ತುಮಕೂರು:ಭಯೋತ್ಪಾದನೆ, ಭ್ರಷ್ಟಾಚಾರ, ಅತ್ಯಾಚಾರ, ಲವ್ ಜಿಹಾದ್, ಗೋಹತ್ಯೆಯ ವಿರುದ್ಧ ನಾನು ಹೋರಾಟ ಮಾಡುತಿದ್ದೇನೆ. ಆದರೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಪದೇಪದೆ ವಿಚಾರಣೆ ನೆಪದಲ್ಲಿ ನನಗೆ ಮಾನಸಿಕ ಕಿರುಕುಳ ನೀಡುತಿದ್ದು, ಅನೇಕ ಬಾರಿ ವಿಚಾರಣೆಗೆಂದು ಕರೆದು ಸುಳ್ಳು ಆರೋಪದಡಿ ಬಂಧಿಸಿದ್ದಾರೆ. ಹಿಂದೂ ಸಮಾಜ ನನ್ನ ಬೆಂಬಲಕ್ಕೆ ನಿಲ್ಲದಿರುವುದು ತುಂಬಾ ನೋವು ತಂದಿದೆ. ನನಗೆ ಪೊಲೀಸರ ಕಿರುಕುಳ ಸಹಿಸಲಾಗುತ್ತಿಲ್ಲ. ನನಗೆ ದಯಾಮರಣ ನೀಡಿ ಎಂದು ರಾಜ್ಯಪಾಲರಿಗೆ ಮಧುಗಿರಿಮೋದಿ ಮನವಿ ಪತ್ರ ಸಲ್ಲಿಸಿದ್ದಾರೆ.
ರಾಜ್ಯ ಹಿಂದು ಸಾಮ್ರಾಟ್ ಧರ್ಮಸೇನೆಯ ಸಂಸ್ಥಾಪಕ ಅಧ್ಯಕ್ಷ ಅತುಲ್ ಕುಮಾರ್ ಸಭರ್ವಾಲ್ @ ಮಧುಗಿರಿಮೋದಿ ಪೊಲೀಸ್ ಕಿರುಕುಳದಿಂದ ನೊಂದು ದಯಾಮರಣ ಕೋರಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ.
ಪೊಲೀಸರ ಕಿರುಕುಳ ಸಹಿಸಲಾಗದೆ ರಾಜ್ಯಪಾಲರಿಗೆ ಜಿಲ್ಲಾಧಿಕಾರಿಯವರ ಮೂಲಕ ಸೋಮವಾರ ದಯಾಮರಣಕ್ಕೆ ಅರ್ಜಿ ಸಲ್ಲಿಸಿರುವದಾಗಿ ಮಧುಗಿರಿ ಮೋದಿ ತಿಳಿಸಿದ್ದಾರೆ.
ಭಯೋತ್ಪಾದಕರಿಗೆ, ಅತ್ಯಾಚಾರಿಗಳಿಗೆ, ಭ್ರಷ್ಟರಿಗೆ, ಸಮಾಜಘಾತುಕರಿಗೆ ಇಲ್ಲದ ಪೊಲೀಸ್​ ಕಿರುಕುಳ ನನ್ನ ಮೇಲೇಕೆ? ಇದನ್ನು ನಾನೇ ಪ್ರಶ್ನಿಸಬೇಕು! ನನ್ನವರೆಂದವರು ಯಾರೂ ಪ್ರಶ್ನಿಸಲಾರರು ಎಂಬುದು ಮಧುಗಿರಿಮೋದಿ ಅಳಲು.
ನನ್ನ ಪತ್ನಿ ಪರಪುರುಷನೊಂದಿಗೆ ಓಡಿಹೋಗಿದ್ದಾಳೆ… ಎಂದವನ ಅಜ್ಜಿ ಹೊಲದಲ್ಲಿ ಅಡಗಿತ್ತು ಭಯಾನಕ ರಹಸ್ಯ!

ಸತ್ತು ಮಲಗಿದ್ದವ ಕರುಳ ಕೂಗಿಗೆ ಓಗೊಟ್ಟು ಮತ್ತೆ ಬದುಕಿದ! ಅಂತ್ಯಸಂಸ್ಕಾರ ವೇಳೆ ನಡೆದ ಪವಾಡ ಕೇಳಿದ್ರೆ ಶಾಕ್​ ಆಗ್ತೀರಿ

ಸಾವಿಗೂ 4 ದಿನ ಮೊದಲೇ ಸಂಚಾರಿ ವಿಜಯ್​ ಬರೆದಿದ್ದ ಈ ಬರಹ ಓದಿದ್ರೆ ಕಣ್ಣು ತುಂಬಿ ಬರುತ್ತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − two =
Remember me
