| ಗಂಗಾಧರ್​ ಬೈರಾಪಟ್ಟಣ/ಎಂ.ಎಸ್.​ ಸಿದ್ದಲಿಂಗೇಶ್ವರ್​ರಾಮನಗರಜಿಲ್ಲೆ ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ ಎಚ್​.ಸಿ.ಬಾಲಕೃಷ್ಣ ಮತ್ತು ಮಾಜಿ ಸಚಿವ ಎಚ್.ಎಂ. ರೇವಣ್ಣ ನಡುವಿನ ಮುಸುಕಿನ ಗುದ್ದಾಟ ಬೀದಿಗೆ ಬಂದಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ರೇವಣ್ಣ ಅವರಿಗೇ ಟಿಕೆಟ್​ ನೀಡಿ ಎಂದು ಕೆಪಿಸಿಸಿ ಅಧ್ಯಕ್ಷರಿಗೆ ಪತ್ರ ಬರೆಯುವ ಮೂಲಕ ಬಾಲಕೃಷ್ಣ ನೇರ ಯುದ್ಧಕ್ಕೆ ಇಳಿದಿದ್ದಾರೆ.
ರಾಜಕೀಯ ಜೀವನದುದ್ದಕ್ಕೂ ರೇವಣ್ಣ ವಿರುದ್ಧವೇ ಬಾಲಕೃಷ್ಣ ಹೋರಾಟ ಮಾಡಿಕೊಂಡು ಬಂದಿದ್ದು, ಕಾಂಗ್ರೆಸ್​ ಸೇರ್ಪಡೆ ನಂತರವೂ ಇಬ್ಬರ ನಡುವಿನ ಸಂಬಂಧ ಗಟ್ಟಿ ಆಗಲೇ ಇಲ್ಲ. ಇದರಿಂದಾಗಿ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗುವುದನ್ನು ತಡೆಯುವ ಸಲುವಾಗಿಯೇ ಬಾಲಕೃಷ್ಣ ಪತ್ರ ಸಮರ ಸಾರಿದ್ದಾರೆ.
ಅಸಲಿಗೆ ಆಗಿದ್ದೇನು?:ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್​ ಸೇರಿದ್ದ ಬಾಲಕೃಷ್ಣ ಪರಾಭವದ ನಂತರವೂ ಪಕ್ಷ ಸಂಘಟನೆಯಲ್ಲಿ ಹಿಂದೆ ಬೀಳಲಿಲ್ಲ. ಜೆಡಿಎಸ್​ ಶಾಸಕ ಎ.ಮಂಜುನಾಥ್​, ಎಚ್​.ಎಂ. ರೇವಣ್ಣ ಅವರ ಗರಡಿಯಲ್ಲಿಯೇ ಪಳಗಿದ್ದು, ಕಳೆದ ಚುನಾವಣೆಯಲ್ಲಿ ರೇವಣ್ಣ ಅವರು ಮಂಜುನಾಥ್​ ಪರವಾಗಿಯೇ ಕೆಲಸ ಮಾಡಿದ್ದಾರೆ ಎನ್ನುವ ಆರೋಪ ಕಾರ್ಯಕರ್ತರಲ್ಲಿ ಇದೆ.ಆದರೆ, ಬಾಲಕೃಷ್ಣ ಮುಂದಿನ ಚುನಾವಣೆಗೆ ಭರದಿಂದ ಸಿದ್ಧತೆ ಮಾಡಿಕೊಳ್ಳುತ್ತಿರುವ ನಡುವೆಯೇ ರೇವಣ್ಣ ಮತ್ತು ಮಂಜುನಾಥ್​ ನಡುವೆ ಪರಸ್ಪರ ಸ್ನೇಹ ಹೆಚ್ಚಿದ್ದು, ಬಾಲಕೃಷ್ಣ ಮತ್ತು ಅವರ ಬೆಂಬಲಿಗರಲ್ಲಿ ಇರಿಸುಮುರಿಸಿಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರ ನಡುವಿನದು ರಾಜಕೀಯ ಸ್ನೇಹವೋ, ಮತ್ತೇನೋ ಎನ್ನುವ ಅನುಮಾನ ಬಾಲಕೃಷ್ಣ ಅವರನ್ನು ಕಾಡಿದೆ.ಮತ್ತೊಂದೆಡೆ ಯಾವುದೋ ಕಾರ್ಯಕ್ರಮದಲ್ಲಿ ಎ. ಮಂಜುನಾಥ್​, ರೇವಣ್ಣ ಅವರಿಗೆ ಟಿಕೆಟ್​ ನೀಡುವುದಾದರೆ ಅವರ ಗೆಲುವಿಗೆ ಶ್ರಮಿಸುವುದಾಗಿ ಹೇಳಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮದೇ ರಾಜಕೀಯ ದಾಳ ಉರುಳಿಸಲು ಮುಂದಾಗಿರುವ ಬಾಲಕೃಷ್ಣ, ನನಗೆ ಟಿಕೆಟ್​ ಬೇಡ, ರೇವಣ್ಣ ಅವರಿಗೇ ಟಿಕೆಟ್​ ನೀಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ಗೆ ಪತ್ರ ಬರೆದಿದ್ದಾರೆ.
ಸ್ಪಷ್ಟನೆ ನೀಡುವರೇ ನಾಯಕರು?:ಮಾಜಿ ಶಾಸಕ ಬಾಲಕೃಷ್ಣ ಉರುಳಿಸಿರುವ ದಾಳ ಇದೀಗ ಶಾಸಕ ಎ.ಮಂಜುನಾಥ್​ ಮತ್ತು ಮಾಜಿ ಸಚಿವ ಎಚ್​.ಎಂ. ರೇವಣ್ಣ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿರುವುದು ನಿಜ. ಇಬ್ಬರೂ ನಾಯಕರು ತಮ್ಮ ನಡುವಿನ ಸಂಬಂಧ ಕೇವಲ ರಾಜಕೀಯದ ಹೊರತಾದದ್ದೋ ಇಲ್ಲವೋ ಎನ್ನುವುದನ್ನು ಸ್ಪಷ್ಟಪಡಿಸುವ ಸವಾಲನ್ನು ಬಾಲಕೃಷ್ಣ ಹಾಕಿದ್ದಾರೆ. ಅಲ್ಲದೆ, ರೇವಣ್ಣ ಅವರನ್ನು ಮಂಜುನಾಥ್​ ಗುರು ಎಂದು ಒಪ್ಪಿಕೊಳ್ಳುವುದಾದರೆ ರೇವಣ್ಣಗೆ ಬೆಂಬಲಿಸಲಿ, ನಾನೂ ರೇವಣ್ಣ ಅವರಿಗೇ ಬೆಂಬಲವಾಗಿ ನಿಲ್ಲುತ್ತೇನೆ ಎನ್ನುವ ಸವಾಲು ಹಾಕಿದ್ದಾರೆ. ಆದರೆ ಈ ಎಲ್ಲ ಸವಾಲುಗಳಿಗೆ ಶಾಸಕ ಎ. ಮಂಜುನಾಥ್​ ಮತ್ತು ರೇವಣ್ಣ ಅವರೇ ಉತ್ತರ ನೀಡಬೇಕಿದೆ.

ರಂಗ ಪ್ರವೇಶಿಸುವರೇ ಡಿಕೆಶಿ?:ಕೆಪಿಸಿಸಿ ಅಧ್ಯಕ್ಷರ ತವರು ಜಿಲ್ಲೆಯಲ್ಲಿಯೇ ಕಾಂಗ್ರೆಸ್​ ನಾಯಕರ ನಡುವಿನ ಮುಸುಕಿನ ಗುದ್ದಾಟ ಬೀದಿಗೆ ಬಂದಿರುವುದು ಪಕ್ಷದ ಬೆಳವಣಿಗೆ ದೃಷ್ಟಿಯಿಂದ ಒಳ್ಳೆಯದಲ್ಲ. ಈ ಹಿನ್ನೆಲೆಯಲ್ಲಿ ಬಾಲಕೃಷ್ಣ ಅವರ ಪತ್ರದ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್​ ಖುದ್ದು ರಂಗ ಪ್ರವೇಶ ಮಾಡುವರೇ? ಎಚ್​.ಎಂ. ರೇವಣ್ಣ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತ ಬಳಗದಲ್ಲಿದ್ದು, ಡಿಕೆಶಿ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ.
ನನಗೆ ರಾಜಕೀಯ ದೀಕ್ಷೆ ನೀಡಿದ್ದು ಎಚ್​.ಎಂ. ರೇವಣ್ಣ. ಅವರಿಗೆ ನಾನು ಎಂದಿಗೂ ಚಿರಋಣಿ. ಇದರ ಹೊರತಾಗಿ ಬೇರೇನೂ ಇಲ್ಲ. ರೇವಣ್ಣ ವಿರುದ್ಧ ಆರೋಪ ಮಾಡಿ, ಪತ್ರ ಬರೆಯುವ ಮೂಲಕ ಬಾಲಕೃಷ್ಣ ಅವರು ಬೇರೊಂದು ಪಕ್ಷಕ್ಕೆ ಹೋಗುವ ಯೋಚನೆಯಲ್ಲಿರುವಂತೆ ಕಾಣುತ್ತಿದೆ.| ಎ.ಮಂಜುನಾಥ್​ಶಾಸಕ, ಮಾಗಡಿ
ಎಚ್​.ಎಂ.ರೇವಣ್ಣ ಅವರು ರಾಜಕೀಯವಾಗಿ ಜನ್ಮ ನೀಡಿದ ಗುರುಗಳು. ಅವರು ಸ್ಪರ್ಧೆ ಮಾಡಿದರೆ ನಾನು ಸ್ಪಧಿರ್ಸುವುದಿಲ್ಲ ಎಂಬ ಮಾತನ್ನು ಶಾಸಕ ಎ.ಮಂಜುನಾಥ್​ ಅವರ ಹಿಂಬಾಲಕರಿಗೆ ತಿಳಿಸಿದ್ದು, ಇದರಿಂದ ಮಾಗಡಿಯಲ್ಲಿ ರೇವಣ್ಣಗೆ ಶಾಸಕರು ಸಹಕಾರ ನೀಡುತ್ತಾರೆ, ನಾನೂ ಸಹಕಾರ ನೀಡುತ್ತೇನೆ. ಇದರಿಂದ ಪಕ್ಷಕ್ಕೆ ಒಂದು ಸೀಟು ಬಂದಂತಾಗುತ್ತದೆ. ಸರ್ಕಾರ ಬಂದ ಮೇಲೆ ನನಗೆ ಯಾವುದಾದರೂ ಒಂದು ಅವಕಾಶ ಮಾಡಿಕೊಡಿ ಎಂದು ಆತಂಕ ನಿವಾರಣೆಗೆ ಡಿ.ಕೆ.ಶಿವಕುಮಾರ್​, ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೇನೆ. ಪ್ರತಿ ಸೀಟು ಮುಖ್ಯ. ಹಾಗಾಗಿ ರೇವಣ್ಣ ಅವರಿಗೆ ಬಿಟ್ಟುಕೊಡಲು ನಾನು ಸಿದ್ಧ.| ಎಚ್​.ಸಿ.ಬಾಲಕೃಷ್ಣಮಾಜಿ ಶಾಸಕ
ದೊಡ್ಡ ತ್ಯಾಗಕ್ಕೆ ಸಿದ್ಧರಾದರೇ ಡಿಕೆಶಿ? ಕುತೂಹಲ ಮೂಡಿಸಿದೆ ಅವರ ಈ ಮಾತು…

‘ಮಸೀದಿಯಲ್ಲಿ ಸಿಕ್ಕಿದ್ದು ಶಿವಲಿಂಗವಲ್ಲ, ಕಾರಂಜಿ ಕಲ್ಲು! ಡಮರುಗ, ಕಮಲ, ಆನೆ, ಕುದುರೆ… ಹಿಂದೂ ಚಿಹ್ನೆಯಲ್ಲ’

ಭಾರತ ಕಬಡ್ಡಿ ತಂಡದ ಮಾಜಿ ಆಟಗಾರ, ಏಕಲವ್ಯ ಪ್ರಶಸ್ತಿ ವಿಜೇತ ಉದಯ ಚೌಟ ಇನ್ನಿಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
