ಬಾಗಲಕೋಟೆ:ಗೆಲುವಿನ‌ ಸರದಾರ ಲವ್ಲಿಬಾಯ್ ಎಂದೇ ಹೆಸರುವಾಸಿಯಾಗಿದ್ದ ಲವ್ಲಿಬಾಯ್ ಟಗರು ಹೃದಯಾಘಾತದಿಂದ ಮೃತಪಟ್ಟಿದೆ. ಕಾಳಗಕ್ಕೆ ಹೆಸರಾಗಿದ್ದ, ಮುನ್ನೂರಕ್ಕೂ ಹೆಚ್ಚು ಟಗರುಗಳಿಗೆ ಡಿಚ್ಚಿ ಹೊಡೆದು ಸೋಲಿಸಿದ್ದ ಲವ್ಲಿಬಾಯ್ ಟಗರು ಇನ್ನು ನೆನಪು ಮಾತ್ರ.
ಬಾಗಲಕೋಟೆ ತಾಲೂಕಿನ ಸೀಗಿಕೇರಿ ಗ್ರಾಮದ ನಾಟಕಕಾರ ಎಚ್​.ಎನ್. ಸೇಬಣ್ಣವರ ಅವರ ಮನೆಯಲ್ಲಿ ಸಾಕಿದ್ದ ಲವ್ಲಿಬಾಯ್ ಟಗರು ಸಾಧನೆ ಅಸಮಾನ್ಯ. 8 ಲಕ್ಷ ರೂಪಾಯಿ ಕೊಡ್ತೀವಿ ಕೊಡಿ ಎಂದ್ರೂ ಈ ಟಗರನ್ನು ಸೇಬಣ್ಣವರ ಅವರು ಮಾರಾಟ ಮಾಡಿರಲಿಲ್ಲ. ಯಾಕಂದ್ರೆ ಈ ಟಗರು ಮೇಲೆ ಅವರಿಗೆ ಅಪಾರ ಪ್ರೀತಿ ಇತ್ತು. ಮುನ್ನೂರಕ್ಕೂ ಹೆಚ್ಚು ಟಗರುಗಳಿಗೆ ಡಿಚ್ಚಿ ಹೊಡೆದು ಸೋಲಿಸಿದ್ದ ಈ ಲವ್ಲಿಬಾಯ್​ ಟಗರು ಚಿನ್ನ, ಬೆಳ್ಳೆ, ಬೈಕ್, ಹೋರಿ, ಲಕ್ಷಾಂತರ ರೂಪಾಯಿ ಬಹುಮಾನ ಗಳಿಸಿತ್ತು.
6 ವರ್ಷ ವಯಸ್ಸಿಗೇ ಲವ್ಲಿಬಾಯ್​ ಟಗರು ಮಂಗಳವಾರ ಬದುಕಿನ ಪಯಣ ಮುಗಿಸಿದ್ದು, ಸೇಬಣ್ಣವರ ಕುಟುಂಬಕ್ಕೆ ತೀವ್ರ ಆಘಾತ ನೀಡಿದೆ. ಗ್ರಾಮಸ್ಥರೂ ಟಗರಿನ ಸಾವಿನ ಸುದ್ದಿ ಕೇಳಿ ಕಂಬನಿ ಮಿಡಿದಿದ್ದಾರೆ. ಮೃತ ಟಗರಿಗೆ ಗ್ರಾಮದಲ್ಲಿ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಟಗರಿನ ಮೃತದೇಹಕ್ಕೆ ಹೂವಿನ ಮಾಲೆ, ಹಣೆಗೆ ಬೆಳ್ಳಿ ಖಡಗ, ದೇಹಕ್ಕೆ ಭಂಡಾರ ಬಳಿದು ಪ್ರಶಸ್ತಿಗಳನ್ನು ಪಾರ್ಥೀವ ಶರೀರದ ಮುಂದೆ ಇಟ್ಟು ಶ್ರದ್ಧಾಂಜಲಿ ಸಲ್ಲಿಸಿ, ಅಂತಿಮ ದರ್ಶನ ಪಡೆಯಲು ಟಗರು ಅಭಿಮಾನಿಗಳಿಗೆ ವ್ಯವಸ್ಥೆ ಮಾಡಲಾಗಿದೆ.
ಮಲೆನಾಡು ಗಿಡ್ಡ ಹಿರಿಯಜ್ಜಿ ಇನ್ನಿಲ್ಲ: 36 ವರ್ಷ ಬದುಕಿ ದಾಖಲೆ ಬರೆದಿದ್ದ ಕೌಲೆ ಇನ್ನು ನೆನಪು ಮಾತ್ರ

ಶಿವಮೊಗ್ಗದ ಹರ್ಷನ ಕುಟುಂಬಕ್ಕೆ ಮಂತ್ರಾಲಯ ಮಠದಿಂದ ನೆರವು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:fifteen − two =
Remember me
