ಹುಲಿಯೂರುದುರ್ಗ(ಕುಣಿಗಲ್​):ತವರು ಮನೆಗೆ ಬಂದಿದ್ದ ಮಹಿಳೆಯೊಬ್ಬರು ತನ್ನ ಮಗನೊಂದಿಗೆ ಬೈಕ್​ನಲ್ಲಿ ವಾಪಸ್​ ಗಂಡನ ಮನೆಗೆ ಹೊರಟಿದ್ದಳು. ಅತ್ತ ಗಂಡನೂ ಹೆಂಡತಿ-ಮಗನಿಗಾಗಿ ಕಾಯುತ್ತಿದ್ದ. ಆದರೆ, ಮಾರ್ಗಮಧ್ಯೆ ಸರಗಳ್ಳರ ರೂಪದಲ್ಲಿ ಎದುರಾದ ಮೃತ್ಯು ಆ ಮಹಿಳೆಯ ಪ್ರಾಣ ಹೊತ್ತೊಯ್ದ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕು ಹುಲಿಯೂರುದುರ್ಗದ ಮೇದರದೊಡ್ಡಿ ಬಳಿ ಸೋಮವಾರ ಬೆಳಗ್ಗೆ ಸಂಭವಿಸಿದೆ.
ಚನ್ನಪಟ್ಟಣ ತಾಲೂಕು ನಾಗವಾರ ಗ್ರಾಮದ ವಸಂತಾ ಎಂಬುವವರು ಇತ್ತೀಚಿಗೆ ಕುಣಿಗಲ್​ ತಾಲೂಕಿನ ಹಂದಲಗೆರೆಯ ತವರು ಮನೆಗೆ ಹೋಗಿದ್ದರು. ಲಾಕ್​ಡೌನ್​ ಸಡಿಲಗೊಂಡ ಹಿನ್ನೆಲೆ ನಿನ್ನೆ ತನ್ನ ಮಗನನೊಂದಿಗೆ ಬೈಕ್​ನಲ್ಲಿ ಹಿಂಬದಿ ಕೂತು ಗಂಡನ ಮನೆಗೆ ಹೋಗುತ್ತಿದ್ದರು. ತುಮಕೂರು-ರಾಮನಗರ ಜಿಲ್ಲಾ ಗಡಿ ಪ್ರದೇಶ ಮೇದರದೊಡ್ಡಿ ಬಳಿ ಬೈಕ್​ನಲ್ಲಿ ಬಂದ ಕಳ್ಳರಿಬ್ಬರು ರಸ್ತೆಯಲ್ಲಿ ಯಾರೂ ಇಲ್ಲದ್ದನ್ನು ನೋಡಿ ಹಿಂಬದಿಯಿಂದ ಬಂದು ವಸಂತಾರ ಕುತ್ತಿಗೆಗೆ ಕೈ ಹಾಕಿ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಕಳ್ಳರು ಸರ ಎಳೆಯುವಾಗ ಆಯತಪ್ಪಿ ಬೈಕ್​ನಿಂದ ಕೆಳಗೆ ಬಿದ್ದ ವಸಂತಾ(38) ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇದಾದ ಕೆಲವೇ ಗಂಟೆಯಲ್ಲಿ ರಾಮನಗರ ಗ್ರಾಮಾಂತರ ವ್ಯಾಪ್ತಿಯ ಅಕ್ಕೂರು ಗ್ರಾಮದಲ್ಲೂ ಸರಗಳ್ಳರು ತೋಟಕ್ಕೆ ತೆರಳುತ್ತಿದ್ದ ವೆಂಕಟಲಕ್ಷ್ಮಮ್ಮ (55) ಎಂಬುವವರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಎಗರಿಸಿದ್ದಾರೆ. ಆ ಮಹಿಳೆಯೂ ಕೆಳಗೆ ಬಿದಿದ್ದು, ಅದೃಷ್ಟವಶಾತ್​ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಾವಿಗೂ 4 ದಿನ ಮೊದಲೇ ಸಂಚಾರಿ ವಿಜಯ್​ ಬರೆದಿದ್ದ ಈ ಬರಹ ಓದಿದ್ರೆ ಕಣ್ಣು ತುಂಬಿ ಬರುತ್ತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 4 =
Remember me
