ಬೆಂಗಳೂರು :ವ್ಯಾಜ್ಯರಹಿತ ಸಮಾಜವೇ ಸುಂದರ. ಆದರೆ, ಅದು ಕಷ್ಟಸಾಧ್ಯ ಎಂದು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಹೇಳಿದ್ದಾರೆ.
ಸಿಜೆ ಆಗಿ ನೇಮಕಗೊಂಡ ಹಿನ್ನೆಲೆ ಕರ್ನಾಟಕ ವಕೀಲರ ಸಂಘ ಸೋಮವಾರ ಉಚ್ಚ ನ್ಯಾಯಾಲಯದಲ್ಲಿ ಆಯೋಜಿಸಿದ್ದ ಸ್ವಾಗತ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ವಕೀಲರು ಪ್ರಾಮಾಣಿಕತೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಭವಿಷ್ಯದಲ್ಲಿ ವಕೀಲ ವೃತ್ತಿ ಆಯ್ಕೆ ಮಾಡುವರು ದಾವೆಗಳ ಕುರಿತು ಪ್ರಜ್ಞೆ ಹೊಂದಿರಬೇಕಾದುದು ಮುಖ್ಯ ಎಂದರು.
ನಾನು ಈ ವಕೀಲರ ಸಂಘದ ಸದಸ್ಯನಾಗಿ 35 ವರ್ಷ ಕಳೆದಿರುವೆ. ಹಲವಾರು ಕಡೆ ಕೆಲಸ ನಿರ್ವಹಿಸಿದ ಅನುಭವ ನನ್ನದು. ಸರ್ಕಾರಿ ವಕೀಲನಾಗಿದ್ದಾಗ ನನ್ನ ಪ್ರತಿವಾದಿ ವಕೀಲರು ಪ್ರಾಮಾಣಿಕತೆ, ನಿಷ್ಠೆಯಿಂದ ಇದ್ದಲ್ಲಿ ಅವರ ಪರ ತೀರ್ಪು ಪ್ರಕಟವಾದರೆ ಖುಷಿ ಪಡುತ್ತಿದ್ದೆ. ಈ ಗುಣವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಕಾನೂನು ಸೇವೆಯಲ್ಲಿ ವೃತ್ತಪರತೆ ಕಾಯ್ದುಕೊಂಡು ಪ್ರಾಮಾಣಿಕತೆಯಿಂದ ಜವಾಬ್ದಾರಿ ನಿಭಾಯಿಸಬೇಕು ಎಂದು ಸಲಹೆ ನೀಡಿದರು.
ವಕೀಲರ ಸಮುದಾಯಕ್ಕೆ ಯಾವುದೇ ಸೌಕರ್ಯ ಹಾಗೂ ಬೇಡಿಕೆ ಇದ್ದರೂ ಅದು ನ್ಯಾಯಸಮ್ಮತವಾಗಿದ್ದರೆ ಖಂಡಿತ ಈಡೇರಿಸಲಾಗುವುದು. ಸಮಾಜಕ್ಕೆ ನನ್ನಿಂದಾಗುವ ಸಹಾಯ ಮಾಡಲು ಎಂದಿಗೂ ಸಿದ್ಧ ಎಂದು ಆಶ್ವಾಸನೆ ನೀಡಿದರು.
ಹೈಕೋರ್ಟ್ ನ್ಯಾಯಮೂರ್ತಿ ಕೆ. ಸೋಮಶೇಖರ್ ಮಾತನಾಡಿ, ಕಾನೂನು ವೃತ್ತಿಗೆ ಸಂಬಂಧಪಟ್ಟ ನಾವುಗಳು ಸಂವಿಧಾನದ ಅಧಿಕಾರಿಗಳು. ಹಾಗಾಗಿ ಸಂವಿಧಾನದ ಮೌಲ್ಯವನ್ನು ಕಾಪಿಟ್ಟುಕೊಳ್ಳಬೇಕಾದದ್ದು ನಮ್ಮ ಆದ್ಯ ಕರ್ತ್ಯವ್ಯ ಎಂದು ಹೇಳಿದರು.ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಜಿ. ರವಿ, ಕೋಶಾಧಿಕಾರಿ ಎಂ.ಟಿ. ಹರೀಶ್, ಹೈಕೋರ್ಟ್ ಘಟಕದ ಉಪಾಧ್ಯಕ್ಷ ಎ.ಎಸ್. ಹರೀಶ್, ಜಂಟಿ ಕಾರ್ಯದರ್ಶಿ ಎಂ. ಚಾಮರಾಜ್ ಮತ್ತಿತರರಿದ್ದರು.
ಕೋಟ್)ಮುಖ್ಯ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರು 1998ರಿಂದಲೂ ನನಗೆ ಪರಿಚಿತರು. ದಶಕಗಳ ಹಿಂದೆ ವಕೀಲ ವೃತ್ತಿ ಆರಂಭಿಸಿದಾಗ ಹೇಗಿದ್ದರೋ, ಈಗಲೂ ಅದೇ ಸ್ವಭಾವ ಹೊಂದಿದ್ದಾರೆ. ಅವರ ಅಪೂರ್ವ ವ್ಯಕ್ತಿತ್ವ ನಮ್ಮೆಲ್ಲರಿಗೂ ಮಾದರಿಯಾಗಿದೆ, ಅವರ ವೃತ್ತಪರತೆ ನಮಗೆ ಸ್ಫೂರ್ತಿಯಾಗಿದೆ.-ಶಶಿಕಿರಣ್ ಶೆಟ್ಟಿ, ಅಡ್ವೋಕೇಟ್ ಜನರಲ್
ಕೋಟ್)ನಮ್ಮವರೇ ಮುಖ್ಯ ನ್ಯಾಯಮೂರ್ತಿಯಾಗಿ ಬರಲು ಮೂರು ದಶಕಗಳ ಕಾಲ ಕಾಯಬೇಕಾಯಿತು. ಇದು ಅಪರೂಪದ ಸಂಗತಿ. ನಾನು ತೆಲಂಗಾಣ ಹೈಕೋರ್ಟ್‌ನಲ್ಲಿನ ತಂತ್ರಜ್ಞಾನ ವ್ಯವಸ್ಥೆಯ ಬಗ್ಗೆ ನೂತನ ಸಿಜೆ ಬಳಿ ಹೇಳಿದೆ. ನಮ್ಮಲ್ಲೂ ಇಂತಹ ವ್ಯವಸ್ಥೆ ಇದ್ದಿದ್ದರೆ ಚೆನ್ನಾಗಿತ್ತು ಎಂದಿದ್ದೆ. ಅದಕ್ಕೆ ಅವರು ಆ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಅಭಯ ನೀಡಿದ್ದಾರೆ.-ವಿವೇಕ್ ಸುಬ್ಬಾರೆಡ್ಡಿ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − six =
Remember me
