ಮಾಗಡಿ:ಪಶ್ಚಿಮ ವೆಂಕಟಾಚಲಪತಿ ಎಂದೇ ಹೆಸರಾಗಿರುವ ಮಾಗಡಿ ತಿರುಮಲೆ ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಏ.14ರ ಮಧ್ನಾಹ್ನ 11.30ರಿಂದ 12.45 ಗಂಟೆವರೆಗೆ ರಂಗನಾಥಸ್ವಾಮಿ ಬ್ರಹ್ಮ ರಥೋತ್ಸವ ನಡೆಯಲಿದ್ದು, ತಾಲೂಕು ಆಡಳಿತ ಸಕಲ ಸಿದ್ಧತೆ ಕೈಗೊಂಡಿದೆ. ಏ.16ರ ರಾತ್ರಿ 12ಕ್ಕೆ ಪಲ್ಲಕ್ಕಿ ಉತ್ಸವ ನಡೆಯಲಿದೆ.
ರಂಗನಾಥನ ಆಲಯದಲ್ಲಿ ವಿವಿಧ ದೇವರುಗಳ ಸಮೂಹವೇ ನೆಲೆ ನಿಂತಿದೆ. ಈ ದೇವಗಣವೆಲ್ಲ ರಂಗನಾಥನ ಸುತ್ತಲೂ ಕಾವಲಿಗೆ ನಿಂತಂತಿದೆ. ಸಾಲಿಗ್ರಾಮ, ಮಾಂಡವ್ಯ ಮಹರ್ಷಿ, ರಂಗನಾಥನ ಬಲಭಾಗ ಶ್ರೀ ವಿಶ್ವಕ್ಸೇನ, ದ್ವಾರಪಾಲಕರಾದ ಜಯ ವಿಜಯರು, ಗರ್ಭಗುಡಿಯಿಂದ ಹೊರ ಬಂದರೆ ಪ್ರಾಕಾರದಲ್ಲಿ ಗಣಪತಿ, ಗರುಡ, ಸೀತಾಲಕ್ಷ್ಮೀ, ಎಂಟ ಆಳ್ವಾರರು, ದೇಶಿಕರು, ರಾಮಾನುಜಾಚಾರ್ಯರು, ಶ್ರೀರಾಮ, ಗೋವಿಂದರಾಜಸ್ವಾಮಿ, ಕಾಳಿಂಗಮರ್ದನ, ಬೆಳೆಯೋ ರಂಗ, ಸರೋಜಲಕದೇವಿ ಅಮ್ಮನವರು, ಅನ್ನಪೂರ್ಣೇಶ್ವರಿ, ಆಂಜನೇಯ, ಸುದರ್ಶನ ದೇವರುಗಳ ದರ್ಶನವಾಗುತ್ತದೆ. ಈ ದೇವರುಗಳ ಸಮೂಹ ದರ್ಶನ ಪಡೆಯುತ್ತಾ ರಂಗನಾಥ ಸ್ವಾಮಿಯ ಕೃಪೆಗೆ ಪಾತ್ರರಾಗಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ.
ತಿರುಪತಿ ವೆಂಕಟೇಶ್ವರನ ದರ್ಶನ ಸಾಧ್ಯವಾಗದವರು ಮಾಗಡಿ ರಂಗನಾಥನ ದರ್ಶನ ಮಾಡಿದರೆ, ತಿರುಪತಿ ತಿಮ್ಮಪ್ಪನ ದರ್ಶನ ಪಡೆದಷ್ಟೇ ಪುಣ್ಯ ಲಭಿಸುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ. ದೇವಾಲಯದಲ್ಲಿರುವ ಪಾಕಶಾಲೆ ವಿಶೇಷವಾಗಿದ್ದು, ಬರುವ ಭಕ್ತರಿಗೆ ವಿತರಿಸಲು ಪುಳಿಯೋಗರೆ ಕಲೆಸಲು ಶತಮಾನಗಳಿಂದಲೂ ಬಳಸುತ್ತಿದ್ದ ಹಳೆಯ ಕಲ್ಲನ್ನು ಕಾಣಬಹುದು. ಧ್ವಜಸ್ತಂಭ ಹಾಗೂ ರಾಜಗೋಪುರವನ್ನು ಮರುನಿರ್ಮಾಣ ಮಾಡಲಾಗಿದೆ.
ಬೆಂಗಳೂರಿನಿಂದ 50 ಕಿ.ಮೀ. ಸಾಗಿ ಬಲ ಭಾಗದಲ್ಲಿ ನರಸಿಂಹ ದೇವರ ಬೆಟ್ಟ ಕಾಣಿಸುತ್ತದೆ. ಅಲ್ಲಿಂದ ಅರ್ಧ ಫರ್ಲಾಂಗು ಚಲಿಸುವ ಮುನ್ನ ಬಲ ಭಾಗದಲ್ಲಿ ಕೆಂಪೇಗೌಡರ ಕಾಲದ ಕಾವಲು ಗೋಪುರ ಭಕ್ತರನ್ನು ಸ್ವಾಗತಿಸುತ್ತದೆ. ಗರುಡಗಂಬ, ಪುಷ್ಕರಣಿ, ಪ್ರಾಕಾರದ ಮೇಲೆ ಒರಟು ಕಲ್ಲಿನಲ್ಲಿ ಮಾಡಿರುವ ದ್ವಾರ ನೋಡುಗರನ್ನು ಆಕರ್ಷಿಸುತ್ತದೆ.
ರಂಗನಾಥಸ್ವಾಮಿ ಬ್ರಹ್ಮರಥೋತ್ಸವ ಹಿನ್ನೆಲೆ ಈಗಾಗಲೇ ದನಗಳ ಜಾತ್ರೆಯೂ ನಡೆದಿದೆ. ರಥೋತ್ಸವದಲ್ಲಿ ತೇರು ತೊಂದರೆಯಿಲ್ಲದೆ ಮುಂದೆ ಸಾಗಿದರೆ ಆ ವರ್ಷ ಮಳೆ, ಬೆಳೆ ಸಮೃದ್ಧವಾಗಿ ಆಗುತ್ತೆ ಎಂಬ ಪ್ರತೀತಿ ಇದೆ. ಭವರೋಗ ಹರ, ಸಂತಾನ ಭಾಗ್ಯ ಸಂಕಷ್ಟ ಪರಿಹಾರಕ ಎಂದೆಲ್ಲಾ ಮಾಗಡಿ ರಂಗನಾಥಸ್ವಾಮಿಗೆ ಖ್ಯಾತಿ ಇದೆ.
ಅಯ್ಯೋ ಅಣ್ಣ… ನಾನಷ್ಟು ಗೋಗರೆದ್ರೂ ಊಟ ಮಾಡದೆ ಕೆಲ್ಸ ಇದೆ ಅಂತ ಹೊರಟ್ಯಲ್ಲೋ: ಮಡಿಲಕ್ಕಿ ಕೊಟ್ಟು ಹಿಂತಿರುಗುವಾಗ ಸಾವು

ಜ್ಯೋತಿಷಿ ಮಾತು ನಂಬಿ ಸಾವಿನ ಮನೆ ಬಿಟ್ಟು ಲಾಡ್ಜ್​ಗೆ ಹೋದ ಮಾಲೀಕನಿಗೂ-ಕುಟುಂಬಕ್ಕೂ ಕಾದಿತ್ತು ಭಾರಿ ಆಘಾತ!

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:19 + thirteen =
Remember me
