ತುಮಕೂರು:ರಸ್ತೆಯಲ್ಲಿ ಒಂದು ರೂಪಾಯಿ ಕಂಡರೂ ತಕ್ಷಣ ಎತ್ತಿ ಜೇಬಿಗಿಟ್ಟುಕೊಳ್ಳವವರೇ ಹೆಚ್ಚು, ಇನ್ನು ಚಿನ್ನಾಭರಣ ಸಿಕ್ಕರೆ ಬಿಡ್ತಾರಾ? ಚಿನ್ನ ಅಥವಾ ಹಣ ಕಳೆದುಕೊಂಡವರು ಪಕ್ಕದಲ್ಲಿ ಗೋಳಾಡುತ್ತಿದ್ದರೂ ತಮಗೇನೂ ಗೊತ್ತಿಲ್ಲ ಎಂಬಂತೆ ಕ್ಷಣಾರ್ಧದಲ್ಲೇ ಮಾಯವಾಗಿ ಬಿಡ್ತಾರೆ. ಅಂತಹ ಕಾಲದಲ್ಲಿ ಇಲ್ಲೊಬ್ಬ ಕಂಡಕ್ಟರ್​ ಮಾದರಿಯಾಗಿ ನಿಲ್ಲುತ್ತಾರೆ. ಬಸ್​ನಲ್ಲಿ ಸಿಕ್ಕ ಚಿನ್ನದ ಆಭರಣವನ್ನು ಸಂಬಂಧಪಟ್ಟವರಿಗೆ ಖುದ್ದು ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.
ಮಾನವೀಯತೆ ಮೆರೆದ ಕಂಡಕ್ಟರ್​ ಹೆಸರು ಶ್ರೀಧರ್​. ಮಧುಗಿರಿ ಕೆಎಸ್​ರ್​ಟಿಸಿ ಡಿಪೋದಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮಧುಗಿರಿಯಿಂದ ಬೆಂಗಳೂರಿಗೆ ಹೋಗುವಾಗ ಬಸ್​ನಲ್ಲಿಯೇ ಪ್ರಯಾಣಿಕರೊಬ್ಬರು ಬ್ಯಾಗ್​ವೊಂದನ್ನು ಮರೆತು ಹೋಗಿದ್ದರು. ಅದರಲ್ಲಿ ಒಂದು ಜೊತೆ ಚಿನ್ನದ ಕಿವಿಯೋಲೆ, ಬೆಳ್ಳಿ ಕಾಲ್ಗೆಜ್ಜೆ ಇತ್ತು. ಇದನ್ನು ಕಳೆದುಕೊಂಡವರು ಅದೆಷ್ಟು ಗೋಳಾಡುತ್ತಿದ್ದಾರೋ ಎಂದು ಮರುಗಿದ ಕಂಡಕ್ಟರ್​, ಕೂಡಲೇ ಅದನ್ನು ಸಂಬಂಧಪಟ್ಟವರಿಗೆ ತಲುಪಿಸಲು ಯತ್ನಿಸುತ್ತಿದ್ದರು.
ಈ ಬ್ಯಾಗ್​ ಇರಕಸಂದ್ರ ಕಾಲನಿಯ ಲಲಿತ ಎಂಬುವರಿಗೆ ಸೇರಿದ್ದಾಗಿದೆ. ಬೆಂಗಳೂರಿನ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ ಬ್ಯಾಗ್ ಅನ್ನು ಲಲಿತಾಗೆ ಶ್ರೀಧರ್ ಹಸ್ತಾಂತರಿಸಿದ್ದಾರೆ.
ನನ್ನ ತಂದೆ ಆರೋಗ್ಯವಾಗಿದ್ದಾರೆ, ದಯವಿಟ್ಟು ಯಾರೂ ವದಂತಿಗೆ ಕಿವಿಗೊಡಬೇಡಿ: ಹಂಸಲೇಖರ ಪುತ್ರಿ ಮನವಿ

ಎಕ್ಸಾಂ ಹಾಲ್​ಟಿಕೆಟ್​ನಲ್ಲಿ ನಟಿ ಐಶ್ವರ್ಯಾ ರೈ ಫೋಟೋ-ಸಹಿ! ಪರೀಕ್ಷೆಗೂ ಮುನ್ನವೇ ವಿದ್ಯಾರ್ಥಿನಿಗೆ ಶಾಕ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 3 =
Remember me
