ಚಿತ್ರದುರ್ಗ:ನಮ್ಮ ಮೈ ಮೇಲೆ ದೇವರು ಬರುತ್ತೆ. ಈ ಬಾಲಕಿಗೆ ದೆವ್ವ ಹಿಡಿದಿದೆ. ಅದನ್ನು ಬಿಡಿಸ್ತೀವಿ ಎನ್ನುತ್ತಾ ಮೂರು ವರ್ಷದ ಬಾಲಕಿಗೆ ಬೆತ್ತದಿಂದ ಮನಸೋಇಚ್ಛೆ ಹೊಡೆದು ಕೊಲೆಗೈದ ಇಬ್ಬರು ವಾಮಾಚಾರಿ ಸಹೋದರರಿಗೆ ಕೊನೆಗೂ ತಕ್ಕ ಶಿಕ್ಷೆಯಾಗಿದೆ.
ಹೊಳಲ್ಕೆರೆ ತಾಲೂಕು ಅಜ್ಜಿ ಕ್ಯಾತನಹಳ್ಳಿ ನಿವಾಸಿ ಪ್ರವಿಣ್​ ಅವರ ಪುತ್ರಿ ಮೂರು ವರ್ಷದ ಪೂರ್ವಿಕಾಳನ್ನು ಮೈಮೇಲೆ ದೇವರು ಬರುತ್ತೆ, ದೆವ್ವ ಬಿಡಿಸುತ್ತೇವೆ ಎನ್ನುತ್ತಾ ಮೌಢ್ಯಾಚಾರಣೆ, ವಾಮಾಚಾರಗಳೊಂದಿಗೆ ಜನರಲ್ಲಿ ಸಲ್ಲದ ಭಯ ಉಂಟು ಮಾಡುತ್ತಿದ್ದರು. ವಿಪರೀತ ಹಠ ಮಾಡುತ್ತಿದ್ದ ಪೂರ್ವಿಕಾಳನ್ನು ಸರಿ ಮಾಡುತ್ತೇವೆ ಎಂದು ಹೇಳಿ, ತಂದೆ-ತಾಯಿಯೊಂದಿಗೆ 2020ರ ಸೆಪ್ಟೆಂಬರ್​ 27ರಂದು ತಮ್ಮ ಗುಡಿಸಿಲಿಗೆ ಕರೆಸಿಕೊಂಡು ಆಕೆಗೆ ಬಾಸುಂಡೆ ಬರುವಂತೆ ಥಳಿಸಿದ್ದರು. ಅಸ್ವಸ್ಥಳಾಗಿದ್ದ ಬಾಲಕಿ ಅಸುನೀಗಿದ್ದಳು.
ಚಿಕ್ಕಜಾಜೂರು ಪೊಲೀಸರು ಆರೋಪಿತರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದರು. ಹೊಳಲ್ಕೆರೆ ಸಿಪಿಐ ಕೆ.ಎನ್​. ರವೀಶ್​ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಪ್ರೇಮಾವತಿ ಎಂ.ಮನಗೂಳಿ ಅವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿದ್ದು, ದಂಡ ಕಟ್ಟಲು ವಿಫಲವಾದಲ್ಲಿ ಒಂದು ವರ್ಷ ಶಿಕ್ಷೆ ನೀಡಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಪ್ರಧಾನ ಸರ್ಕಾರಿ ಅಭಿಯೋಜಕ ಬಿ.ಗಣೇಶ್​ ನಾಯ್ಕ ವಾದಿಸಿದ್ದರು. ರಾಜ್ಯದಲ್ಲಿ ಮೌಢ್ಯ ನಿಷೇಧ ಕಾಯ್ದೆ ಜಾರಿ ಬಳಿಕ ಜಿಲ್ಲೆಯಲ್ಲಿ ನಡೆದ ಪ್ರಥಮ ಘಟನೆ ಇದಾಗಿದ್ದು, ಈ ಸಂಬಂಧ ಚಿಕ್ಕಜಾಜೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸನ್ನಿ ಲಿಯೋನ್​ ಫ್ಯಾನ್ಸ್​ಗೆ ಬಂಪರ್​ ಆಫರ್​ ಕೊಟ್ಟ ಮಂಡ್ಯದ ಯುವಕ! ಆದ್ರೆ ಈ 3 ಷರತ್ತು ಪೂರೈಸಲೇಬೇಕು…

ಜ್ಯೋತಿಷಿ ಮಾತು ನಂಬಿ ಸಾವಿನ ಮನೆ ಬಿಟ್ಟು ಲಾಡ್ಜ್​ಗೆ ಹೋದ ಮಾಲೀಕನಿಗೂ-ಕುಟುಂಬಕ್ಕೂ ಕಾದಿತ್ತು ಭಾರಿ ಆಘಾತ!

ಗಲಾಟೆ ನಡುವೆಯೇ ಜೆಸಿಬಿ ತರಿಸಿ ಸಂತೋಷ್​ ಪಾಟೀಲ್​ ಅಂತ್ಯಕ್ರಿಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 14 =
Remember me
