ಕನಕಪುರ:ಅವರಿಬ್ಬರೂ ನಾಲ್ಕು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ಮುದ್ದಾದ ಗಂಡು ಮಗು ಕೂಡ ಇದೆ. ಈ ನಡುವೆ ‘ಮನೆಯಲ್ಲಿದ್ದ ಹಣ ತೆಗೆದುಕೊಂಡು ಬೇರೊಬ್ಬರೊಂದಿಗೆ ನನ್ನ ಪತ್ನಿ ನಾಪತ್ತೆಯಾಗಿದ್ದಾಳೆ’ ಎಂದು ಗಂಡ ಜೂ.2ರಂದು ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದ. ಈ ದೂರಿನ ಜಾಡು ಹಿಡಿದು ಹೊರಟ ಪೊಲೀಸರ ಕಣ್ಣಿಗೆ ಬಿದ್ದದ್ದು ದೂರುದಾರನ ಅಜ್ಜಿಗೆ ಸೇರಿದ್ದ ಜಮೀನಿನ ಎಳ್ಳು ಪೈರಿನಡಿ ಅಡಗಿದ್ದ ಭಯಾನಕ ರಹಸ್ಯ!
ಕನಕಪುರ ಸಾರಿಗೆ ಘಟಕದಲ್ಲಿ ಚಾಲಕ ಯಲವಳ್ಳಿ ಲೋಕೇಶ್ ಮತ್ತು ಗೀತಾ ಪರಸ್ಪರ ಪ್ರೀತಿ ಮದುವೆ ಆಗಿದ್ದರು. ಉತ್ತರ ಕರ್ನಾಟಕ ಭಾಗದ ಹಾವೇರಿ ಜಿಲ್ಲೆ ಹಾನಗಲ್ಲು ತಾಲೂಕು ಓಂಕಣ ಗ್ರಾಮದ ಗೀತಾ ಬೆಂಗಳೂರು-ನೆಲಮಂಗಲ ರಸ್ತೆಯಲ್ಲಿರುವ ಗಾರ್ವೆಂಟ್ಸ್​ನಲ್ಲಿ ಕೆಲಸ ಮಾಡುತ್ತಿದ್ದಳು. ರಾಜ್ಯ ಸಾರಿಗೆ ಸಂಸ್ಥೆ ನೌಕರನಾಗುವ ಮುನ್ನ ಲಾರಿ ಚಾಲಕನಾಗಿದ್ದ ಲೋಕೇಶ್​ಗೆ ಕಾರ್ಖಾನೆಯ ಬಳಿ ಲಾರಿ ಕೆಟ್ಟು ನಿಂತ ಸಮಯದಲ್ಲಿ ಅದೇ ಮಾರ್ಗದಲ್ಲಿ ಹೋಗುತ್ತಿದ್ದ ಗೀತಾ ಪರಿಚಯವಾಗಿದ್ದಳು. ನಂತರ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿ ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದರು.ಇದನ್ನೂ ಓದಿರಿಯಾರಿಗೂ ತಿಳಿಯದಂತೆ ಪ್ರೇಯಸಿಯನ್ನ ಮನೆಯಲ್ಲೇ 10 ವರ್ಷ ಅಡಗಿಸಿಟ್ಟಿದ್ದ ಪ್ರಿಯಕರ! ಆ ಕೋಣೆಯ ರಹಸ್ಯ ಬಯಲಾಗಿದ್ದೇ ರೋಚಕ
ಲೋಕೇಶ್ ರಾಜ್ಯ ಸಾರಿಗೆ ನೌಕರನಾಗಿ ಕೆಲಸಕ್ಕೆ ಸೇರಿದ ಮೇಲೆ ಇಬ್ಬರೂ ಸಾತನೂರಿನ ಯಲವಳ್ಳಿಯಲ್ಲಿ ವಾಸವಾಗಿದ್ದರು. ಇಬ್ಬರೂ ಅನ್ಯೋನ್ಯವಾಗಿದ್ದರು. ಒಂದೂವರೆ ವರ್ಷದ ಹಿಂದೆ ಗೀತಾ ಬೇರೆ ಜಾತಿಗೆ ಸೇರಿದವಳು ಎಂದು ಲೋಕೇಶ್​ಗೆ ಗೊತ್ತಾಗಿದ್ದು, ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಜಗಳವಾಡುತ್ತಿದ್ದರು. ಜೂ.1ರಂದು ಜಗಳವಾಗಿ ಲೋಕೇಶ್ ಗೀತಾ (24)ಳ ಕೆನ್ನೆಗೆ ಹೊಡೆದು, ಹಗ್ಗದಿಂದ ಬಿಗಿದು ಕೊಂದಿದ್ದ. ಬಳಿಕ ಶವವನ್ನು ಯೂರಿಯಾ ಚೀಲದಲ್ಲಿ ತಿಂಬಿಕೊಂಡು ಬೈಕ್​ನಲ್ಲಿ ತನ್ನ ಅಜ್ಜಿಯ ಜಮೀನಿಗೆ ಸಾಗಿಸಿದ್ದ. ಎಳ್ಳು ಬೆಳೆ ಇದ್ದ ಜಮೀನಿನಲ್ಲಿ ಗುಂಡಿ ತೋಡಿ ಶವ ಹೂತಿಟ್ಟು, ನೆಲಸಮ ಮಾಡಿ ಅದರ ಮೇಲೆ ಯಾರಿಗೂ ಅನುಮಾನ ಬಾರದಂತೆ ಎಳ್ಳು ಪೈರನ್ನು ನಾಟಿ ಮಾಡಿದ್ದ. ಮರುದಿನ ಪೊಲೀಸ್ ಠಾಣೆಗೆ ಬಂದು, ಮನೆಯಲ್ಲಿದ್ದ ಹಣ ತೆಗೆದುಕೊಂಡು ಬೇರೊಬ್ಬರೊಂದಿಗೆ ಪತ್ನಿ ನಾಪತ್ತೆಯಾಗಿದ್ದಾಳೆಂದು ದೂರು ನೀಡಿದ್ದ.

ಆದರೆ, ಗೀತಾಳ ಪಾಲಕರು ಲೋಕೇಶನ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಸರ್ಕಲ್ ಇನ್​ಸ್ಪೆಕ್ಟರ್ ಟಿ.ಟಿ. ಕೃಷ್ಣ ಮಾರ್ಗದರ್ಶನದಲ್ಲಿ ಆರೋಪಿ ಲೋಕೇಶ್​(34) ನನ್ನು ವಿಚಾರಣೆಗೊಳಪಡಿಸಿದಾಗ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದು, ಪೊಲೀಸರು ಬಂಧಿಸಿದ್ದಾರೆ. ಶುಕ್ರವಾರ ಬೆಳಗ್ಗೆ 11 ಗಂಟೆಗೆ ಉಪ ವಿಭಾಗಾಧಿಕಾರಿ ಮಂಜುನಾಥ್, ಡಿವೈಎಸ್​ಪಿ ರಮೇಶ್, ತಹಸೀಲ್ದಾರ್ ವಿಶ್ವನಾಥ್, ಸರ್ಕಲ್ ಇನ್​ಸ್ಪೆಕ್ಟರ್ ಟಿ.ಟಿ.ಕೃಷ್ಣರ ಸಮ್ಮುಖದಲ್ಲಿ ಹೂತಿಟ್ಟಿದ್ದ ಶವವನ್ನು ಹೊರತೆಗೆದು ಶವಪರೀಕ್ಷೆ ನಂತರ ಅಂತ್ಯಕ್ರಿಯೆ ಮಾಡಲಾಯಿತು. ಸಾತನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಗಳ ಮದ್ವೆ ತಪ್ಪಿಸಲು ಪ್ರಿಯಕರನೊಂದಿಗೆ ಸೇರಿ ಭಾವಿ ಅಳಿಯನ ತಂದೆಯನ್ನೇ ಕೊಂದ ತಾಯಿ!
ಹೋಟೆಲ್​ಗೆ ಬೀಗ ಹಾಕಿ ಒಳಗಡೆ ವೇಶ್ಯಾವಾಟಿಕೆ! ಪೊಲೀಸರಿಗೆ ಸಿಕ್ಕಿಬಿದ್ದ 8 ಯುವಕರು, ಇಬ್ಬರು ಯುವತಿಯರು
ಯಾರಿಗೂ ತಿಳಿಯದಂತೆ ಪ್ರೇಯಸಿಯನ್ನ ಮನೆಯಲ್ಲೇ 10 ವರ್ಷ ಅಡಗಿಸಿಟ್ಟಿದ್ದ ಪ್ರಿಯಕರ! ಆ ಕೋಣೆಯ ರಹಸ್ಯ ಬಯಲಾಗಿದ್ದೇ ರೋಚಕ
ಬಾವಿಗೆ ಹಾರಿ ಪ್ರಾಣಬಿಟ್ಟ ಗಂಡ, ಮನೆಯ ಮೇಲೆ ನೇಣಿಗೆ ಕೊರಳೊಡ್ಡಿದ ಪತ್ನಿ! ಡೆತ್​ನೋಟ್​ನಲ್ಲಿದೆ ಸಾವಿನ ರಹಸ್ಯ
ಗಂಡನ ಕೊಂದು ಪ್ರಿಯಕರನ ಮನೆಯ ಹೋಮಕುಂಡದಲ್ಲಿ ಶವ ಸುಟ್ಟಿದ್ದ ಪತ್ನಿ: ಭಾಸ್ಕರ್​ ಶೆಟ್ಟಿ ಹಂತಕರಿಗೆ ಶಿಕ್ಷೆ ಪ್ರಕಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + fifteen =
Remember me
