ಮಂಡ್ಯ:ಮದ್ದೂರು ತಾಲೂಕು ಆಬಲವಾಡಿ ಗ್ರಾಮದ ಇತಿಹಾಸ ಪ್ರಸಿದ್ಧ ತೋಪಿನ ತಿಮ್ಮಪ್ಪನ ಹರಿಸೇವೆ ಶನಿವಾರ ವಿಜೃಂಭಣೆಯಿಂದ ನಡೆಯಿತು. ಈ ಹಿನ್ನೆಲೆ ಭಾನುವಾರ ಬೆಳಗ್ಗೆ ಪ್ರಸಾದದ ರೂಪದಲ್ಲಿ ಭಕ್ತರಿಗೆ ತಾವರೆಎಲೆ ಮೇಲೆ ಊಟ ನೀಡಲಾಯಿತು.
ನಾಗಮಂಗಲ ಶಾಸಕ ಸುರೇಶ್‌ಗೌಡ, ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ ಭಕ್ತರೊಂದಿಗೆ ದೇವರ ಪ್ರಸಾದ ಸ್ವೀಕರಿಸಿದರು. ದೇವರ ಹರಿಸೇವೆ ಕಾರ್ಯಕ್ರಮಗಳಿಗೆ ಇಸ್ತ್ರಿ ಹಾಗೂ ಬಾಳೆ ಎಲೆಗಳಲ್ಲಿ ಊಟ ನೀಡುವುದು ಸಾಮಾನ್ಯ. ಆದರೆ, ತೋಪಿನ ತಿಮ್ಮಪ್ಪನ ಹರಿಸೇವೆ ತಾವರೆ ಎಲೆಯಲ್ಲಿ ಊಟ ನೀಡಲಾಗುತ್ತದೆ.

ತಿಮ್ಮಪ್ಪನಿಗೆ ತಾವರೆ ಇಷ್ಟ ಎಂಬ ಕಾರಣಕ್ಕೆ ಭಕ್ತರಿಗೆ ದೇಗುಲದ ಆವರಣದಲ್ಲಿ ತಾವರೆ ಎಲೆಯಲ್ಲಿ ಅನ್ನಸಂತರ್ಪಣೆ ಆಯೋಜಿಸುವುದು ಅತ್ಯಂತ ವಿಶೇಷ. ಹರಿಸೇವೆಗೆ ಜಿಲ್ಲೆ ಹಾಗೂ ವಿವಿಧೆಡೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿ ತಾವರೆ ಎಲೆಯಲ್ಲಿ ಊಟ ಮಾಡುತ್ತಾರೆ.
ಮಲ್ಪೆ ಕಡಲ ತೀರದಲ್ಲಿ ಬೀಳುತ್ತಿದೆ ಚಿನ್ನ! ಕಸದ ರಾಶಿಯಲ್ಲಿ ಬಂಗಾರದ ಬೇಟೆಗೆ ಮುಗಿಬಿದ್ದ ಜನ

ಹುಟ್ಟಿನಿಂದ ಕಷ್ಟದಲ್ಲೇ ಬೆಳೆದ ಬಾಲೆಯ ಮೊಗದಲ್ಲಿ ನಗು ಅರಳಿಸಿದ ದಾವಣಗೆರೆ ಎಸ್ಪಿ! ಈ ಸ್ಟೋರಿ ಕೇಳಿದ್ರೆ ಭಾವುಕರಾಗ್ತೀರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − five =
Remember me
