ಬೆಂಗಳೂರು:ಮುಂಗಾರು ಮಳೆ ಜೋರಾಗಿದ್ದು, ಗಗನಚುಕ್ಕಿ-ಭರಚುಕ್ಕಿ ಜಲಪಾತದಲ್ಲಿ ಹಾಲ್ನೊರೆಯಂತೆ ನೀರು ಧುಮ್ಮಿಕ್ಕುತ್ತಿದ್ದು, ರುದ್ರರಮಣೀಯ ದೃಶ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರು ಲಗ್ಗೆ ಇಡುತ್ತಿದ್ದಾರೆ. ಬಹುತೇಕರು ಪ್ರಕೃತಿ ಮಡಿಲಲ್ಲಿ ಒಂದು ದಿನ ಸಮಯ ಕಳೆಯಲು ಹವಣಿಸುತ್ತಿದ್ದಾರೆ. ಇಂಥವರಿಗೆ ಅನುಕೂಲವಾಗಲೆಂದು ಕೆಎಸ್​ಆರ್​ಟಿಸಿ ಟೂರ್​ ಪ್ಯಾಕೇಜ್​ ಘೋಷಿಸಿದ್ದು, ತಲಾ 250 ರೂಪಾಯಿಯಲ್ಲಿ ಗಗನಚುಕ್ಕಿ-ಭರಚುಕ್ಕಿಗೆ ಪ್ರವಾಸ ಮಾಡಬಹುದು.
ನದಿಯಲ್ಲಿ ನೀರು ಹೆಚ್ಚಾಗಿರುವುದನ್ನು ತಿಳಿದ ಪ್ರವಾಸಿಗರು ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳನ್ನು ವೀಕ್ಷಣೆ ಮಾಡಲು ಒಂದು ವಾರದಿಂದಲೇ ಸಾವಿರಾರು ಸಂಖ್ಯೆಯಲ್ಲಿ ಮಂದಿ ಆಗಮಿಸುತ್ತಿದ್ದರು. ಕೆಎಸ್​ಆರ್​ಟಿಸಿ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ರಜಾ ದಿನಗಳಲ್ಲಿ ಒಂದು ದಿನದ ಗಗನಚುಕ್ಕಿ- ಭರಚುಕ್ಕಿ ಟೂರ್​ ಪ್ಯಾಕೇಜ್​ ಆಯೋಜಿಸಲಾಗಿದೆ.
ಶನಿವಾರ ಮತ್ತು ಭಾನುವಾರ ಬೆಳಗ್ಗೆ 6.30ಕ್ಕೆ ಬೆಂಗಳೂರಿನ ಸ್ಯಾಟಲೈಟ್​ ನಿಲ್ದಾಣದಿಂದ ಬಸ್​ ಹೊರಡಲಿದೆ. ಸೋಮನಾಥಪುರ, ತಲಕಾಡು, ಮಧ್ಯರಂಗ, ಗಗನಚುಕ್ಕಿ-ಭರಚುಕ್ಕಿ ಜಲಪಾತಗಳನ್ನು ವೀಕ್ಷಣೆ ಮಾಡಿಕೊಂಡು ಬರಬಹುದು. ವಯಸ್ಕರಿಗೆ 400 ರೂ. ಹಾಗೂ ಮಕ್ಕಳಿಗೆ 250 ರೂ. ಪ್ಯಾಕೇಜ್​ ದರ ನಿಗದಿಪಡಿಸಲಾಗಿದೆ.
ಜೋಗ ಜಲಪಾತ ವೀಕ್ಷಣೆಗೆ ಪ್ಯಾಕೇಜ್​:“ಬೆಂಗಳೂರು- ಜೋಗ ಜಲಪಾತ’ ಮಾರ್ಗ ಶಿವಮೊಗ್ಗ, ಸಾಗರ ಎಸಿ ರಹಿತ ಸ್ಲೀಪರ್​ ವಾಹನಗಳನ್ನು ವಾರಾಂತ್ಯದ ದಿನಗಳಲ್ಲಿ ಬಿಡಲಾಗಿದೆ. ಎರಡು ದಿನದ ಟೂರ್​ ಪ್ಯಾಕೇಜ್​ ಜು.22ರಿಂದ ಆರಂಭವಾಗಲಿದ್ದು, ವಯಸ್ಕರಿಗೆ 2,300 ರೂ. ಹಾಗೂ ಮಕ್ಕಳಿಗೆ 2,100 ರೂ. ದರ ನಿಗದಿಮಾಡಲಾಗಿದೆ. ಶುಕ್ರವಾರ ರಾತ್ರಿ 10.30ಕ್ಕೆ ಬೆಂಗಳೂರಿನಿಂದ ಹೊರಟು ಶನಿವಾರ ಬೆಳಗ್ಗೆ ವರದಹಳ್ಳಿ, ಇಕ್ಕೇರಿ, ಕೆಳದಿ, ಜೋಗ ಜಲಪಾತ, ಸಾಗರ ಮತ್ತು ಶಾಪಿಂಗ್​ ಮಾಡಲು ಸಮಯ ನೀಡಿ ರಾತ್ರಿ 10 ಗಂಟೆಗೆ ಸಾಗರದಿಂದ ಬೆಂಗಳೂರಿಗೆ ವಾಪಸ್​ ಹೊರಡಲಿದೆ.
ಚಿಕ್ಕಬಳ್ಳಾಪುರದ ಸರ್ಕಾರಿ ಕಾಲೇಜಿನಲ್ಲಿ ವಾಮಾಚಾರ? ಪ್ರಾಂಶುಪಾಲರ ಕೊಠಡಿಯಲ್ಲಿ ಕೆಂಪು ದಾರ-ಬೊಂಬೆ ಪತ್ತೆ!

ಮೈಸೂರು-ತಾಳಗುಪ್ಪ ಪ್ಯಾಸೆಂಜರ್​ ರೈಲು ಸಂಚಾರ ಜು.25ರಿಂದ ಪುನರಾರಂಭ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 10 =
Remember me
