ಕೊಳ್ಳೇಗಾಲ:ಮನೆಯಲ್ಲಿ ವಿದ್ಯುತ್​ ಸಂಪರ್ಕ ಕಡಿತಗೊಂಡ ಹಿನ್ನೆಲೆ ರಾತ್ರಿ ಹಚ್ಚಿಟ್ಟಿದ್ದ ಮೊಂಬತ್ತಿ ಆ ಮನೆಯ ವೃದ್ಧನ ಪ್ರಾಣವನ್ನೇ ತೆಗೆದಿದೆ.
ಇಂತಹ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಹರಳೆ ಗ್ರಾಮದಲ್ಲಿ ಸಂಭವಿಸಿದೆ. ಗ್ರಾಮದ ನಿವಾಸಿ ಸಿದ್ದನಾಯಕ(65) ಮೃತ ದುರ್ದೈವಿ.
ಶುಕ್ರವಾರ ರಾತ್ರಿ ಮನೆಯಲ್ಲಿ ರಾತ್ರಿ ವಿದ್ಯುತ್​ ಸಂಪರ್ಕವಿಲ್ಲದ ಹಿನ್ನೆಲೆಯಲ್ಲಿ ಮೊಂಬತ್ತಿ ಹಚ್ಚಿದ್ದರು. ರಾತ್ರಿ 11.30ರಲ್ಲಿ ಮಲಗಿರುವಾಗ ಆಕಸ್ಮಿಕವಾಗಿ ಮೊಂಬತ್ತಿ ಬೆಂಕಿ ಚಾಪೆಗೆ ತಾಗಿ ಹೊತ್ತಿ ಉರಿದಿದೆ. ಈ ವೇಳೆ ವೃದ್ಧ ಚೀರಾಡುತ್ತಾ ಕೂಗಿದ ಶಬ್ದ ಕೇಳಿದ ಸಂಬಂಧಿ ಮಾದೇಶ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿ ಪಟ್ಟಣದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ಸ್ಥಳಾಂತರಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್​.ಆಸ್ಪತ್ರೆಗೆ ದಾಖಲಿಸಿದ್ದರು.
ಮರುದಿನ ಚಿಕಿತ್ಸೆಗೆ ವೃದ್ಧ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ. ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
10 ರೂ. ಕೊಡೋ ಯೋಗ್ಯತೆ ಇಲ್ಲ, ಕಾರ್ ತಗೋತೀಯಾ? ಎಂದ ಶೋ ರೂಂ ಸಿಬ್ಬಂದಿಗೆ 1 ತಾಸಲ್ಲೇ ಶಾಕ್​ ಕೊಟ್ಟ ಯುವರೈತ!

ಮನೆಗೆ ಹೋಗುವ ಮಾರ್ಗಮಧ್ಯೆ ಮೂತ್ರ ವಿಸರ್ಜನೆಗೆಂದು ನಿಂತ ಕ್ಷಣಾರ್ಧದಲ್ಲೇ ಸ್ನೇಹಿತರಿಬ್ಬರ ಪ್ರಾಣ ಹೊತ್ತೊಯ್ದ ಜವರಾಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
