ರಾಮನಗರ:ಬಿಡದಿ ಬಳಿ ಹೋಬಳಿಯ ಜೋಗರಪಾಳ್ಯದಲ್ಲಿ ‘ಲವ್​ ಯೂ ರಚ್ಚು’ ಸಿನಿಮಾ ಶೂಟಿಂಗ್​ ವೇಳೆ ಹೈಟೆನ್ಷನ್​ ವಿದ್ಯುತ್​ ತಂತಿ ತಗುಲಿ ಸೋಮವಾರ ಫೈಟರ್​ ವಿವೇಕ್​(35) ಮೃತಪಟ್ಟಿದ್ದಾನೆ. ಈತ ಹೆತ್ತಮ್ಮನ ಮಾತು ಕೇಳಿದ್ದರೆ ಇಷ್ಟು ಬೇಗ ಸಾಯುತ್ತಿರಲಿಲ್ಲವೇನೋ…
ಮಗನ ಸಾವಿನ ಸುದ್ದಿ ಕೇಳಿ ವಿವೇಕ್​ರ ತಾಯಿ ಕೆಂಗೇರಿಯ ರಾಜರಾಜೇಶ್ವರಿ ಆಸ್ಪತ್ರೆ ಬಳಿ ಆಕ್ರಂದಿಸುತ್ತಿದ್ದ ದೃಶ್ಯ ನೋಡಿದ್ರೆ ಎಂಥವರ ಮನದಲ್ಲೂ ಈ ಪ್ರಶ್ನೆ ಮೂಡುತ್ತಿತ್ತು. ‘ನಾನು ನಿನ್ನೆ ದೇವಸ್ಥಾನಕ್ಕೆ ಹೋಗಿ ರಾತ್ರಿ ಮನೆಗೆ ಬಂದೆ. ಇಂದು ಬೆಳಗ್ಗೆ ನಾನಿನ್ನೂ ಮಲಗಿದ್ದೆ, ನನ್ನ ಮಗ ನನ್ನನ್ನು ನಿದ್ರೆಯಿಂದ ಎದ್ದೇಳಿಸೋದು ಬೇಡ ಅಂತ ಹೇಳದೆ ಶೂಟಿಂಗ್​ಗೆ ಹೋಗಿದ್ದ. ಅವನು ಬದುಕಿದ್ದಾಗ ”ಅಮ್ಮ ನಿನ್ನನ್ನು ಚೆನ್ನಾಗಿ ಸಾಕ್ತೀನಿ” ಅಂತಿದ್ದ. ಈಗ ಅವನೇ ಇಲ್ಲ! ನಾನು ಯಾರನ್ನ ಕೇಳಲಿ? ಬೆಳಗ್ಗೆ ಇದ್ದ ಮಗ, ಈಗ ಇಲ್ಲ… ಮಗನೇ ನಿನಗೆ ಶೂಟಿಂಗ್ ಸಹವಾಸ ಬೇಡಪ್ಪ… ಎಂದು ಸಾಕಷ್ಟು ಸಲ ಹೇಳಿದ್ದೆ. ರಾಗಿ ಗಂಜಿಯಾದ್ರೂ ಕುಡಿದು ಬದುಕೋಣ, ಆ ಫೀಲ್ಡ್ ಬೇಡ ಅಂದಿದ್ದೆ. ಆದ್ರೆ ಅವನು ಚಿತ್ರೋದ್ಯಮದಲ್ಲೇ ಹೆಸರು ಮಾಡಬೇಕು ಅಂತ ಆಸೆ ಪಟ್ಟಿದ್ದ. ನನ್ನ ಮಾತು ಕೇಳದೆ ನನ್ನನ್ನ ಅನಾಥ ಮಾಡಿ ಹೋಗಿಬಿಟ್ಟ…’ ಎಂದು ಮೃತನ ತಾಯಿ ಸೆಲ್ವಿ ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ಇಡೀ‌ ಕುಟುಂಬದ ಜವಾಬ್ದಾರಿಯನ್ನ ಮಗ ವಿವೇಕ್​ ನೋಡ್ಕೋತಾ ಇದ್ದ. ಆತನ ದುಡಿಮೆಯಿಂದಲೇ ಸಂಸಾರ ನಡೀತಾ ಇತ್ತು. ಈಗ ನಮಗೆ ಅನ್ನ ಹಾಕೋರು ಯಾರು? ಅಯ್ಯೋ ಮಗನೇ ಬೇಡ ಬೇಡ ಅಂದ್ರೂ ಸಿನಿಮಾ ಫೀಲ್ಡ್​ಗೆ ಹೋಗಿ ಅಲ್ಲೇ ಕೊನೆಯುಸಿರೆದು ಬಿಟ್ಟಲ್ಲೋ… ಎಂದು ತಾಯಿ ಸೆಲ್ವಿ ರೋಧಿಸುತ್ತಿದ್ದರು.
ನನ್ನ ಮಗ ಸತ್ತಿದ್ದಾನೆ ಎಂದು ವಿವೇಕ್​ರ ಚಿಕ್ಕಪ್ಪ ನಮಗೆ ಫೋನ್​ ಮಾಡಿ ಹೇಳಿದ್ರು. ಈ ಘಟನೆಗೆ ಸಿನಿಮಾ ತಂಡವೇ ಕಾರಣ. ಯಾವುದೇ ರಕ್ಷಣೆ ಇಲ್ಲದೆ ಹೇಗೆ ಸಿನಿಮಾ ಮಾಡಲು ಹೋದ್ರು? ಅಮಾಯಕರ ಜೀವದ ಜತೆ ಚೆಲ್ಲಾಟವಾಡ್ತಿದ್ದಾರೆ. ವಿವೇಕ್ ಅವರ ಚಿಕ್ಕಪ್ಪ ಶೂಟಿಂಗ್​ನಲ್ಲಿ ಕೆಲಸ ಮಾಡ್ತಾರೆ. ಈ ಘಟನೆ ಆದಾಗ ಅವರು ಅಲ್ಲೇ ಇದ್ರು… ಎಂದು ಕಣ್ಣೀರಿಟ್ಟರು.
VIDEO| ‘ಲವ್​ ಯೂ ರಚ್ಚು’ ಶೂಟಿಂಗ್​ನಲ್ಲಿ ದುರಂತ: ಸಾವಿಗೂ ಮುನ್ನ ಚಿತ್ರೀಕರಿಸಿದ್ದ ವಿವೇಕ್​ರ ಸಾಹಸ ದೃಶ್ಯ ಇಲ್ಲಿದೆ…

‘ಲವ್​ ಯೂ ರಚ್ಚು’ ಸಿನಿಮಾ ಶೂಟಿಂಗ್​ ವೇಳೆ ದುರಂತ: ಓರ್ವ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

ನನ್ನ ತಾಯಾಣೆ.. ಅಷ್ಟೊಂದು ಹಣವನ್ನು ಜೀವನದಲ್ಲಿ ನೋಡಿಯೇ ಇರಲಿಲ್ಲ: ಮಂಜು ಪಾವಗಡ

ವಾಂತಿ ಮಾಡಲು ಹೋದ ಮಹಿಳೆ ಬಸ್​ನಿಂದ ಬಿದ್ದು ಸಾವು! ಕಗ್ಗತ್ತಲಿನ ಕಾಡಲ್ಲಿ 8 ಕಿ.ಮೀ ದೂರ ಶವ ಹೊತ್ತ ಗ್ರಾಮಸ್ಥರು

ಮದ್ವೆಯಾದ 23 ದಿನಕ್ಕೇ ನವದಂಪತಿ ದುರಂತ ಸಾವು! ಅತ್ತಿಗೆಯ ಪ್ರಾಣವೂ ಹೋಯ್ತು…

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:one × 5 =
Remember me
