ತುಮಕೂರು:ನನಗೆ ನಾಲ್ಕು ಜನ ಮಕ್ಕಳು, ಇಬ್ಬರು ಮಕ್ಕಳು ಸಾವನಪ್ಪಿದ್ದಾರೆ. ಇದ್ದೊಬ್ಬ ಮಗ ಶಂಕ್ರಪ್ಪ ಕೂಡ ಸತ್ತಿದ್ದಾನೆ, ಇರೋ ಒಬ್ಬ ಮಗಳು ಮಾನಸಿಕ ಅಸ್ವಸ್ಥೆ… ಎಂದು ಕಣ್ಣೀರಿಟ್ಟ ಶಂಕರಪ್ಪರ ತಾಯಿ ರಂಗಮ್ಮ, ನನ್ನ ಮಗ ಶಂಕ್ರಪ್ಪನ ಸಾವಿಗೆ ಸೊಸೆ ಮೇಘನಾಳೇ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ.
5 ತಿಂಗಳ ಹಿಂದಷ್ಟೇ ತನಿಗಿಂತ 20 ವರ್ಷ ಕಿರಿಯ ವಯಸ್ಸಿನ ಮೇಘನಾಳನ್ನು ಮದುವೆಯಾಗಿ ರಾಜ್ಯದ ಗಮನ ಸೆಳೆದಿದ್ದ ರೈತ ಶಂಕರಪ್ಪ, ಇಂದು(ಮಂಗಳವಾರ) ಬೆಳಗ್ಗೆ ದುರಂತ ಅಂತ್ಯಕಂಡಿದ್ದಾರೆ. ಮಗನ ಆತ್ಮಹತ್ಯೆಗೆ ಸೊಸೆಯೇ ಕಾರಣ ಎಂದು ಹುಲಿಯೂರುದುರ್ಗ ಪೊಲೀಸ್​ ಠಾಣೆಗೆ ಅತ್ತೆ ದೂರು ನೀಡಿದ್ದಾಳೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಂಗಮ್ಮ, ನನ್ನ ಸೊಸೆ ನನಗೆ ಅಡುಗೆ ಮಾಡಿಕೊಡುತ್ತಿರಲಿಲ್ಲ. ನಾನು ಬೇರೆ ಅಡುಗೆ ಮಾಡಿಕೊಂಡಿದ್ದೆ. ಅವಳಿಗೆ ದುಡ್ಡು ಹಣ ಬೇಕಿತ್ತಂತೆ. ಮೇಘನಾ ಜತೆ ನನ್ನ ಮಗನ ಮದುವೆ ಫಿಕ್ಸ್​ ಆದಾಗ ನನಗೆ ವಿಷ್ಯವೇ ಗೊತ್ತಿರಲಿಲ್ಲ. ರಾಜಣ್ಣ ಎಂಬಾತ ನನ್ನ ಮಗನಿಗೆ ಹೆಣ್ಣು ತೋರಿಸಿದ್ದ. ಹೊನಸಿಗೇರೆ ದೊಡ್ಡಿ ಹುಚ್ಚಮಾರಮ್ಮ ದೇವಸ್ಥಾನದ ಬಳಿ ಮದುವೆ ಆಗ್ತಿದೆ ಬಾ ಎಂದು ನನ್ನನ್ನು ಕರೆದುಕೊಂಡು ಹೋಗಿದ್ದರು. ನಾನು ಮದ್ವೆಗೆ ಒಪ್ಪಿಕೊಂಡಿರಲಿಲ್ಲ. ಈ ಹಿಂದೆ ಮಗನಿಗೆ ಬಹಳಷ್ಟು ಹೆಣ್ಣು ನೋಡಿದ್ದೋ, ಮದುವೆ ಆಗಿರಲಿಲ್ಲ. ನನ್ನ ಮಗ ನನ್ನನ್ನು ಬಿಟ್ಟು ಇರುತ್ತಿರಲಿಲ್ಲ. ಮದ್ವೆ ಆದ್ಮೇಲೆ ಕಾಟ ಕೊಡ್ತಿದ್ಳು… ಎಂದು ದೂರಿನ ಸುರಿಮಳೆಯನ್ನೇ ಸುರಿಸಿದರು.
ಮಗನ ಜೊತೆಗೆ ಸರಿಯಾಗಿ ಸಂಸಾರ ಮಾಡುತ್ತಿರಲಿಲ್ಲ.‌ ಆಕೆಯ ಬಟ್ಟೆಯನ್ನು ನಾನೇ ಹೊಗೆಯಬೇಕಿತ್ತು. ಊರಿನವರು ಬುದ್ಧಿವಾದ ಹೇಳಿದ್ರೂ ಕೇಳ್ತಿರಲಿಲ್ಲ. ಮಗನಿಗೆ ನಾನು ಬುದ್ಧಿವಾದ ಹೇಳಿದ್ರೆ ಸತ್ತು ಹೋಗುತ್ತೇನೆ ಎನ್ನುತ್ತಿದ್ದ. ಆಸ್ತಿ, ಒಡವೆ ಸಿಗುತ್ತೆ ಅಂತ ಮದುವೆಯಾಗಿದ್ದಳು. ನನ್ನ ಬಳಿ ಎರಡು ಬಾರಿ ಒಂದು ಲಕ್ಷ ರೂ., 20 ಸಾವಿರ ರೂ. ಪಡೆದುಕೊಂಡಿದ್ದಳು. ನಾನು ನಿನ್ನೆ(ಸೋಮವಾರ) ಎಮ್ಮೆ ಹಿಡಿದುಕೊಂಡು ಬರುತ್ತಿದ್ದೆ. ಆಗ ಸೊಸೆ ನಾಯಿ ಬಿಟ್ಟಳು. ಎಮ್ಮೆ ಗಾಬರಿಯಾಯ್ತು, ನಾನು ಬೀಳುತ್ತಿದ್ದೆ. ಆ ಸಿಟ್ಟಲ್ಲಿ ಸೊಸೆಗೆ ನಾನು ಬೈದೆ. ಈ ವಿಚಾರವಾಗಿ ಜಗಳ ಶುರುವಾಯ್ತು. ನನ್ನ ಮಗನಿಗೆ ದೂರು ಹೇಳಿದೆ. ಆಗ ನನ್ನನ್ನು ಮನೆಯಿಂದ ಹೊರಗೆ ತಳ್ಳುವಂತೆ ಸೊಸೆ ಹೇಳಿದ್ಲು. ಹೆಂಡತಿ ಮಾತು ನಂಬಿ ಹೆತ್ತ ತಾಯಿಯನ್ನು ನನ್ನ ಮಗ ಹೊಡೆಯಲು ಬಂದ. ಕೊನೆಗೆ ಹೇಗಾದ್ರೂ ಜಗಳವಾಡಿ ಅಂತ ಸಂಜೆ ಮನೆಯಿಂದ ಹೊರ ಹೋದ. ಮಂಗಳವಾರ ಬೆಳಗ್ಗೆ ನಾನಿನ್ನೂ ಮಲಗಿದ್ದೆ. ಆಗಲೇ ನನ್ನ ಮಗನ ಸಾವಿನ ಸುದ್ದಿ ಬಂತು… ಇದಕ್ಕೆಲ್ಲ ನನ್ನ ಸೊಸೆಯೇ ಕಾರಣ… ಎಂದು ಮೃತರ ತಾಯಿ ರಂಗಮ್ಮ ದೂರಿದ್ದಾರೆ.
ಕೌಟುಂಬಿಕ ಜಗಳ ಹೊರತು ಪಡಿಸಿ ಮಗನ ಸಾವಿಗೆ ಬೇರೆ ಕಾರಣ ಇಲ್ಲ. ಗಂಡ- ಹೆಂಡತಿ ನಡುವಿನ ಜಗಳವೇ ಶಂಕ್ರಪ್ಪನ್ನ ಆತ್ಮಹತ್ಯೆಗೆ ಕಾರಣ ಎಂದು ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ರಂಗಮ್ಮ ಎಫ್​ಐಆರ್​ ದಾಖಲಿಸಿದ್ದಾರೆ.
ನಾನೀಗ ಗರ್ಭಿಣಿ, ನನ್ನನ್ನು ತಬ್ಬಲಿ ಮಾಡಿಬಿಟ್ರು… ಮನದ ನೋವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಮೇಘನಾ

ಡೆತ್​ನೋಟ್​ ಬರೆದಿಟ್ಟು ಶಂಕರಪ್ಪ ಆತ್ಮಹತ್ಯೆ! ಮದ್ವೆಯಾದ 5 ತಿಂಗಳಲ್ಲೇ ದುರಂತ, ಪತ್ನಿ ಮೇಘನಾಳ ಗೋಳಾಟ ನೋಡಲಾಗ್ತಿಲ್ಲ…

ಮುಖ್ಯ ಶಿಕ್ಷಕ ಹೃದಯಾಘಾತದಿಂದ ಸಾವು: ಎಸ್ಸೆಸ್ಸೆಲ್ಸಿ ಪರೀಕ್ಷೆ ಕಾರ್ಯ ಮುಗಿಸಿ ಮನೆಗೆ ತೆರಳುವಾಗ ದುರಂತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × three =
Remember me
