ಚಿಕ್ಕಮಗಳೂರು:ನಿರಾಶ್ರಿತರ ಕೇಂದ್ರವೇ ಸಭಾಭವನ, ತೆಂಗಿನ ಗರಿಯ ಚಪ್ಪರದ ಸ್ವಾಗತ, ಭಿಕ್ಷುಕರು, ದುಶ್ಚಟ ಬಿಟ್ಟ ನಿರಾಶ್ರಿತರೇ ಅತಿಥಿಗಳು. ಮಂತ್ರ ಮಾಂಗಲ್ಯಕ್ಕೆ ಆನ್​ಲೈನ್​ನಲ್ಲಿ ಮಂತ್ರ… ಹೀಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಗುಜರಿ-ಚಿಂದಿ ಆಯುವ ಕೆಲಸ ಮಾಡಿಕೊಂಡಿದ್ದ ಪ್ರೇಮಿಗಳು.
ಇಂಥ ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಿದ್ದು ಮಲೆನಾಡು ಕ್ರೈಸ್ತರ ಅಭಿವೃದ್ಧಿ ಸಂಘದ ನಿರಾಶ್ರಿತರ ಆಶ್ರಯ ಕೇಂದ್ರ. ಇಲ್ಲಿ ಹಸೆಮಣೆ ಏರಿದ್ದು ಚಿತ್ರದುರ್ಗ ಜಿಲ್ಲೆ ರಾಮಗಿರಿ ತಾಳಿಕಟ್ಟೆ ಗ್ರಾಮದ ಕುಮಾರ್ ಮತ್ತು ಚನ್ನಗಿರಿ ತಾಲೂಕು ಹೊದಿಗೆರೆಯ ರೇಣುಕಾ. ಗುಜರಿ ಆಯುವ ಇವರಿಬ್ಬರು ಮೂರು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಹಿರೇಮಗಳೂರು ಬಳಿ ಖಾಸಗಿ ಜಾಗದಲ್ಲಿ ಜೋಪಡಿ ಕಟ್ಟಿಕೊಂಡು ಸಹಬಾಳ್ವೆ ಮಾಡುತ್ತಿದ್ದರು. ಈ ಬಾರಿ ಕರೊನಾ ಲಾಕ್​ಡೌನ್ ಸಂದರ್ಭ ಬೀದಿಯಲ್ಲಿ ಗುಜರಿ ಆಯುತ್ತಿದ್ದ ಇವರನ್ನು ನಿರಾಶ್ರಿತರ ಆಶ್ರಯ ಕೇಂದ್ರದ ಮುಖ್ಯಸ್ಥ ರೂಬಿನ್ ಮೋಸಸ್ ತಂಡ ಕರೆತಂದು ದಾಖಲಿಸಿಕೊಂಡಿತು.
ಆಶ್ರಯ ಕೇಂದ್ರಕ್ಕೆ ದಾಖಲಾದವರ ಚಲನವಲನ ಗಮನಿಸುತ್ತಿರುವಾಗ ಎರಡು ದಿನಗಳ ಹಿಂದೆ ಈ ಪ್ರೇಮಿಗಳ ಮಾತುಕತೆ ಗಮನಿಸಿ ಮಾಹಿತಿ ಕಲೆಹಾಕಿದಾಗ ಲಿವಿಂಗ್ ಟುಗೆದರ್​ನಲ್ಲಿದ್ದ ವಿಷಯ ತಿಳಿದುಬಂದಿದೆ. ಇವರನ್ನು ವಿವಾಹ ಮಾಡಲು ನಿರ್ಧರಿಸಿದ ತಂಡ ಮುಹೂರ್ತ ನಿಗದಿ ಮಾಡಿ ಆವರಣದಲ್ಲೇ ಇದ್ದ ತೆಂಗಿನಗರಿ ಚಪ್ಪರ ಹಾಕಿದರು. ಮಂಗಳವಾರ 11.30ಕ್ಕೆ ಆನ್​ಲೈನ್ ಮಂತ್ರದೊಂದಿಗೆ ನಿರಾಶ್ರಿತರ ಕೇಂದ್ರದ ವಾಸಿಗಳ ಸಮ್ಮುಖದಲ್ಲಿ ಹಿಂದು ಸಂಪ್ರದಾಯದಂತೆ ವಿವಾಹ ನೆರವೇರಿಸಲಾಯಿತು.

ಆಶ್ರಯ ಕೇಂದ್ರದ ನಿರ್ದೇಶಕರಾದ ಸಿಲ್ವೆಸ್ಟರ್, ರೋನಿ, ಟೋನಿ, ಸಂಜು, ಜಾರ್ಜ್, ಗುರು, ಮಂಜು, ರೇಖಾ, ಸುಧಾ ನವದಂಪತಿಗೆ ಶುಭ ಹಾರೈಸಿದರು. ನಂತರ ರೈಸ್​ಬಾತ್, ಅನ್ನ-ಸಾಂಬಾರ್, ಪಲ್ಯ, ಜಿಲೇಬಿ, ಹೆಸರುಬೇಳೆ ಪಾಯಸ ಸವಿದರು. ಈ ದಂಪತಿಯ ಜೀವನ ನಿರ್ವಹಣೆಗೆ ಆಶ್ರಯ ಕೇಂದ್ರದವರು ಹೋಮ್​ಸ್ಟೇನಲ್ಲಿ ಕೆಲಸ ಕೊಡಿಸಲಿದ್ದಾರೆ.
ಕೆಲಸ ಅರಸಿ ಊರು ಬಿಟ್ಟು ಬಂದು ಚನ್ನಗಿರಿಯಲ್ಲಿ ಗಾರೆ ಕೆಲಸ ಮಾಡುತ್ತಿದ್ದೆ. ನಂತರ ಇಬ್ಬರೂ ಗುಜರಿ ಆಯುತ್ತಿದ್ದೆವು. ಒಟ್ಟಿಗೇ ಚಿಕ್ಕಮಗಳೂರಿಗೆ ಬಂದೆವು. ಮೂರು ವರ್ಷದಿಂದ ಪ್ರೀತಿ ಬೆಳೆಯಿತು. ಲಾಕ್​ಡೌನ್​ನಲ್ಲಿ ನಿರಾಶ್ರಿತರ ಕೇಂದ್ರಕ್ಕೆ ಕರೆತಂದರು. ಹೊಟ್ಟೆ-ಬಟ್ಟೆಗೆ ತೊಂದರೆ ಇಲ್ಲದಂತೆ ಕುಟುಂಬದವರಂತೆ 2 ತಿಂಗಳು ನೋಡಿಕೊಂಡಿರುವ ಕ್ರೈಸ್ತರ ಅಭಿವೃದ್ಧಿ ಸಂಘದ ಕಾರ್ಯಕರ್ತರು ನಮಗೆ ಮದುವೆ ಮಾಡಿಸಿದ್ದಾರೆ. ಕೆಲಸವನ್ನೂ ಕೊಡಿಸುತ್ತಿದ್ದಾರೆ.| ಕುಮಾರ್ ಮತ್ತು ರೇಣುಕಾನವದಂಪತಿ
ಆಷಾಢ ಶುಕ್ರವಾರ ಚಾಮುಂಡಿ ಬೆಟ್ಟಕ್ಕೆ ಭಕ್ತರಿಗೆ ಪ್ರವೇಶವಿಲ್ಲ: ಜಿಲ್ಲಾಧಿಕಾರಿ ಆದೇಶ

ಕೈದಿಗಳ ಜತೆ ಜೈಲಿನಲ್ಲೇ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಮಹಿಳಾ ಪೊಲೀಸ್​ ಅಧಿಕಾರಿ! ಮುಂದೇನಾಯ್ತು?

ಹುಟ್ಟೂರಲ್ಲೇ 14 ವರ್ಷದ ಬಾಲಕಿ ಜತೆ ಪರಪುರುಷರ ಕಾಮದಾಟ​! ಹೆತ್ತವರ ಸಾಥ್​, ಮಧುಗಿರಿ ಗೌರಿಗಾಗಿ ಹುಡುಕಾಟ​​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − three =
Remember me
