ತುಮಕೂರು/ರಾಯಚೂರು:ಶಿರಾ ತಾಲೂಕಿನ ಕಳ್ಳಂಬೆಳ್ಳದ ಬಾಲೆನಹಳ್ಳಿ ಗೇಟ್ ಬಳಿ ಇಂದು(ಗುರುವಾರ) ಬೆಳಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 10ಕ್ಕೇರಿದೆ.
ಪಘಾತದ ರಭಸಕ್ಕೆ ಸ್ಥಳದಲ್ಲೇ 9 ಮಂದಿ ಮೃತಪಟ್ಟಿದ್ದರು. ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಇಬ್ಬರನ್ನು ಬೆಂಗಳೂರಿನ ನಿಮ್ಹಾನ್ಸ್​ಗೆ ದಾಖಲಿಸಲಾಗಿತ್ತು. ಈ ಪೈಕಿ ಓರ್ವ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾನೆ. ತುಮಕೂರು ಜಿಲ್ಲಾಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ 13 ಮಂದಿಗೆ ಚಿಕಿತ್ಸೆ ಮುಂದುವರಿದಿದೆ.
ಶಿರವಾರ ತಾಲೂಕಿನ ಕುರಕುಂದಾ ಗ್ರಾಮದ ಸುಜಾತಾ(25) ಮತ್ತು ವಿನೋದ(3), ವಡವಟ್ಟಿ ಗ್ರಾಮದ ಕ್ರೂಸರ್ ಚಾಲಕ ಕೃಷ್ಣಪ್ಪ(25), ಲಕ್ಷ್ಮೀ ಅಲಿಯಾಸ್ ಮೀನಾಕ್ಷಿ(28), ಕಸನದೊಡ್ಡಿ ಗ್ರಾಮದ ಬಸಮ್ಮ(50), ಪ್ರಭು ಸೇರಿ 10 ಮಂದಿ ಮೃತರು. ಮೃತರೆಲ್ಲರೂ ಕೂಲಿ ಕಾರ್ಮಿಕರಾಗಿದ್ದು, ಈ ಪೈಕಿ ಇಬ್ಬರು ಮಕ್ಕಳು. ರಾಯಚೂರು ಜಿಲ್ಲೆಯಿಂದ ಬೆಂಗಳೂರಿಗೆ ಕೂಲಿ ಕೆಲಸ ಅರಸಿ ಕ್ರೂಸರ್​ ವಾಹನದಲ್ಲಿ ಗುಳೆ ಹೊರಟ್ಟಿದ್ದರು. ಮಾರ್ಗಮಧ್ಯೆ ಕ್ರೂಸರ್​ ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ 10 ಮಂದಿ ಮೃತಪಟ್ಟಿದ್ದಾರೆ.
ಮೃತರ ಪೈಕಿ ನಾಲ್ವರು ಒಂದೇ ಕುಟುಂಬದವರು. ಕುರುಕುಂದಾ ಗ್ರಾಮದ ಸಿದ್ದಣ್ಣ, ಇವರ ಅಕ್ಕ ಸುಜಾತಾ, ಮಾವ ಪ್ರಭು ಮತ್ತು ಸುಜಾತಾ-ಪ್ರಭು ದಂಪತಿಯ ಪುತ್ರ ವಿನೋದ್ ಮೃತ ದುರ್ದೈವಿಗಳು. ಒಂದೇ ಮನೆಯ ನಾಲ್ವರನ್ನ ಕಳೆದುಕೊಂಡು ಕುಟುಂಬಸ್ಥರು ಕಂಗಾಲಾಗಿದ್ದಾರೆ. ಇಡೀ ಕುರುಕುಂದಾ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ.
ಶಿರಾದಲ್ಲಿ ಭೀಕರ ಅಪಘಾತ, 9 ಮಂದಿ ಸಾವು: ಸಂತಾಪ ಸೂಚಿಸಿ ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ ಪ್ರಧಾನಿ

ಅತ್ಯಾಚಾರ ಆರೋಪಿಯನ್ನೇ ಮದ್ವೆಯಾದ ಯುವತಿ! ಪೋಕ್ಸೋ ಪ್ರಕರಣ ರದ್ದುಪಡಿಸಿದ ಹೈಕೋರ್ಟ್​

ಯೋಗೇಶ್ವರ್ ಬಿಜೆಪಿ ತೊರೆದು ಕಾಂಗ್ರೆಸ್​ಗೆ ಹೋಗ್ತಾರಾ? ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ ಸಿಪಿವೈ

ಯೋಗೇಶ್ವರ್ ಬಿಜೆಪಿ ತೊರೆದು ಕಾಂಗ್ರೆಸ್​ಗೆ ಹೋಗ್ತಾರಾ? ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ ಸಿಪಿವೈ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:13 + 3 =
Remember me
