿಸಿರುವುದು ದೇಶದ್ರೋಹದ ಚಟುವಟಿಕೆ. ಇದನ್ನು ಕಾಂಗ್ರೆಸ್​ ವಿರೋಧಿಸಬೇಕೆಂದು ಕೆ.ಎಸ್​.ಈಶ್ವರಪ್ಪ ಒತ್ತಾಯಿಸಿದರು.
‘ಫ್ಯಾಟ್’ ಸರ್ಜರಿಗೆ ಕನ್ನಡ ಕಿರುತೆರೆ ನಟಿ ಬಲಿ! ಆಪರೇಷನ್​ ವೇಳೆ ನಡೆಯಿತು ದುರಂತ, ಸತ್ತ ಮೇಲೂ ಬಿಲ್​ ಕೇಳಿದ ಆಸ್ಪತ್ರೆ

ನಾಲ್ವರನ್ನು ಮದ್ವೆ ಆಗಿದ್ದಾನೆ, ಹಲವರ ಜತೆ ಅಕ್ರಮ ಸಂಬಂಧವಿದೆ, ನನ್ನನ್ನು ಕಾಪಾಡಿ… ಬೆಂಗ್ಳೂರಲ್ಲಿ ಪೇದೆ ಪತ್ನಿ ಕಣ್ಣೀರು

ಚೀಫ್ ಇಂಜಿನಿಯರ್‌ಗೆ ಚಪ್ಪಲಿಯಲ್ಲಿ ಹೊಡೀತೀನಿ ಎಂದ ಶಾಸಕ! ಆಡಿಯೋ ವೈರಲ್​

eshwarappa
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − seven =
Remember me
