ಮಾಗಡಿ:ರಾಮನಗರ ಜಿಲ್ಲೆಯ ಪುರಾತನ ಮಠಗಳಲ್ಲಿ ಒಂದಾದ ಮಾಗಡಿಯ ಕಂಚುಗಲ್ ಬಂಡೇ ಮಠದ ಪೀಠಾಧ್ಯಕ್ಷ ಶ್ರೀ ಬಸವಲಿಂಗ ಸ್ವಾಮೀಜಿ (45) ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ ಆಗಿದ್ದು, ಭಕ್ತರಲ್ಲಿ ಆತಂಕ ಮೂಡಿದೆ.
ಕಂಚುಗಲ್​ ಬಂಡೇ ಮಠದ ಶ್ರೀ ಮಹಾಲಿಂಗೇಶ್ವರ ಸ್ವಾಮಿ ದೇವಾಲಯದ ಎದುರಿಗೆ ಇರುವ ಕೊಠಡಿಯಲ್ಲಿ ಶ್ರೀಗಳು ರಾತ್ರಿ ತಂಗಿದ್ದರು. ಆದರೆ ಸೋಮವಾರ ಮುಂಜಾನೆ ಎಂದಿನ ಸಮಯಕ್ಕೆ ಸ್ವಾಮೀಜಿ ಹೊರಗೆ ಬಾರದಿದ್ದರಿಂದ ಆತಂಕಗೊಂಡ ಅಲ್ಲಿಯೇ ಇದ್ದ ಕೆಲವು ವಿದ್ಯಾರ್ಥಿಗಳು ಹೋಗಿ ನೋಡಲಾಗಿ, ಸ್ವಾಮೀಜಿ ಅವರ ಮೃತ ದೇಹ ಕಿಟಕಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಡೆತ್​ನೋಟ್ ಪತ್ತೆ:ಲಭ್ಯ ಮಾಹಿತಿ ಪ್ರಕಾರ ಶ್ರೀಗಳು ಡೆತ್​ನೋಟ್​ ಬರೆದಿಟ್ಟಿದ್ದು, ಇದರಲ್ಲಿ ಏನಿದೆ? ಎನ್ನುವುದು ಇನ್ನು ಬಹಿರಂಗಗೊಂಡಿಲ್ಲ, ಈ ಪತ್ರ ಘಟನಾ ಸ್ಥಳದಲ್ಲಿ ಪೊಲೀಸರಿಗೆ ಲಭ್ಯವಾಗಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಕುದೂರು ಪೊಲೀಸ್​ ಠಾಣೆ ಸಿಪಿಐ ಕುಮಾರ್​ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ವಾಮೀಜಿ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ವಿವಿಧ ಮಠಗಳ ಸ್ವಾಮೀಜಿಗಳು ಹಾಗೂ ಸಾವಿರಾರು ಭಕ್ತರು ಮಠಕ್ಕೆ ಆಗಮಿಸಿದ್ದಾರೆ. ಭಕ್ತರನ್ನ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಚಿಲುಮೆ ಮಠದ ಶ್ರೀಗಳ ರೀತಿಯಲ್ಲೇ ಅದೇ ದಿನ ದುರಂತ ಅಂತ್ಯ ಕಂಡ ಕಂಚುಗಲ್ ಬಂಡೇ ಮಠದ ಸಾಮೀಜಿ! ಡೆತ್​ನೋಟಲ್ಲಿದೆ ರಹಸ್ಯ?

ಜನ ಹುಚ್ಚರಾಗಬಹುದು, ದಾರಿಯಲ್ಲೇ ಬಿದ್ದು ಸಾಯಬಹುದು… ಎಂದು ಭವಿಷ್ಯ ನುಡಿಯುತ್ತಲೇ ಪರಿಹಾರ ತಿಳಿಸಿದ ಕೋಡಿಶ್ರೀ

ಮಂಡ್ಯದಲ್ಲಿ ಇಬ್ಬರು ಫೋಟೋಗ್ರಾಫರ್​ ಸಾವು: ದೀಪಾವಳಿ ಸಡಗರದಲ್ಲಿದ್ದವರ ಬಾಳಲ್ಲಿ ದುರಂತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
