ಮಧ್ಯಪ್ರದೇಶ:ಭಾರತ ಚಿತ್ರರಂಗದಲ್ಲೇ ಮೈಲಿಗಲ್ಲು ಸೃಷ್ಟಿಸಿದ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ ನಿಂದ ಪ್ರೇರಿತಗೊಂಡ 19 ವರ್ಷದ ಯುವಕನೊಬ್ಬ ನಾಲ್ವರು ಸೆಕ್ಯುರಿಟಿ ಗಾರ್ಡ್​ಗಳನ್ನು ಕೊಂದಿದ್ದಾನೆ.
ಇಂತಹ ಅಮಾನುಷ ಪ್ರಕರಣ ಮಧ್ಯಪ್ರದೇಶದಲ್ಲಿ ನಡೆದಿದೆ. ಆರೋಪಿ ಶಿವಪ್ರಸಾದ್​ನನ್ನು ಪೊಲೀಸರು ಬಂಧಿಸಿದ್ದಾರೆ. ಈತನ ಬಂಧನ ತಡವಾಗಿದ್ದರೆ ಇನ್ನೂ ಹಲವರ ಹತ್ಯೆಯಾಗುತ್ತಿತ್ತು. ಆತನ ಮುಂದಿನ ಟಾರ್ಗೆಟ್​ ಪೊಲೀಸರ ಹತ್ಯೆಯಾಗಿತ್ತಂತೆ!
ಕೆಜಿಎಫ್​​ ಚಿತ್ರದ ಹೀರೊ ಮಾದರಿಯಲ್ಲಿ ಪ್ರಸಿದ್ಧನಾಗಲು ಈ ಕೃತ್ಯ ಎಸಗಿದ್ದಾಗಿ ಆತ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿಯು ಕೊಲೆ ಮಾಡಿದ ವ್ಯಕ್ತಿಯೊಬ್ಬನಿಂದ ಕದ್ದಿದ್ದ ಮೊಬೈಲ್​ ಫೋನ್​ ಟ್ರ್ಯಾಕ್​ ಮಾಡಿ ಪೊಲೀಸರು ಆತನನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.
ಸೆಕ್ಯುರಿಟಿ ಗಾರ್ಡ್​ಗಳು ಮಲಗಿದ್ದ ವೇಳೆಯಲ್ಲಿ ಶಿವಪ್ರಸಾದ್​ ಈ ಕೃತ್ಯ ಎಸಗಿದ್ದಾನೆ. ಸಾಗರ್​ ಜಿಲ್ಲೆಯಲ್ಲಿ ಮೂವರು, ಭೋಪಾಲ್​ನಲ್ಲಿ ಒಬ್ಬರನ್ನು ಈತ ಹತ್ಯೆ ಮಾಡಿದ್ದಾನೆ. ಈ ಪೈಕಿ ಒಂದು ಹತ್ಯೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದರಲ್ಲಿ ಆರೋಪಿಯು ಸೆಕ್ಯುರಿಟಿ ಗಾರ್ಡ್​ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿ, ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿ, ನಂತರ ತನ್ನನ್ನು ಯಾರೂ ನೋಡಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಂಡು ಪರಾರಿಯಾಗಿದ್ದಾನೆ.
ಮುಂದಿನ ದಿನಗಳಲ್ಲಿ ಪೊಲೀಸರನ್ನೇ ಹತ್ಯೆ ಮಾಡಲು ಯೋಚಿಸಿದ್ದಾಗಿ ಆರೋಪಿ ಶಿವಪ್ರಸಾದ್​ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ. ಪ್ರಸಿದ್ಧಿಯಾಗಬೇಕು ಎಂಬ ಒಂದೇ ಕಾರಣಕ್ಕೆ ರಾತ್ರಿ ಹೊತ್ತು ನಿದ್ರೆಮಂಪರಿನಲ್ಲಿರುತ್ತಿದ್ದ ಸೆಕ್ಯುರಿಟಿ ಗಾರ್ಡ್​ಗಳನ್ನ ಕಲ್ಲು, ಕಬ್ಬಿಣದ ರಾಡ್​, ಸುತ್ತಿಗೆಯಿಂದ ಹಲ್ಲೆ ಮಾಡಿ ಭೀಕರವಾಗಿ ಕೊಲೆ ಮಾಡುತ್ತಿದ್ದ. ಯಾರೊಬ್ಬರನ್ನೂ ಲೂಟಿ ಮಾಡಿಲ್ಲ. ಅವನ ಉದ್ದೇಶ ಕೊಲೆ ಮಾಡುವುದಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಹೆರಿಗೆ ವೇಳೆ ಮಗು ಮೃತಪಟ್ಟರೆ 60 ದಿನ ವಿಶೇಷ ರಜೆ: ತಾಯಿಗೆ ಆಗುವ ಭಾವನಾತ್ಮಕ ಆಘಾತ ಪರಿಗಣಿಸಿ ಆದೇಶ

ಚನ್ನಪಟ್ಟಣದಲ್ಲಿ ನಕಲಿ ಬಾಬಾ! ದೇವಮಾನವ ಹೆಸರಲ್ಲಿ ಹಲವರಿಗೆ ವಂಚನೆ, ಭಜನೆಗೆ ಜಾಗ ಕೊಟ್ಟಾಕೆಗೂ ಮೋಸ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:15 − ten =
Remember me
