ಶಿವಮೊಗ್ಗ:ನಗರದ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿರುವ ಅಂಚೆ ಪೆಟ್ಟಿಗೆಯನ್ನು ಸೋಮವಾರ ಬೆಳಗ್ಗೆ ತೆರೆಯುತ್ತಿದ್ದಂತೆ ಅಂಚೆಯಣ್ಣ ಅರೆಕ್ಷಣ ತಬ್ಬಿಬ್ಬಾಗಿದ್ದಾರೆ. ಅರೇ, ಅಂತಹದ್ದೇನಾಯ್ತು? ಅದರಲ್ಲಿ ವಿಚಿತ್ರ ಪತ್ರವೇನಾದರೂ ಇತ್ತೇ? ಎಂದು ನಿಮ್ಮ ಮನದಲ್ಲಿ ಮೂಡಬಹುದು. ಪೆಟ್ಟಿಗೆಯೊಳಗೆ ಇದ್ದಿದ್ದು ಪತ್ರವಷ್ಟೇ ಅಲ್ಲ, ಜೀವಂತ ಹಾವೂ ಇತ್ತು!
ಅಂಚೆ ಪೆಟ್ಟಿಗೆಯೊಳಗೆ ಹಾವು ಇರುವುದನ್ನ ಕಂಡ ಅಂಚೆಯಣ್ಣ ಬೆಚ್ಚಿಬಿದ್ದರು. ಕೂಡಲೇ ಉರಗ ಪ್ರೇಮಿ ಸ್ನೇಕ್ ಕಿರಣ್​ಗೆ ಫೋನ್ ಮಾಡಿ ಕರೆಸಲಾಯಿತು. ಐದು ಅಡಿ ಉದ್ದದ ಹಾವನ್ನು ಸುರಕ್ಷಿತವಾಗಿ ಹಿಡಿದ ಸ್ನೇಕ್ ಕಿರಣ್, ಇದು ಕಟ್ಟು ಹಾವು (ಕ್ಯಾಟ್ ಸ್ನೇಕ್) ಜಾತಿಗೆ ಸೇರಿದೆ. ಐದು ಬಣ್ಣಗಳಲ್ಲಿರುವ ಇವು ವಿಷಕಾರಿಯಲ್ಲ. ಸಾಮಾನ್ಯವಾಗಿ ಮರದ ಮೇಲೆ ವಾಸಿಸುವ ಇದು ಅಂಚೆ ಪೆಟ್ಟಿಗೆಯೊಳಗೆ ಸೇರಿದ್ದು ಆಶ್ಚರ್ಯ ಎಂದರು. ಬಳಿಕ ಹಾವನ್ನು ಅರಣ್ಯಕ್ಕೆ ಕೊಂಡೊಯ್ದು ಬಿಟ್ಟರು.

https://app.bitly.com/Bk52bwjriNH/bitlinks/3vFuN81?offset=30
ಪೊಲೀಸರ ಕಿರುಕುಳ ಸಹಿಸಲಾಗ್ತಿಲ್ಲ, ನನಗೆ ದಯಾಮರಣ ಕೊಡಿ: ಮಧುಗಿರಿಮೋದಿ

ಪತ್ನಿಯ ಗೆಳತಿಯರು ಮನೆಗೆ ಬರುತ್ತಿದ್ದಂತೆ ಅವರ ಬಟ್ಟೆ ಬಿಚ್ಚುತ್ತಾನೆ ಗಂಡ! ಬೆಚ್ಚಿಬೀಳಿಸುತ್ತೆ ದಂಪತಿ ಕೃತ್ಯ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:15 − six =
Remember me
