ಬೆಂಗಳೂರು:‘ಲವ್​ ಯೂ ರಚ್ಚು’ ಸಿನಿಮಾ ಶೂಟಿಂಗ್​ ವೇಳೆ ದುರಂತ ಸಂಭವಿಸಿದಾಗ ನಟ ಅಜಯ್​ ರಾವ್​ ಕೂಡ ಅಲ್ಲೇ ಇದ್ದರು. ಆ ಘಟನೆ ಕುರಿತು ‘ದಿಗ್ವಿಜಯ ನ್ಯೂಸ್​’ ಬಳಿ ಅಜಯ್​ ಬಿಚ್ಚಿಟ್ಟ ಎಕ್ಸ್​ಕ್ಲ್ಯೂಸಿವ್​ ಮಾಹಿತಿ ಇಲ್ಲಿದೆ.
ಘಟನೆ ನಡೆಯುವ ಸಂದರ್ಭದಲ್ಲಿ ನಾನು ಅಲ್ಲಿದ್ದನಾದರೂ ನನ್ನ ಭಾಗದ ಚಿತ್ರೀಕರಣ ಮುಗಿಸಿ ಬ್ರೇಕ್​ನಲ್ಲಿದ್ದೆ. ನನ್ನ ಪಾಡಿಗೆ ನಾನು ಫೋನಿನಲ್ಲಿ ಬಿಜಿಯಾಗಿದ್ದೆ. ಏಕಾಏಕಿ ಎಲ್ಲರೂ ಓಡಲು ಆರಂಭಿಸಿದ್ರು. ನಾನು ಏನಾಯ್ತು? ಅಂತ ಕೇಳಿದೆ. ವಿವೇಕ್​ಗೆ ವಿದ್ಯುತ್ ತಂತಿ ತಗುಲಿದೆ ಎಂದರು. ನನ್ನ ಕಾಲಿನ ಮೂಳೆಯೂ ಕ್ರ್ಯಾಕ್ ಆಗಿರೋದ್ರಿಂದ ನನಗೂ ತಕ್ಷಣ ಓಡಲು ಆಗಲಿಲ್ಲ. ಆದರೂ ನೋಡಲು ನಾನೂ ಓಡಿ ಹೋದೆ. ಅಷ್ಟರಲ್ಲಿ ಆಂಬುಲೆನ್ಸ್ ಬಂದಿತ್ತು, ವಿವೇಕ್​ ಮತ್ತು ರಂಜಿತ್​ರನ್ನು ಆಸ್ಪತ್ರೆಗೆ ಕರೆದೊಯ್ದರು ಎಂದು ಅಜಯ್​ ಹೇಳಿದರು.
ನನ್ನ ಮೇಲೆ ರಂಜಿತ್ ಆರೋಪ ಮಾಡಿದ್ದಾರೆ. ಆ ರೀತಿ ಆಗಿಲ್ಲ. ಘಟನೆ ನಡೆದದ್ದನ್ನು ಕಣ್ಣಾರೆ ನೋಡಿದರೆ ಯಾರೂ ಸುಮ್ಮನಿರುವುದಿಲ್ಲ. ನಾನೂ ಸುಮ್ಮನಿರುತ್ತಿರಲಿಲ್ಲ. ಎಷ್ಟೇ ಮುಂಜಾಗ್ರತೆ ವಹಿಸಿದ್ದರೂ ಶೂಟಿಂಗ್​ನಲ್ಲಿ ಅಪಘಾತ ಆಗುತ್ತವೆ. ಕಳೆದ ವಾರ ಇದೇ ಸೀನ್ ಚಿತ್ರೀಕರಿಸೋ ವೇಳೆ ನನಗೂ ಗಾಯವಾಯ್ತು. ಕಾಲಿನ ಮೂಳೆಗೆ ಪೆಟ್ಟಾಯ್ತು. ಅದೇ ಕಾರಣಕ್ಕೆ ಒಂದು ವಾರ ಶೂಟಿಂಗ್ ನಿಲ್ಲಿಸಲಾಗಿತ್ತು. ಮತ್ತೆ ಗುರುವಾರ ಚಿತ್ರೀಕರಣ ಶುರು ಮಾಡಿದ್ವಿ. ಚಿತ್ರೀಕರಣದ ಕೊನೆಯ ದಿನ ಇಂತಹದ್ದೊಂದು ದುರ್ಘಟನೆ ನಡೆದಿದೆ ಎನ್ನುತ್ತಲೇ ಅಜಯ್​ ಭಾವುಕರಾದರು.
ಅಮ್ಮನ ಮಾತು ಕೇಳಿದ್ದರೆ ವಿವೇಕ್​ ಸಾಯುತ್ತಲೇ ಇರಲಿಲ್ಲ..! ಮುಗಿಲುಮುಟ್ಟಿದೆ ಹೆತ್ತವ್ವನ ಆಕ್ರಂದನ

ನನ್ನ ತಾಯಾಣೆ.. ಅಷ್ಟೊಂದು ಹಣವನ್ನು ಜೀವನದಲ್ಲಿ ನೋಡಿಯೇ ಇರಲಿಲ್ಲ: ಮಂಜು ಪಾವಗಡ

ಮದ್ವೆಯಾದ 23 ದಿನಕ್ಕೇ ನವದಂಪತಿ ದುರಂತ ಸಾವು! ಅತ್ತಿಗೆಯ ಪ್ರಾಣವೂ ಹೋಯ್ತು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × one =
Remember me
