ಮಂಡ್ಯ:ಅಯ್ಯೋ ವಿಧಿಯೇ ನೀನೆಷ್ಟು ಕ್ರೂರಿ… ಎಂದು ಪದೇಪದೆ ಹಿಡಿಶಾಪ ಹಾಕುತ್ತಲೇ ಇರಬೇಕು ಅನ್ನಿಸುವಂತೆ ಮಾಡಿದೆ ಮಹಾಮಾರಿ ಕರೊನಾ. ನಮ್ಮ ಸುತ್ತ-ಮುತ್ತ ನಿತ್ಯ ಒಂದಿಲ್ಲೊಂದು ಕರುಣಾಜನಕ ಘಟನೆ ಸಂಭವಿಸುತ್ತಲೇ ಇದೆ. ಇಂತಹದ್ದೇ ಮತ್ತೊಂದು ದುರಂತ ನಡೆದಿದ್ದು, ಈ ಬಗ್ಗೆ ಕೇಳಿದ್ರೆ ಕಣ್ತುಂಬಿ ಬರುತ್ತೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮದ ಶಿಲ್ಪಶ್ರೀ ಅವರಿಗೆ ಹೆರಿಗೆ ಆಗಿ 4 ದಿನ ಆಗಿತ್ತಷ್ಟೆ. 5ನೇ ದಿನಕ್ಕೆ ಮಹಾಮಾರಿ ಕರೊನಾಗೆ ಬಾಣಂತಿ ಶಿಲ್ಪಶ್ರೀ ಬಲಿಯಾಗಿದ್ದು, ಏನೂ ಅರಿಯದ ಕಂದ ತಾಯಿ ಇಲ್ಲದೆ ತಬ್ಬಲಿಯಾಗಿದೆ.
ಶಿಲ್ಪಶ್ರೀ ಅವರ ಪತಿ ಜಿ.ಟಿ.ವೀರೇಶ್​ ಅವರು ಬೆಂಗಳೂರಿನ ರಕ್ತನಿಧಿ ಕೇಂದ್ರದ ನೌಕರ. ದಂಪತಿ ಇಬ್ಬರೂ ಬೆಂಗಳೂರಿನಲ್ಲೇ ವಾಸವಿದ್ದರು. ಈಗಾಗಲೇ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಇದೀಗ ಜನಿಸಿರುವ 3ನೇ ಮಗು ಗಂಡು. ಗರ್ಭಿಣಿಯಾಗಿದ್ದ ಶಿಲ್ಪಶ್ರೀಗೆ ಹತ್ತು ದಿನದ ಹಿಂದೆ ಕರೊನಾ ಸೋಂಕು ತಗುಲಿತ್ತು. ಅವರನ್ನು ಮಂಡ್ಯದ ಕರೊನಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಶಿಲ್ಪಶ್ರೀ ಸ್ಥಿತಿ ಚಿಂತಾಜನಕವಾಗಿದ್ದ ಕಾರಣ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಮಗುವನ್ನ ತೆಗೆದಿದ್ದರು. ಮಗುವಿಗೆ ಜಿಲ್ಲಾಸ್ಪತ್ರೆಯ ಮಕ್ಕಳ ವಿಭಾಗದ ತೀವ್ರನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ಕೊಡಿಸಲಾಗುತ್ತಿದೆ. ತೀವ್ರ ಉಸಿರಾಟ ಸಮಸ್ಯೆಯಿಂದ ಶಿಲ್ಪಶ್ರೀ ಮಂಗಳವಾರ ಕೊನೆಯುಸಿರೆಳೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಶಿಲ್ಪಶ್ರೀ ಅವರ ಅಂತ್ಯಕ್ರಿಯೆಯನ್ನು ಪುರಸಭಾ ಸದಸ್ಯ ಪ್ರಿಯಾಂಕ ಅಪ್ಪುಗೌಡ, ಸಮಾಜ ಸೇವಕರಾದ ಅಪ್ಪು ಪಿ. ಗೌಡ, ಶ್ರೇಯಸ್, ಅಭಿಷೇಕ್ ಮತ್ತು ತಂಡ ನೆರವೇರಿಸಿದೆ. ತನ್ನ ಹುಟ್ಟುಹಬ್ಬದ ದಿನದಂದೂ ಮೃತರ ದೇಹಕ್ಕೆ ಹೆಗಲು ನೀಡುವ ಮೂಲಕ ಅಪ್ಪು ಪಿ. ಗೌಡ ಮಾನವೀಯತೆ ಮೆರೆದಿದ್ದಾರೆ.
ಸಾವಿಗೂ 4 ದಿನ ಮೊದಲೇ ಸಂಚಾರಿ ವಿಜಯ್​ ಬರೆದಿದ್ದ ಈ ಬರಹ ಓದಿದ್ರೆ ಕಣ್ಣು ತುಂಬಿ ಬರುತ್ತೆ

ಮೈಸೂರಿನಲ್ಲಿ ಇಂಜಿನಿಯರ್​ ಸಾವು! 2 ತಿಂಗಳ ಹಿಂದಷ್ಟೇ ಮದ್ವೆ ಆಗಿದ್ದವರ ಬಾಳಿಗೆ ಕೊಳ್ಳಿ ಇಟ್ಟಿದ್ದೇನು?

ನನ್ನ ಪತ್ನಿ ಪರಪುರುಷನೊಂದಿಗೆ ಓಡಿಹೋಗಿದ್ದಾಳೆ… ಎಂದವನ ಅಜ್ಜಿ ಹೊಲದಲ್ಲಿ ಅಡಗಿತ್ತು ಭಯಾನಕ ರಹಸ್ಯ!

ವರದಕ್ಷಿಣೆ ಕಿರುಕುಳ: ಮದ್ವೆಯಾದ ಒಂದೇ ವರ್ಷಕ್ಕೆ ದುರಂತ ಅಂತ್ಯ ಕಂಡ 19 ವರ್ಷದ ಯುವತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 11 =
Remember me
