ಕುಣಿಗಲ್​:ತುಮಕೂರು ಜಿಲ್ಲೆ ಕುಣಿಗಲ್​ ತಾಲೂಕಿನ ಬಿದನಗೆರೆ ಬಸವೇಶ್ವರ ಮಠದಲ್ಲಿ ನಿರ್ಮಾಣವಾಗಿರುವ ವಿಶ್ವದಲ್ಲೇ ಪ್ರಥಮ ಎನ್ನಲಾದ 161 ಅಡಿ ಎತ್ತರದ ಪಂಚಮುಖಿ ಆಂಜನೇಯಸ್ವಾಮಿ ವಿಗ್ರಹವನ್ನು ಶ್ರೀರಾಮ ನವಮಿ ದಿನವಾದ ಇಂದು ಸಿಎಂ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಿದರು.
ಬಳಿಕ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಎಂ, ಈ ಕ್ಷೇತ್ರಕ್ಕೆ ದೊಡ್ಡ ಶಕ್ತಿಯಿದೆ. ಹಾಗಾಗಿ ಇಷ್ಟು ದೊಡ್ಡ ವಿಗ್ರಹ ಶ್ರೀಕ್ಷೇತ್ರದಲ್ಲಿ ನಿರ್ಮಾಣವಾಗಿದೆ. ಲೋಕ ಕಲ್ಯಾಣಕ್ಕಾಗಿ ಹನುಮ ಪಂಚಮುಖಿ ಅವತಾರದಲ್ಲಿ ಬಂದಿದ್ದರು. ವಿಶ್ವದಲ್ಲಿಯೇ ಅತೀ ಎತ್ತರದ ವಿಗ್ರಹ ನಮ್ಮ ರಾಜ್ಯದಲ್ಲಿ ನಿರ್ಮಾಣವಾಗಿದೆ, ಶಿಲ್ಪಿಗಳು ಅದ್ಭುತ ವಿಗ್ರಹ ನಿರ್ಮಿಸಿದ್ದಾರೆ. ಪಂಚಮುಖಿ ಆಂಜನೇಯನ ಆಶೀರ್ವಾದದಿಂದ ಕನ್ನಡ ರಾಜ್ಯಕ್ಕೆ ಒಳಿತಾಗಲಿದೆ. ರಾಮನವಮಿ ದಿನ ಪವಿತ್ರ ಕಾರ್ಯಕ್ರಮ ನಡೆಯುತ್ತಿದೆ. ಅಭಿವೃದ್ಧಿ ಕಾರ್ಯಕ್ರಮ ನೋಡಿದರೆ ಕ್ಷೇತ್ರದ ಶಕ್ತಿ ಮತ್ತು ಭಕ್ತರ ದೊಡ್ಡ ಮನಸ್ಸು ಗೊತ್ತಾಗುತ್ತೆ. ಧನಂಜಯ ಗುರೂಜಿ ಅವರ ಕಾರ್ಯ ಶ್ಲಾಘನೀಯ. ಎಲ್ಲರಿಗೂ ಶುಭವಾಗಲಿ ಎಂದು ಆಶಿಸಿದರು.

161 ಅಡಿ ಎತ್ತರದ ಪಂಚಮುಖಿ ಆಂಜನೇಯಸ್ವಾಮಿ ವಿಗ್ರಹ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಸಚಿವ ಅಶ್ವತ್ ನಾರಾಯಣ, ಕೋಲಾರ ಸಂಸದ ಮುನಿಸ್ವಾಮಿ, ಶಾಸಕರಾದ ಡಾ.ಎಚ್.ಡಿ.ರಂಗನಾಥ್, ರಾಜುಗೌಡ, ಸ್ಯಾಂಡಲ್​ವುಡ್​ನ ಹಿರಿಯ ನಟಿ ತಾರಾ, ಪಟ್ಟನಾಯಕನಹಳ್ಳಿ ಸ್ಪಟಿಕಪುರಿ ಮಠದ ಶ್ರೀ ನಂಜಾವಧೂತ ಸ್ವಾಮೀಜಿ, ಹರಿಹರ ಪಂಚಮಸಾಲಿ ಮಠದ ಶ್ರೀ ವಚನಾನಂದ ಸ್ವಾಮೀಜಿ, ಮಾಜಿ ಸಚಿವ ಡಿ.ನಾಗರಾಜಯ್ಯ, ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಮಾಜಿ ಶಾಸಕ ಬಿ.ಸುರೇಶ್ ಗೌಡ, ಬಿಜೆಪಿ ಮುಖಂಡರೂ ಆದ, ಪಿಕಾರ್ಡ್​ ಬ್ಯಾಂಕ್​ ಅಧ್ಯಕ್ಷ ಡಿ.ಕೃಷ್ಣಕುಮಾರ್​, ಬಿಜೆಪಿ ಮುಖಂಡ ಎಚ್​.ಡಿ.ರಾಜೇಶ್​ಗೌಡ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.

ಕುಣಿಗಲ್​ ಪಟ್ಟಣದಿಂದ ಭಕ್ತಿನಗರ ಬಿದನಗೆರೆವರೆಗೂ ಪಂಚಮುಖಿ ಆಂಜನೇಯ ವಿಗ್ರಹದ ಬ್ಯಾನರ್​, ಕೇಸರಿ ಬಾವುಟ ರಾರಾಜಿಸುತ್ತಿವೆ. ಶ್ರೀರಾಮ ನಾಮ ಸ್ಮರಣೆ ಮೊಳಗುತ್ತಿದೆ. ರಾಜ್ಯದ ಹಲವು ಜಿಲ್ಲೆಗಳಿಂದ ಹಾಗೂ ಹೊರ ರಾಜ್ಯದಿಂದಲೂ ಭಕ್ತಸಾಹರವೇ ಶೀಕ್ಷೇತ್ರಕ್ಕೆ ಹರಿದು ಬರ್ತಿದೆ. ಎಲ್ಲರಿಗೂ ಉಪಹಾರ, ಊಟ, ಕುಡಿಯುವ ನೀರು, ಮಜ್ಜಿಗೆ, ಪಾನಕ, ಶೌಚಗೃಹ ವ್ಯವಸ್ಥೆ ಸೇರಿ ಮೂಲಸೌಕರ್ಯವನ್ನು ಕ್ಷೇತ್ರದ ವತಿಯಿಂದ ಕಲ್ಪಿಸಲಾಗಿದೆ.

ಕ್ಷೇತ್ರದ ಹಿನ್ನೆಲೆ:21 ವರ್ಷದ ಹಿಂದೆ ಡಾ.ಧನಂಜಯ ಗುರೂಜಿ ಅವರು ಬಿದನಗೆರೆಯ ಗುಡಿಸಲಿನಲ್ಲಿ ಸತ್ಯ ಶನೇಶ್ವರ ಸ್ವಾಮಿ ಆರಾಧನೆ ಪ್ರಾರಂಭಿಸಿದರು. ಬಳಿಕ ಉದ್ಭವ ಬಸವಣ್ಣ, ಶನಿಶಿಗ್ನಾಪುರ ವಿಗ್ರಹಗಳನ್ನು ಪ್ರತಿಷ್ಠಾಪಿಸುವ ಮೂಲಕ ನಿತ್ಯ ಪೂಜೆ ನೆರವೇರಿಸುತ್ತಿದ್ದಾರೆ. ಕ್ಷೇತ್ರಕ್ಕೆ ದೇಶ-ವಿದೇಶಗಳಿಂದ ಭಕ್ತರು ಆಗಮಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸುತ್ತಿದ್ದಾರೆ, ಕ್ಷೇತ್ರದಲ್ಲಿ ವೃದ್ಧಾಶ್ರಮ, ಅನಾಥಾಶ್ರಮ, ಉಚಿತ ಆರೋಗ್ಯ ಶಿಬಿರ, ಸರಳ ವಿವಾಹ, ಬಡವರಿಗೆ ಧನಸಹಾಯ, ವಸತಿ ಸೌಲಭ್ಯ, ದಾಸೋಹ ಸೇರಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ.
ಕೇಸರಿ ಶಾಲು ಧರಿಸಿ ಶ್ರೀರಾಮನವಮಿ ಆಚರಿಸಿದ ಮುಸ್ಲಿಮರು! ಪಾನಕ ಹಂಚಿ ನಾವೆಲ್ಲರೂ ಒಂದೇ ಎಂಬ ಸಂದೇಶ ರವಾನೆ

ಬೆಂಗ್ಳೂರಲ್ಲಿ ಹಾಡಹಗಲೇ ಮಗನಿಗೆ ಬೆಂಕಿ ಇಟ್ಟು ಕೊಂದ ತಂದೆ! ಅಪ್ಪಾ.. ಪ್ಲೀಸ್​ ಬೇಡಪ್ಪ… ಅಂದ್ರೂ ಕರಗಲಿಲ್ಲ ಕ್ರೂರಿ ಮನಸ್ಸು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
