ಬೆಳಗಾವಿ:16 ದಿನಗಳಿಂದ ಬೆಳಗಾವಿ ಗಾಲ್ಫ್ ಮೈದಾನ ಹಾಗೂ ಜಾಧವ ನಗರದ ಪೊದೆಯೊಳಗೆ ಹೋಗಿದೆ ಎನ್ನಲಾದ ಚಿರತೆ ಪತ್ತೆಗೆ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸುಮಾರು 300 ಸಿಬ್ಬಂದಿ ಶಸ್ತ್ರ ಸಜ್ಜಿತವಾಗಿ ಶುಕ್ರವಾರ ಬೃಹತ್​ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.
ಕಳೆದ 15 ದಿನಗಳಿಂದ ಅರಣ್ಯ ಇಲಾಖೆಯ 50 ಸಿಬ್ಬಂದಿ ಬೋನಿಟ್ಟು ಪ್ರಯಾಸಪಟ್ಟರೂ ಚಿರತೆ ಕುರುಹು ಪತ್ತೆಯಾಗಿಲ್ಲ‌. ಹೀಗಾಗಿ ಪೊಲೀಸ್ ಇಲಾಖೆಯ 200ಕ್ಕೂ ಹೆಚ್ಚು ಸಿಬ್ಬಂದಿಯ ಸಹಾಯ ಪಡೆದು ಏಕಕಾಲಕ್ಕೆ ಅರಣ್ಯ ಇಲಾಖೆ ಕಾರ್ಯಾಚರಣೆ ಶುರು ಮಾಡಿದೆ.

ಕಾರ್ಯಾಚರಣೆ ಪೂರ್ವಭಾವಿಯಾಗಿ ಬೆಳಗಾವಿ ಕ್ಲಬ್ ಆವರಣದಲ್ಲಿ ಸಿಬ್ಬಂದಿಗೆ ಡಿಸಿಪಿ ರವೀಂದ್ರ ಗಡಾದೆ, ಎಸಿಪಿ ನಾರಾಯಣ ಭರಮನಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಮಾರ್ಗದರ್ಶನ ನೀಡಿದರು.

ಪೋಲೀಸ್ ಇಲಾಖೆ ಸಿಡಿಮದ್ದುಗಳ ಸಹಿತ ಕಾರ್ಯಾಚರಣೆ ಮಾಡುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿ ಮದ್ದೇರುವ ಗುಂಡು ಹೊಡೆದು ಚಿರತೆಯನ್ನು ಅಸ್ವಸ್ಥಗೊಳಿಸಿ ಬಲೆಗೆ ಹಾಕಲು ಸ್ಪೆಶಲ್ ಶೂಟರ್​ಗಳು ಸಹ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.

ಗಾಲ್ಫ್ ಪ್ರದೇಶ, ಹನುಮಾನಗರ, ಕುವೆಂಪು ನಗರ, ದೂರದರ್ಶನ ನಗರ, ಜಾಧವ ನಗರ ಹಾಗೂ ಕ್ಯಾಂಪ್ ಪ್ರದೇಶದ ಜನರು ಮನೆಯಿಂದ ಹೊರಗೆ ಬರಬಾರದೆಂದು ಎಚ್ಚರಿಕೆ ನೀಡಲಾಗಿದೆ.
‘ಜೊತೆ ಜೊತೆಯಲಿ’ ಧಾರಾವಾಹಿ ತಂಡದಲ್ಲಿ ಕಿರಿಕ್​: ಕಿರುತೆರೆಯಿಂದಲೇ ನಟ ಅನಿರುದ್ಧ್ ಬ್ಯಾನ್?

ದೆಹಲಿಯ ಕರ್ನಾಟಕ ಭವನದ ಕಾರು ಚಾಲಕ ಆತ್ಮಹತ್ಯೆ! ಮಂಡ್ಯ ಮೂಲದ ಯುವಕನ ಸಾವಿಗೆ ಕಾರಣ?

ಬೆಳಗಾವಿಯಲ್ಲಿ ಭದ್ರತಾ ಪಡೆಯ ಎಕೆ-47 ರೈಫಲ್​ಗಳು ಕಳವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × five =
Remember me
