ಹುಬ್ಬಳ್ಳಿ:10 ವರ್ಷದಿಂದ ಗಾಳ ಹಾಕಿದ್ದಕ್ಕೆ ಈಗ ಮೀನು ಬಿದ್ದಿದೆ. ನನ್ನ ರಾಜಕೀಯ ಗುರುಗಳ ಮಗನನ್ನು ನನ್ನ ಅಧ್ಯಕ್ಷತೆಯಲ್ಲಿ ಪಕ್ಷಕ್ಕೆ ಕರೆತಂದಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಹುಬ್ಬಳ್ಳಿಯ ಗೋಕುಲ ಗಾರ್ಡನ್​ನಲ್ಲಿ ಶುಕ್ರವಾರ ಮಾಜಿ ಶಾಸಕ ಮಧು ಬಂಗಾರಪ್ಪ ಜೆಡಿಎಸ್​ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ಮಧು ಬಂಗಾರಪ್ಪಗೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಪಕ್ಷದ ಬಾವುಟ ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡಿರು. ಈ ವೇಳೆ ಮಾತನಾಡಿದ ಡಿಕೆಶಿ, ನಾನು ಬಂಗಾರಪ್ಪನವರ ಗರಡಿಯಲ್ಲೇ ಬೆಳೆದಿದ್ದು. ಸುಮಾರು ಹತ್ತು ವರ್ಷಗಳಿಂದ ಗಾಳ ಹಾಕಿದ್ದೆ. ಬಹಳ ದಿನದ ನಂತರ ಬಲೆಗೆ ಮಧು ಬಂಗಾರಪ್ಪ ಬಿದ್ದಿದ್ದಾರೆ. ಮೊದಲೇ ಬಂದಿದ್ರೆ ಈಗಾಗಲೇ ಮಧು ಮಾಜಿ ಸಚಿವರಾಗ್ತಿದ್ರು ಎಂದರು.
ನನ್ನ ರಾಜಕೀಯ ಗುರುಗಳ ಮಗನನ್ನ ನನ್ನ ಅಧ್ಯಕ್ಷತೆಯಲ್ಲಿ ಕರೆದುಕೊಂಡು ಬಂದಿದ್ದೇನೆ. ಇವರನ್ನ ಕರೆತಂದಿದ್ದು ನನ್ನ ಭಾಗ್ಯ ಎಂದ ಡಿಕೆಶಿ, ಇವತ್ತು ಕಾಂಗ್ರೆಸ್ ಪಕ್ಷಕ್ಕೆ ಬಹಳಷ್ಟು ಜನ ಸೇರ್ಪಡೆಯಾಗ್ತಿದ್ದಾರೆ. ನಾವು ಮಧು ಬಂಗಾರಪ್ಪ ಅವರನ್ನ ವ್ಯಕ್ತಿಯಾಗಿ ಸೇರಿಸಿಕೊಳ್ಳುತ್ತಿಲ್ಲ. ಒಂದು ಶಕ್ತಿಯಾಗಿ ಕಾಂಗ್ರೆಸ್​ಗೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದೇವೆ. ಮಧು ಜತೆ ಸೇರ್ಪಡೆಯಾಗುತ್ತಿರೋ ಎಲ್ಲರಿಗೂ ಪಕ್ಷಕ್ಕೆ ಸ್ವಾಗತ ಎಂದು ಡಿಕೆಶಿ ಹೇಳಿದರು.
ಮಧು ಬಂಗಾರಪ್ಪ ಜತೆ ಜೆಡಿಎಸ್​ನ ಹಲವು ಮುಖಂಡರು ಕೈ ಸೇರ್ಪಡೆಯಾದರು. ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ, ಸಲೀಮ್ ಅಹ್ಮದ್, ಈಶ್ವರ್ ಖಂಡ್ರೆ ಮತ್ತಿತರ ನಾಯಕರು ಉಪಸ್ಥಿತರಿದ್ದರು.
ಮನೆಯೊಳಗೆ ಅಕ್ಕ-ತಂಗಿ ನಿಗೂಢ ಸಾವು! 5 ದಿನದ ಹಿಂದೆ ಆ ಮನೆಗೆ ಬಂದು ಹೋಗಿದ್ದ ಅಕ್ಕನ ಗಂಡ

ಗಂಡನಿಗೆ ಹಣದಾಹ, ಮಾವನಿಗೆ ಕಾಮದಾಹ… ಪೊಲೀಸರ ಮುಂದೆ ನರಕಯಾತನೆ ಬಿಚ್ಚಿಟ್ಟ ಯುವತಿ

ಕಿಡ್ನ್ಯಾಪ್‌ ಆಗಿದ್ದ ಕೇರಳ ಯುವಕನನ್ನು ಪ್ರಾಣದ ಹಂಗು ತೊರೆದು ಕಾಪಾಡಿದ ಹಾಸನ ಪೊಲೀಸರು! ವಿಡಿಯೋ ವೈರಲ್​

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:seventeen − 2 =
Remember me
