ಕಲಬುರಗಿ:ನಗರದ‌ ಕಾಂಗ್ರೆಸ್ ಕಚೇರಿ ಬಳಿ ಬುಧವಾರ ತಡರಾತ್ರಿ ರವಿ ಪೂಜಾರಿಯನ್ನ ದುಷ್ಕರ್ಮಿಗಳ ತಂಡ ಭೀಕರವಾಗಿ ಹತ್ಯೆ ಮಾಡಿದ್ದು, ಗುರುವಾರ ಬೆಳ್ಳಂಬೆಳಗ್ಗೆ ಈ ಸುದ್ದಿ ಕೇಳಿ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಅಂದಹಾಗೆ ಕೊಲೆಯಾದವ ಭೂಗತ ಪಾತಕಿ ರವಿ ಪೂಜಾರಿ ಅಲ್ಲ, ಪ್ರೇಯಸಿಯನ್ನ ಪೆಟ್ರೋಲ್​ ಸುರಿದು ಸುಟ್ಟುಹಾಕಿ ಜೈಲಿಗೆ ಹೋಗಿ ಬಂದಿದ್ದ ರವಿ ಪೂಜಾರಿ.
ರವಿ ಪೂಜಾರಿ(32) ಹತ್ಯೆಯಾದವ. ಬುಧವಾರ ತಡರಾತ್ರಿ 2 ಗಂಟೆಯಲ್ಲಿ ಈತನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ರವಿ ಪೂಜಾರಿ ಈ ಹಿಂದೆ ಆಶಾರಾಣಿ ಎಂಬಾಕೆಯನ್ನ ಮದುವೆ ಆಗುವುದಾಗಿ ನಂಬಿಸಿ ಗರ್ಭಿಣಿ ಮಾಡಿದ್ದ. ನಂತರ ಆಶಾರಾಣಿಗೆ ಗರ್ಭಪಾತ ಮಾಡಿಸಲು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದ. ಗರ್ಭಪಾತವಾಗಿ ಯುವತಿ ಸಾವನ್ನಪ್ಪಿದ್ದಳು. ಆಕೆಯ ಮೃತದೇಹವನ್ನ ಕಾರಿನಲ್ಲಿ ಹೈದ್ರಾಬಾದ್ ಸಮೀಪ‌ ತೆಗೆದುಕೊಂಡು ಹೋಗಿ ಅಲ್ಲೇ ಪೆಟ್ರೋಲ್ ಸುರಿದು ಶವ ಸಟ್ಟುಹಾಕಿದ್ದ. ಈ ಪ್ರಕರಣದಲ್ಲಿ ಜೈಲು ಸೇರಿದ್ದ ರವಿ ಪೂಜಾರಿ, ಇತ್ತೀಚಿಗೆ ಹೊರ ಬಂದಿದ್ದ.
ಹಳೇ ವೈಷಮ್ಯದ ಹಿನ್ನೆಲೆ ರವಿ ಪೂಜಾರಿಯನ್ನ ಬುಧವಾರ ರಾತ್ರಿ ಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸತ್ತು ಮಲಗಿದ್ದವ ಕರುಳ ಕೂಗಿಗೆ ಓಗೊಟ್ಟು ಮತ್ತೆ ಬದುಕಿದ! ಅಂತ್ಯಸಂಸ್ಕಾರ ವೇಳೆ ನಡೆದ ಪವಾಡ ಕೇಳಿದ್ರೆ ಶಾಕ್​ ಆಗ್ತೀರಿ

ಕೆಲಸಕ್ಕಾಗಿ ಮನೆಗೆ ಬಂದ ಯುವತಿಗೆ ಗ್ರಾಪಂ ಸದಸ್ಯ ಹೀಗಾ ಮಾಡ್ಹೋದು? ಈ ಕೃತ್ಯ ಕೇಳಿದ್ರೆ ಹಿಡಿಶಾಪ ಹಾಕ್ತೀರಿ

ನನ್ನ ಪತ್ನಿ ಪರಪುರುಷನೊಂದಿಗೆ ಓಡಿಹೋಗಿದ್ದಾಳೆ… ಎಂದವನ ಅಜ್ಜಿ ಹೊಲದಲ್ಲಿ ಅಡಗಿತ್ತು ಭಯಾನಕ ರಹಸ್ಯ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:4 × two =
Remember me
