ಶಿವಮೊಗ್ಗ:ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯ ಮೂರನೇ ಅಭ್ಯರ್ಥಿ ಲೆಹರ್​ಸಿಂಗ್​ ಗೆಲ್ಲಲು ಹಾಗೂ ಕಾಂಗ್ರೆಸ್​ನ ಅಭ್ಯರ್ಥಿ ಮನ್ಸೂರ್​ ಅಲಿ ಖಾನ್​ ಮತ್ತು ಜೆಡಿಎಸ್​ನ ಕುಪೇಂದ್ರ ರೆಡ್ಡಿ ಸೋಲಿನಲ್ಲಿ ಮಾಜಿ ಸಿದ್ದರಾಮಯ್ಯ ಅವರ ಪಾತ್ರ ಪ್ರಮುಖ. ಬಿಜೆಪಿಯ ಮೂರನೇ ಅಭ್ಯರ್ಥಿ ಗೆಲುವಿಗೆ ಸಹಕರಿಸಿದ ಸಿದ್ದರಾಮಯ್ಯ ಅವರಿಗೆ ಥ್ಯಾಂಕ್ಸ್​…
ಹೀಗೆಂದು ಕೆ.ಎಸ್​. ಈಶ್ವರಪ್ಪ ಹೇಳಿದ್ದಾರೆ. ಮುಸ್ಲಿಮರ ಬಗ್ಗೆ ಕಾಂಗ್ರೆಸ್​ಗೆ ಇರುವ ಕಳಕಳಿ ಏನು ಎಂಬುದು ರಾಜ್ಯಸಭಾ ಚುನಾವಣೆಯಲ್ಲಿ ಜಗಜ್ಜಾಹಿರಾಗಿದೆ. ಅಲ್ಪಸಂಖ್ಯಾತರ ಮೇಲಿನ ಪ್ರೀತಿ ಕೇವಲ ನಾಟಕ, ಸೋಲು ಖಚಿತ ಎಂಬುದು ಗೊತ್ತಿದ್ದರೂ ಮನ್ಸೂರ್​ ಅಲಿಖಾನ್​ ಅವರನ್ನು ಕಣಕ್ಕಿಳಿಸಿ ವಿಶ್ವಾಸ ದ್ರೋಹ ಬಗೆದಿದ್ದಾರೆ. ಬಿಜೆಪಿಯನ್ನು ಕೋಮುವಾದಿ ಎಂದು ಟೀಕಿಸುವ ಮುಸ್ಲಿಮರು ಮತ್ತು ಪ್ರಗತಿಪರರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಬಿಜೆಪಿ ಕೋಮುವಾದಿ ಪಕ್ಷ ಎಂಬುದನ್ನು ಯಾರೂ ಒಪ್ಪಲ್ಲ, ಸ್ವತಃ ಕಾಂಗ್ರೆಸ್​ ಪಕ್ಷದವರೇ ಈ ಮಾತನ್ನು ಒಪ್ಪುತ್ತಿಲ್ಲ ಎಂದ ಈಶ್ವರಪ್ಪ, ಲೆಹರ್​ ಸಿಂಗ್​ ಗೆಲುವಿಗೆ ಸಹಕರಿಸಿದ ಸಿದ್ದರಾಮಯ್ಯಗೆ ಅಭಿನಂದನೆ ಸಲ್ಲಿಸುವೆ ಎಂದು ಕುಟುಕಿದರು.
ಕಾಂಗ್ರೆಸ್​ ಕೋಮುವಾದಿ ಮತ್ತು ರಾಷ್ಟ್ರದ್ರೋಹಿ. ಸಿದ್ದರಾಮಯ್ಯ ಆ ಪಕ್ಷದಲ್ಲಿದ್ದಾರೆ. ನಾನು ಬಿಜೆಪಿಯಿಂದ ಬೆಳೆದು ಬಂದಿದ್ದೇನೆಯೇ ವಿನಃ ಸಿದ್ಧರಾಮಯ್ಯ ಕೃಪಾಕಟಾಕ್ಷದಿಂದಲ್ಲ. ಬಿಜೆಪಿ ನನ್ನನ್ನು ಸಾಮಾನ್ಯ ಕಾರ್ಯಕರ್ತನಿಂದ ಉಪ ಮುಖ್ಯಮಂತ್ರಿವರೆಗೂ ಬೆಳೆಯಲು ಅವಕಾಶ ಮಾಡಿಕೊಟ್ಟಿದೆ ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದರು.
ಕುಮಾರಸ್ವಾಮಿಗೆ ತಾಕತ್ತಿದ್ದರೆ ನನ್ನ ವಿರುದ್ಧ ಚುನಾವಣೆಗೆ ಸ್ಪರ್ಧಿಸಲಿ: ಚಾಲೆಂಜ್​ ಮಾಡುತ್ತಲೇ ನಾಲಗೆ ಹರಿಬಿಟ್ಟ ಗುಬ್ಬಿ ವಾಸು

ಬಟ್ಟೆ ಸರಿಸಿ ತೊಡೆ ಸವರುತ್ತಿದ್ದ.. ತುಟಿಗೆ ಚುಂಬಿಸಿ ಪ್ಯಾಂಟ್​ ಬಿಚ್ಚಿದ್ದ… ಬೆಂಗ್ಳೂರಲ್ಲಿ ಬಾಲಿವುಡ್​ ನಟಿ ಅನುಭವಿಸಿದ ನೋವು ಅಷ್ಟಿಷ್ಟಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + one =
Remember me
