ಮೂಡಿಗೆರೆ:ಒಂದೇ ಕುಟುಂಬದ ಮೂವರು ಕರ್ತವ್ಯನಿರತರಾಗಿದ್ದಾಗಲೇ ಮೃತಪಟ್ಟ ದುರಂತ ಕಥೆ ಇದೆ. ಲೈನ್‌ಮನ್ ಆಗಿದ್ದ ತಂದೆ ಮತ್ತು ಚಿಕ್ಕಪ್ಪ ಕೆಸಲ ಮಾಡುತ್ತಿರುವಾಗಲೇ ಮೃತಪಟ್ಟಿದ್ದರು. ಅನುಕಂಪದ ಆಧಾರದಲ್ಲಿ ತಂದೆಯ ಕೆಲಸಕ್ಕೆ ಸೇರಿದ್ದ ಮಗನೂ ಕರ್ತವ್ಯದಲ್ಲಿದ್ದಾಗಲೇ ದುರಂತ ಅಂತ್ಯ ಕಂಡಿದ್ದು, ಇಡೀ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.
ಇಂಥ ಮನಕಲಕುವ ಘಟನೆ ಮೂಡಿಗೆರೆಯಲ್ಲಿ ಸಂಭವಿಸಿದೆ. ಶಫೀಕ್ (42) ಮೃತ ದುರ್ದೈವಿ. 23 ವರ್ಷಗಳ ಹಿಂದೆ ಶಫೀಕ್​ರ ತಂದೆ ಶಿವಮೊಗ್ಗದಲ್ಲಿ ಮೆಸ್ಕಾಂ ಲೈನ್‌ಮನ್ ಕೆಲಸ ಮಾಡುವ ಸಮಯದಲ್ಲಿ ಮೃತಪಟ್ಟಿದ್ದರು. ಅನುಕಂಪದ ಆಧಾರದಲ್ಲಿ ಶಫೀಕ್‌ಗೆ ಮೆಸ್ಕಾಂನಲ್ಲಿ ತಂದೆಯ ಕೆಲಸವನ್ನೇ ನೀಡಲಾಗಿತ್ತು. 22 ವರ್ಷದಿಂದ ಶಫೀಕ್ ಅದೇ ಕೆಲಸ ನಿರ್ವಹಿಸುತ್ತಿದ್ದರು.
4 ದಿನದ ಹಿಂದೆ ಮೂಡಿಗೆರೆ ತಾಲೂಕಿನ ಕುನ್ನಹಳ್ಳಿ ಗ್ರಾಮದಲ್ಲಿ ವಿದ್ಯುತ್ ಕಂಬದಲ್ಲಿ ತಂತಿ ರಿಪೇರಿ ಮಾಡುತ್ತಿದ್ದಾಗ ವಿದ್ಯುತ್ ಪ್ರವಹಿಸಿ ಕಂಬದಿಂದ ಬಿದ್ದು ಶಫೀಕ್​ ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಮಂಗಳವಾರ ರಾತ್ರಿ ಕೊನೆಯುಸಿರೆಳೆದರು. ಭದ್ರಾವತಿಯವರಾದ ಶಫೀಕ್ 2020ರಿಂದ ಮೂಡಿಗೆರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರ ತಂದೆ ಮತ್ತು ಚಿಕ್ಕಪ್ಪ ಇಬ್ಬರೂ ಲೈನ್‌ಮನ್ ಆಗಿ ಕರ್ತವ್ಯ ನಿರ್ವಹಿಸುವಾಗ ವಿದ್ಯುತ್ ತಗುಲಿ ಮೃತಪಟ್ಟಿದ್ದರು.
ಮೂಡಿಗೆರೆಯ ಅಡ್ಯಂತಾಯ ರಂಗಮಂದಿರದಲ್ಲಿ ಶಫೀಕ್ ಮೃತದೇಹವನ್ನು ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿತ್ತು. ಅಂತಿಮ ದರ್ಶನ ಪಡೆಯಲು ಜನಸಾಗರವೇ ಸೇರಿತ್ತು. ಒಂದೇ ಕುಟುಂಬದ ಮೂವರನ್ನ ಬಲಿ ಪಡೆದ ವಿಧಿಗೆ ಜನ ಹಿಡಿಶಾಪ ಹಾಕತ್ತಲೇ ಕುಟುಂಬಸ್ಥರ ಗೋಳಾಟ ನೋಡಿ ಮಮ್ಮಲಮರುಗಿದರು.
ರಷ್ಯಾ-ಯೂಕ್ರೇನ್​ ಬೆನ್ನಲ್ಲೇ ಚೀನಾ-ತೈವಾನ್​ ಯುದ್ಧ ಭೀತಿ: ತೈವಾನ್​ ಸುತ್ತ ಸೇನಾ ಚಟುವಟಿಕೆ ಆರಂಭಿಸಿದ ಚೀನಾ

ಮನೆ-ಮನೆಗೂ ತಲಾ 5 ಸಾವಿರ ರೂಪಾಯಿ ದಾನ ಮಾಡ್ತೀನಿ: ಕೆಜಿಎಫ್​ ಬಾಬು ಘೋಷಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − six =
Remember me
