ತುಮಕೂರು:ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗೋದು ಖಚಿತ. ಅವರು ಮುಖ್ಯಮಂತ್ರಿ ಆದ್ರೆ ಕುಣಿಗಲ್​ಗೆ ನಾನೇ ಮುಖ್ಯಮಂತ್ರಿ ಎಂದಿದ್ದ ಕುಣಿಗಲ್ ಕ್ಷೇತ್ರದ ಶಾಸಕ ಡಾ. ಎಚ್​.ಡಿ.ರಂಗನಾಥ್, ಇದೀಗ ತಮ್ಮ ಹೇಳಿಕೆಯನ್ನೇ ಬದಲಾಯಿಸಿದರು.
ನಗರದ ಜಿಪಂ ಕಚೇರಿಯಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಡಾ.ರಂಗನಾಥ್​, ಕುಣಿಗಲ್ ಕ್ಷೇತ್ರದ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಬರಲಿದೆ ಎಂದು ಹೇಳುವಾಗ ಡಿ.ಕೆ.ಶಿವಕುಮಾರ್​ರ ಹೇಸರನ್ನು ಹೇಳಿದ್ದೇ ಅಷ್ಟೆ. ಸಿದ್ದರಾಮಯ್ಯ ಸಿಎಂ ಆದರೂ ನಮಗೇನು ತೊಂದರೆಯಿಲ್ಲ. ಬಿಜೆಪಿ ಸರ್ಕಾರದಲ್ಲಿ ಕುಣಿಗಲ್ ತಾಲೂಕಿಗೆ ಭಾರೀ ಅನ್ಯಾಯವಾಗಿದೆ. ಕ್ಷೇತ್ರಕ್ಕೆ ಒಂದು ಸಾವಿರ ಕೋಟಿ ಅನುದಾನ ನಷ್ಟವಾಗಿದೆ. ಸರ್ಕಾರ ತಾರತಮ್ಯ ಮಾಡುತ್ತಿದೆ. ಈ ನೋವನ್ನು ವ್ಯಕ್ತಪಡಿಸುತ್ತಿದ್ದೇನೆ. ರೈತರಿಗೆ ಬೇಕಿರುವುದು ನೀರು, ಭೂಮಿ, ರಸ್ತೆ. ‌614 ಕೋಟಿ ರೂ. ಅನುದಾನವನ್ನು ಈ ಸರ್ಕಾರ ಕಸಿದುಕೊಂಡಿದೆ. ಈ ನೋವಿನಿಂದಲೇ ನಾನು ಆ ರೀತಿ ಹೇಳಿದ್ದು. ಕಳೆದ ಬಾರಿ ಕಾಂಗ್ರೆಸ್ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಅಭಿವೃದ್ಧಿ ದೃಷ್ಟಿಯಿಂದ ಮುಂದೆ ಕಾಂಗ್ರೆಸ್ ಸರ್ಕಾರ ಬರುತ್ತದೆ. ‌ಕುಣಿಗಲ್​ಗೆ ನಾನೇ ಸಿಎಂ ಅಂದಿದ್ದು ನಿಜ ಎಂದರು.
ಕಾಂಗ್ರೆಸ್​ನಲ್ಲಿ ಮುಖ್ಯಮಂತ್ರಿಯಾಗಲು ಮೂರ್ನಾಲ್ಕು ಜನರ ಹೆಸರಿದೆ. ಮಾತಿನ ಭರದಲ್ಲಿ ಡಿ.ಕೆ.ಶಿವಕುಮಾರ್ ಹೆಸರು ಬಂತು. ಮುಖ್ಯಮಂತ್ರಿ ಯಾರೇ ಆದರೂ ಕುಣಿಗಲ್​ನಲ್ಲಿ ಅಭಿವೃದ್ಧಿಯಾಗಲಿದೆ ಎಂದರು.
ಕುಣಿಗಲ್ ತಾಲೂಕಿನ ಹಳ್ಳಿಯೊಂದರಲ್ಲಿ ರಸ್ತೆ ಸಮಸ್ಯೆ ಬಗ್ಗೆ ಹೇಳಿಕೊಂಡ ಜನರಿಗೆ ಸಮಸ್ಯೆ ಬಗೆಹರಿಸುವ ಭರವಸೆ ನೀಡುತ್ತಾ ಡಾ.ಎಚ್.ಡಿ.ರಂಗನಾಥ್, ”ನಿಮಗೆಲ್ಲಾ ಸವಾಲು ಬರುತ್ತದೆ. ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವಂತೆ ಕಾಂಗ್ರೆಸ್​ಗೆ ಮತ ಹಾಕಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾಂಗ್ರೆಸ್​ಗೆ ಬೆಂಬಲ ಕೊಡಿ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆದ ಬಳಿಕ ಖಂಡಿತಾ ಕುಣಿಗಲ್ ಅಭಿವೃದ್ಧಿ ಆಗುತ್ತದೆ. ಅವರು ಸಿಎಂ ಆದರೆ ಕುಣಿಗಲ್​ಗೆ ನಾನೇ ಮುಖ್ಯಮಂತ್ರಿ ಆದಂತೆ. ನಿಮ್ಮ ಆಶೀರ್ವಾದ ನಮ್ಮ‌ ಮೇಲಿರಲಿ. ನಿಮ್ಮೂರಿಗೆ ರಸ್ತೆ ಸೇರಿದಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡುವೆ” ಎಂದು ರಂಗನಾಥ್ ಹೇಳಿರುವ ವಿಡಿಯೋ ವೈರಲ್ ಆಗಿತ್ತು.
ಎಸ್​ಪಿಎಂ ಬಗ್ಗೆ ಮಾತಾಡಲ್ಲ:ಕುಣಿಗಲ್ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯುತ್ತೇನೆ ಎಂದು ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಘೋಷಿಸಿದ್ದಾರೆ. ಈ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಾ.ರಂಗನಾಥ್, ”ಮುದ್ದಹನುಮೇಗೌಡರು ಹಿರಿಯರು. ಅವರ ಬಗ್ಗೆ ನಾನು ಮಾತಾಡಲ್ಲ. ನಾಲ್ಕು ವರ್ಷದಿಂದ ನನಗೆ ಕೊಟ್ಟ ಜವಬ್ದಾರಿಯನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ವರಿಷ್ಠರು, ಹಿರಿಯರು, ಪಕ್ಷದ ನಾಯಕರು, ಮತದಾರರ ಆದೇಶ ಶಿರಸಾವಹಿಸಿ ಪಾಲಿಸುತ್ತೇನೆ” ಎಂದರು.
ರಜೆ ಬೇಕಂದ್ರೆ ಲಾಡ್ಜ್​ಗೆ ಬಂದು ಬಟ್ಟೆ‌ ಬಿಚ್ಚಬೇಕಂತೆ… ಕೊಪ್ಪಳದ ಸರ್ಕಾರಿ ಕಚೇರಿ ಮಹಿಳಾ ಸಿಬ್ಬಂದಿಯ ಕಣ್ಣೀರ ಕಥೆ

ನಾನು- ಅನಂತರಾಜು ಇಬ್ಬರೂ 6 ವರ್ಷದಿಂದ ಲಿವ್​ ಇನ್​ ರಿಲೇಶನ್​ಶಿಪ್​ನಲ್ಲಿ ಇದ್ವಿ… ಪೊಲೀಸ್​ ಠಾಣೆ ಮುಂದೆ ರೇಖಾ ಕಣ್ಣೀರು

ಅನಂತರಾಜು ಡೆತ್​ ಕೇಸ್​: ಬ್ಯಾಡರಹಳ್ಳಿ ಪೊಲೀಸ್​ ಠಾಣೆ ಮುಂಭಾಗವೇ ಬಸ್​ಗೆ ಸಿಲುಕಿ ಆತ್ಮಹತ್ಯೆಗೆ ಯತ್ನಿಸಿದ ಪ್ರೇಯಸಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
