ಬೆಂಗಳೂರು:ಕನ್ನಡದ ನಟಿಯೊಬ್ಬರು ಲವ್​ ಜಿಹಾದ್​ ಬಲೆಯಲ್ಲಿ ಸಿಲುಕಿ, ನಿತ್ಯವೂ ಕಣ್ಣೀರು ಹಾಕುತ್ತಿದ್ದಾರೆ…
ಈ ಬಗ್ಗೆ ಅವರೇ ಕಣ್ಣೀರು ಹಾಕುತ್ತಾ ಅಳಲು ತೋಡಿಕೊಂಡಿರುವ ವಿಡಿಯೋದಿಗ್ವಿಜಯ ನ್ಯೂಸ್​ಗೆ ಲಬ್ಯವಾಗಿದೆ. ಫೋನ್​ ಮೂಲಕ ನಟಿಯನ್ನ ಮಾತನಾಡಿಸಲು ಯತ್ನಿಸಿದ್ದು, ಅವರು ಸಂಪರ್ಕಕ್ಕೆ ಸಿಕ್ಕಿಲ್ಲ. ಸದ್ಯ ಚೆನ್ನೈನ ಆಸ್ಪತ್ರೆಯಲ್ಲಿದ್ದಾರೆ ಎಂಬ ಮಾಹಿತಿ ಲಬ್ಯವಾಗಿದೆ.
ಕನ್ನಡದ ‘ಆಕಾಶ ದೀಪ’ ಧಾರಾವಾಹಿಯಲ್ಲಿ ನಟಿಸಿದ್ದ ದಿವ್ಯಾ ಶ್ರೀಧರ್​ ಬಾಳಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಅವಕಾಶಗಳನ್ನು ಹರಸಿ ತಮಿಳು ಇಂಡಸ್ಟ್ರಿಗೆ ಹೋಗಿದ್ದ ದಿವ್ಯಾಗೆ ಪರಿಚಯವಾದ ನಟ ಅಮ್ಜದ್​ ಅಲಿಯಾಸ್​ ಅರ್ನವ್​ ಎಂಬಾತನ ಜತೆ ಪ್ರೀತಿಯಾಗಿದೆ. ಮದುವೆ ಕೂಡ ಆಗಿದ್ದು, ಇದೀಗ ಕಣ್ಣೀರು ಸುರಿಸುತ್ತಿದ್ದಾರೆ.
‘ನನಗೂ ಅರ್ನವ್​ಗೂ ಮದುವೆ ಆಗಿದೆ. ಆರ್ನವ್ ನನಗೆ ಸಾಕಷ್ಟು ಹಿಂಸೆ ಕೊಡ್ತಿದ್ದಾನೆ. ಮದುವೆ ವಿಚಾರವನ್ನು ಗುಟ್ಟಾಗಿ ಇಡುವಂತೆ ಹೇಳ್ತಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕದಂತೆ ಎಚ್ಚರಿಕೆ ಕೊಟ್ಟಿದ್ದಾನೆ. ಇದೇ ವಿಚಾರಕ್ಕೆ ಹಲವು ಬಾರಿ ನನ್ನ ಮೇಲೆ ಹಲ್ಲೆಯಾಗಿದೆ’ ಎಂದಿರುವ ದಿವ್ಯಾ, ಮನದ ನೋವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
‘2017ರಲ್ಲಿ ನಾವಿಬ್ಬರೂ ಒಂದೇ ಸೀರಿಯಲ್​ನಲ್ಲಿ ಆ್ಯಕ್ಟಿಂಗ್​ ಮಾಡ್ತಿದ್ವಿ. ಆಗ ನಾವಿಬ್ಬರೂ ಫ್ರೆಂಡ್ಸ್​ ಆದ್ವಿ. ಆಮೇಲೆ ಪ್ರೀತಿಸಿ ಮದ್ವೆ ಆದ್ವಿ. 2 ವರ್ಷದ ಹಿಂದೆ ಒಂದು ಮನೆ ಖರೀದಿಸಿದೆವು. ಮನೆ ತೆಗೆದುಕೊಳ್ಳುವಾಗ ನಾನು ಅವನಿಗೆ ಹಣದ ಸಹಾಯ ಮಾಡಿದ್ದೇನೆ. ಕರೊನಾ ಲಾಕ್​ಡೌನ್​ ವೇಳೆ ಅವನು 2 ವರ್ಷ ಮನೆಯಲ್ಲೇ ಇದ್ದ. ಆಗ ಅವನಿಗೆ ಏನು ಬೇಕೋ ಎಲ್ಲವನ್ನೂ ತಂದು ಕೊಟ್ಟೆ. ಏನೂ ಕಷ್ಟ ಬಾರದಂತೆ ಚೆನ್ನಾಗಿ ನೋಡಿಕೊಂಡೆ. ಕೆಲಸ ಇಲ್ಲ ಅನ್ನೋ ನೋವು ಕಾಡದಂತೆ ನನ್ನ ಗಂಡನನ್ನು ಮಗು ಥರ ನೋಡಿಕೊಂಡೆ. ನಾನು ಅವನಿಗಾಗಿ ಎಲ್ಲವನ್ನೂ ಸಹಿಸಿಕೊಂಡಿದ್ದೇನೆ. ಇದೀಗ ನನ್ನ ಪತಿ ನನ್ನನ್ನು ದೂರ ಇಟ್ಟಿದ್ದಾನೆ. ನನಗೆ ಅವನು ಬೇಕು. ನನ್ನ ಗಂಡ ನನ್ನನ್ನು ದೂರ ಮಾಡಿದ್ರೂ ನನಗೆ ಅವನೇ ಬೇಕು. ನನ್ನ ಹಾಗೂ ನನ್ನ ಮಗುವಿಗಾಗಿ ನೀವೆಲ್ಲರೂ ಪ್ರಾರ್ಥಿಸಿ’ ಎಂದು ನಟಿ ದಿವ್ಯಾ ಕಣ್ಣೀರಿಟ್ಟಿದ್ದಾರೆ.
ஃலவ் ஜிகாத்தால் பாதிக்கப்பட்ட சீரியல் நடிகை திவ்யா
வீடியோ வெளியிட்டு ஆதரவு கேட்கிறார்.pic.twitter.com/DxyUY7HuyT
— Jayam Sk Gopi (Jsk Gopi) (@JSKGopi)October 6, 2022

ದಿವ್ಯಾರನ್ನು ಪರಿಚಯ ಮಾಡಿಕೊಳ್ಳುವಾಗ ತನ್ನ ಹೆಸರು ಅರ್ನವ್​ ಎಂದು ಹೇಳಿಕೊಂಡಿದ್ದನಂತೆ. ಅಸಲಿ ಹೆಸರು ಅಮ್ಜದ್​ ಖಾನ್​. ಆದರೂ ಹೆಸರನ್ನು ಏಕೆ ಮುಚ್ಚಿಟ್ಟರು ಎಂಬ ಪ್ರಶ್ನೆ ಮೂಡಿದ್ದು, ಇದು ಲವ್​ ಜಿಹಾದ್ ಇರಬಹುದಾ ಎಂಬ ಅನುಮಾನ ಹುಟ್ಟುಹಾಕಿದೆ.
ತುಮಕೂರಲ್ಲಿ ಜೆಡಿಎಸ್​ಗೆ ಮತ್ತೊಂದು ಶಾಕ್​! ಚುನಾವಣಾ ರಾಜಕೀಯದಿಂದ ದೂರ ಸರಿದ ಮಧುಗಿರಿ ಶಾಸಕ

ಹಾಲು ಕೊಡುತ್ತಿದೆ ಗಂಡು ಮೇಕೆ! ಬಾಗಲಕೋಟೆಯಲ್ಲಿ ವೈಚಿತ್ರ್ಯ, ವಿಡಿಯೋ ವೈರಲ್​

​
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 1 =
Remember me
