ಹಾಸನ:ಆಕೆಯ ವಯಸ್ಸಿನ್ನು 20. ಆತನ ವಯಸ್ಸು 25. ನೋಡೋಕೆ ಮುದ್ದು ಮುದ್ದಾಗಿದ್ದ ಈ ಜೋಡಿ ಪ್ರೀತಿಯ ಬಲೆಗೆ ಸಿಲುಕಿ ಮನೆಯವರ ವಿರೋಧದ ನಡುವೆಯೂ ಮದುವೆ ಮಾಡಿಕೊಂಡಿತ್ತು. ದಾಂಪತ್ಯ ಜೀವನಕ್ಕೆ ಕಾಲಿಟ್ಟ 5 ತಿಂಗಳಿಗೆ ಇವರಿಬ್ಬರ ಪ್ರೀತಿ ದುರಂತ ಅಂತ್ಯಕಂಡಿದ್ದು, ಯುವತಿ ಬಾರದ ಲೋಕಕ್ಕೆ ಹೋಗಿದ್ದಾಳೆ.
ಚನ್ನರಾಯಪಟ್ಟಣ ತಾಲೂಕಿನ ಬೆಕ್ಕ ಗ್ರಾಮದ ಪೂಜಾ(20) ಮೃತ ದುರ್ದೈವಿ. ಸಕಲೇಶಪುರದ ಅಶ್ವಥ್ ಮತ್ತು ಪೂಜಾ ಪರಸ್ಪರ ಪ್ರೀತಿಸುತ್ತಿದ್ದರು. 5 ತಿಂಗಳ ಹಿಂದೆ ಈ ವಿಚಾರ ತಿಳಿದ ಪಾಲಕರು ಇವರಿಬ್ಬರ ಪ್ರೀತಿಗೆ ವಿರೋಧಿಸಿ ಪೂಜಾಳಿಗೆ ಬೇರೊಬ್ಬ ಯುವಕನೊಂದಿಗೆ ಮದುವೆ ನಿಶ್ಚಿತಾರ್ಥ ನೆರವೇರಿಸಿದ್ದರು. ಇದಾದ 20 ದಿನಕ್ಕೆ ಮನೆಯವರ ವಿರೋಧದ ನಡುವೆಯೂ ಪೂಜಾ, ತನ್ನ ಪ್ರಿಯಕರ ಅಶ್ವಥ್ ಜತೆ ಮದುವೆ ಆಗಿದ್ದಳು.

ದಂಪತಿ ಇಬ್ಬರೂ ಸಕಲೇಶಪುರ ಪಟ್ಟಣದಲ್ಲಿ ವಾಸವಿದ್ದರು. ಇಂದು(ಗುರುವಾರ) ಸಕಲೇಶಪುರದಲ್ಲಿ ಹೇಮಾವತಿ ಸೇತುವೆ ಮೇಲಿಂದ ನದಿಗೆ ಹಾರಿ ಪೂಜಾ ಪ್ರಾಣ ಬಿಟ್ಟಿದ್ದಾಳೆ.ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೂಜಾಳ ಪಾಲಕರು, ನನ್ನ ಮಗಳಿಗೆ ಗಂಡನ ಮನೆಯಲ್ಲಿ ವರದಕ್ಷಿಣೆ ತರುವಂತೆ ಕಿರುಕುಳ ಕೊಡುತ್ತಿದ್ದರು. ಆಕೆಯ ಗಂಡನ ಮನೆಯವರ ಕಿರುಕುಳ ಸಹಿಸಲಾಗದೆ ಮಗಳು ಪೂಜಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಂದೇ ಮನೆಯಲ್ಲಿದ್ದರು ಪತ್ನಿ-ಪತಿ-ಸ್ನೇಹಿತ! ಪೊಲೀಸರ ಮುಂದೆ ಬಯಲಾಯ್ತು ಚೆಂದುಳ್ಳಿ ಚೆಲುವೆಯ ಅಸಲಿ ಮುಖ

ಕಣ್ಣು ಕುಕ್ಕುವಂತಿದೆ ಶಾಸಕ ಜಮೀರ್‌ ಬಂಗಲೆ! ಅರೇಬಿಯನ್‌ ಶೈಲಿಯ ಅರಮನೆಗೆ ಚಿನ್ನದ ಲೇಪನ…

ಬಿಜೆಪಿಗೆ ಬಂದ ಶಾಸಕ ಮಹೇಶ್​ಗೆ ವೇದಿಕೆಯಲ್ಲೇ ಸಿಹಿ ಸುದ್ದಿ ಕೊಟ್ಟ ಬಿಎಸ್​ವೈ!

ನಾನೀಗ ಪ್ರತಿದಿನ ಬ್ಯಾಡ್ಮಿಂಟನ್ ಆಡುತ್ತಿರುವೆ… ನನಗೂ ಒಳ್ಳೆಯ ಟೈಂ ಬರುತ್ತೆ… ಎಂದ ರಮೇಶ್​ ಜಾರಕಿಹೊಳಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 9 =
Remember me
