ಬಾಗಲಕೋಟೆ:ಮನೆಯಲ್ಲಿ ಪತ್ನಿ ನಿದ್ರೆ ಮಾಡುತ್ತಿರುವಾಗಲೇ ಆಕೆಯ ಕುತ್ತಿಗೆ ಬಿಗಿದು ಗಂಡ ಕೊಲೆ ಮಾಡಿದ್ದಾನೆ. ತನ್ನ ಕಣ್ಣೆದುರಲ್ಲೇ ಅಮ್ಮನನ್ನು ಕೊಲ್ಲುತ್ತಿದ್ದ ಅಪ್ಪನಿಗೆ 14 ವರ್ಷದ ಮಗನೂ ಸಾಥ್​ ಕೊಟ್ಟಿದ್ದಾನೆ. ಅಷ್ಟೇ ಅಲ್ಲ ಆತ್ಮಹತ್ಯೆ ಎಂದು ಬಿಂಬಿಸಿ ತರಾತುರಿಯಲ್ಲಿ ಅಂತ್ಯಸಂಸ್ಕಾರ ಮಾಡಲು ಹೋದಾಗ ಕೊಲೆ ರಹಸ್ಯ ಬಯಲಾಗಿದೆ.
ಇಂತಹ ದುರ್ಘಟನೆ ಬಾಗಲಕೋಟೆ ‌ಜಿಲ್ಲೆ ಜಮಖಂಡಿ ತಾಲೂಕಿನ ತುಂಗಳ ಗ್ರಾಮದಲ್ಲಿ ಸಂಭವಿಸಿದೆ. ಮಹಾದೇವಿ ವಡ್ರಾಲ(40) ಕೊಲೆಯಾದ ದುರ್ದೈವಿ. ಪತಿ ಹನುಮಂತ ವಡ್ರಾಲ ಮತ್ತು 14 ವರ್ಷದ ಮಗ ಕೊಲೆ ಆರೋಪಿಗಳು.
ಜೂ.7ರ ನಸುಕಿನಲ್ಲಿ ಮಹಾದೇವಿಯನ್ನು ತಂದೆ-ಮಗ ಸೇರಿಕೊಂಡು ಉಸಿಗಟ್ಟಿಸಿ ಕೊಂದಿದ್ದರು. ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಬಿಂಬಿಸಿ ತರಾತುರಿಯಲ್ಲಿ ಶವ ಸುಟ್ಟು ಅಂತ್ಯಕ್ರಿಯೆಯನ್ನೂ ಮಾಡಿ ಮುಗಿಸಿದ್ದರು ತಂದೆ- ಮಗ. ತರಾತುರಿಯಲ್ಲಿ ಅಂತ್ಯಕ್ರಿಯೆ ಮಾಡಿದ್ದಕ್ಕೆ ಗ್ರಾಮಸ್ಥರಲ್ಲೂ ಅನುಮಾನ ಮೂಡಿತ್ತು. ಈ ನಡುವೆ ಸಾವಳಗಿ ಠಾಣೆ ಪೊಲೀಸರಿಗೆ ತುಂಗಳ ಗ್ರಾಮದಿಂದ ಅನಾಮಿಕ‌ ಕರೆಯೊಂದು ಬಂದಿತ್ತು. ಇದರ ಜಾಡು ಹಿಡಿದು ಹೊರಟ ಪೊಲೀಸರು ಕೊನೆ ರಹಸ್ಯ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳಾದ ಹನುಮಂತ ವಡ್ರಾಲ ಹಾಗೂ ಅಪ್ರಾಪ್ತ ಮಗನನ್ನು ಬಂಧಿಸಿದ್ದು, ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಸಂಶಯ ವ್ಯಕ್ತಪಡಿಸಿ ಕೊಲೆ ಮಾಡಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.
ಬೈಕ್​ ಮೇಲಿದ್ದ ಹೆಲ್ಮೆಟ್​ ನುಂಗಿದ ಆನೆ! ಪಾಪ ಹಸಿವಾಗಿತ್ತೇನೋ… ಸಖತ್​ ವೈರಲ್​ ಆಗ್ತಿದೆ ಈ ವಿಡಿಯೋ
ಯಾರಿಗೂ ತಿಳಿಯದಂತೆ ಪ್ರೇಯಸಿಯನ್ನ ಮನೆಯಲ್ಲೇ 10 ವರ್ಷ ಅಡಗಿಸಿಟ್ಟಿದ್ದ ಪ್ರಿಯಕರ! ಆ ಕೋಣೆಯ ರಹಸ್ಯ ಬಯಲಾಗಿದ್ದೇ ರೋಚಕ
ಬಾವಿಗೆ ಹಾರಿ ಪ್ರಾಣಬಿಟ್ಟ ಗಂಡ, ಮನೆಯ ಮೇಲೆ ನೇಣಿಗೆ ಕೊರಳೊಡ್ಡಿದ ಪತ್ನಿ! ಡೆತ್​ನೋಟ್​ನಲ್ಲಿದೆ ಸಾವಿನ ರಹಸ್ಯ
ಸಿನಿಮಾದಲ್ಲಿ ಆ 37 ಮೆಸೇಜ್ ತೋರಿಸ್ತೀರಾ? ಡಿ.ಕೆ.ರವಿ ಪಾತ್ರ ಮಾಡ್ತೀರಾ ಎಂದು ಆಫರ್​ ಕೊಟ್ಟವರಿಗೆ ಚಕ್ರವರ್ತಿ ಪ್ರಶ್ನೆ
ಬೈಕ್​ ಮೇಲಿದ್ದ ಹೆಲ್ಮೆಟ್​ ನುಂಗಿದ ಆನೆ! ಪಾಪ ಹಸಿವಾಗಿತ್ತೇನೋ… ಸಖತ್​ ವೈರಲ್​ ಆಗ್ತಿದೆ ಈ ವಿಡಿಯೋ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + seventeen =
Remember me
