ಬೆಂಗಳೂರು:ರಾಜ್ಯದ ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ 2022-23ನೇ ಸಾಲಿನಲ್ಲಿ ಉನ್ನತ ವ್ಯಾಸಂಗ ಮಾಡಲು ಶೈಕ್ಷಣಿಕ ಸಾಲ ಸೌಲಭ್ಯಕ್ಕಾಗಿ ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ ಆನ್​ಲೈನ್​ ಮೂಲಕ ಅರ್ಜಿ ಆಹ್ವಾನಿಸಿದೆ.
ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ನಿಗಮವು ವಾರ್ಷಿಕ 3.50 ಲಕ್ಷ ರೂ. ಗಳಂತೆ ಕೋರ್ಸ್​ನ ಅವಧಿಗೆ ಗರಿಷ್ಠ 10 ಲಕ್ಷ ರೂ. ಸಾಲವನ್ನು ಶೇ.2ರ ಬಡ್ಡಿ ದರದಲ್ಲಿ ಮಂಜೂರು ಮಾಡಲಿದೆ. ಆಸಕ್ತ ವಿದ್ಯಾರ್ಥಿಗಳು ನ.30ರೊಳಗೆ ಸೇವಾಸಿಂಧು ಪೋರ್ಟಲ್​ ಮೂಲಕ ಅರ್ಜಿ ಸಲ್ಲಿಸಬಹುದು.
ಮಾಸ್ಟರ್ಸ್​ ಡಿಗ್ರಿ (ಎಂ.ಡಿ) ಮಾಡಲಿಚ್ಛಿಸುವ ಶೇ.60ಕ್ಕಿಂತ ಅಧಿಕ ಅಂಕ ಗಳಿಸಿರುವ 25 ವರ್ಷದೊಳಗಿನವರು. ಪಿಎಚ್​ಡಿ ಮಾಡಲು ಬಯಸುವ ಮಾಸ್ಟರ್ಸ್​ ಡಿಗ್ರಿಯಲ್ಲಿ ಶೇ.60ಕ್ಕಿಂತ ಅಧಿಕ ಅಂಕ ಗಳಿಸಿರುವ ಹಾಗೂ ಪೋಸ್ಟ್​ ಡಾಕ್ಟರಲ್​ ಮಾಡಲು ಇಚ್ಛಿಸುವ ಮಾಸ್ಟ್ರರ್ಸ್​ ಡಿಗ್ರಿ/ಪಿಎಚ್​ಡಿಯಲ್ಲಿ ಶೇ.60ಕ್ಕಿಂತ ಹೆಚ್ಚು ಅಂಕ ಪಡೆದಿರುವ 27 ವರ್ಷದ ಒಳಗಿನವರು ಸೌಲಭ್ಯ ಪಡೆಬಹುದು. ವಿವರಗಳಿಗೆ ನಿಗಮದ ಜಾಲತಾಣhttps://kvcdc.karnataka.gov.in/ಅಥವಾ ದೂ: 080-29904268 ಹಾಗೂ ಇ-ಮೇಲ್​[email protected]ವಿಳಾಸ ಸಂಪರ್ಕಿಸಬಹುದು.
ಮಂಡ್ಯದಲ್ಲಿ ಇಬ್ಬರು ಫೋಟೋಗ್ರಾಫರ್​ ಸಾವು: ದೀಪಾವಳಿ ಸಡಗರದಲ್ಲಿದ್ದವರ ಬಾಳಲ್ಲಿ ದುರಂತ

ದಾವಣಗೆರೆಯಲ್ಲಿ ಸ್ನೇಹಿತೆಯಿಂದಲೇ ಯುವತಿಗೆ ಚಾಕು ಇರಿತ: ಪ್ರಕರಣದ ಹಿಂದಿದೆ ಸಲಿಂಗಕಾಮ…

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 × 1 =
Remember me
