ಮಳವಳ್ಳಿ:ಮಂಡಯ ಜಿಲ್ಲೆ ಮಳವಳ್ಳಿ ತಾಲೂಕಿನ ತೆಂಕಹಳ್ಳಿ ಸಮೀಪದ ಶನೈಶ್ಚರಸ್ವಾಮಿ ದೇವಸ್ಥಾನಕ್ಕೆ ಆಗಮಿಸಿದ್ದ ತುಂಬು ಗರ್ಭಿಣಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ತಿ.ನರಸೀಪುರ ತಾಲೂಕಿನ ಕಟ್ಟೇಪುರ ಗ್ರಾಮದ ಉಮೇಶ್​ ಎಂಬುವರ ಪತ್ನಿ ಪಂಕಜಾ (26) ಮೃತರು. ಇವರಿಗೆ ಒಂದೂವರೆ ವರ್ಷದ ಗಂಡು ಮಗುವಿದ್ದು, ಎರಡನೇ ಮಗುವಿಗೆ ಎಂಟು ತಿಂಗಳ ಗಂಭಿಣಿರ್ಯಾಗಿದ್ದರು. ಇತ್ತೀಚೆಗೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಂಬಂಧಿಕರ ಸಲಹೆಯಂತೆ ತೆಂಕಹಳ್ಳಿ ಸಮೀಪದ ಶನೈಶ್ಚರಸ್ವಾಮಿ ದೇವಸ್ಥಾನಕ್ಕೆ ಪತಿ ಉಮೇಶ್​ ಕುಟುಂಬದವರ ಜತೆಗೂಡಿ ಕಾರಿನಲ್ಲಿ ಆಗಮಿಸಿದ್ದರು.
ಗುರುವಾರ ದೇವಸ್ಥಾನದಲ್ಲಿ ಪೂಜೆ ಮುಗಿಸಿ ದೇವಸ್ಥಾನದಿಂದ ಹೊರಡುವ ಸಮಯದಲ್ಲಿ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದಾರೆ. ಕೂಡಲೇ ತಲಕಾಡು ಸರ್ಕಾರಿ ಆಸ್ಪತ್ರೆ ಕರೆದೊಯ್ಯಲಾಯಿತ್ತಾದರೂ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು.
ಶುಕ್ರವಾರ ಬೆಳಗ್ಗೆ ತಹಸೀಲ್ದಾರ್​ ಎಂ.ವಿಜಯಣ್ಣ ಶವದ ಮಹಜರು ನಡೆಸಿ ಕುಟುಂಬದವರಿಂದ ಮಾಹಿತಿ ಪಡೆದರು. ಮರಣೋತ್ತರ ಪರೀಕ್ಷೆಯ ನಂತರ ವಾರಸುದಾರರಿಗೆ ಮೃತದೇಹ ಒಪ್ಪಿಸಲಾಯಿತು. ಬೆಳಕವಾಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು 2 ತಿಂಗಳು ಕಳೆದಿದ್ರೆ ಡಾಕ್ಟರ್ ಆಗಿ ತಾಯ್ನಾಡಿಗೆ ಬರ್ತಿದ್ದೆ.. ಭಾರತೀಯ ರಾಯಭಾರ ಕಚೇರಿಯವರೇ ಓಡಿ ಹೋಗಿದ್ದಾರೆ…

ಪಾಪ ಕೈ ಮೀರಿ ಹೋಗ್ತೈತಿ.. ಕೈ ಬಳೆ ಒಡೆದಾವು… ಬೆಚ್ಚಿಬೀಳಿಸುತ್ತೆ ಬಬಲಾದಿ ಸದಾಶಿವ ಮಠದ ಮುತ್ಯಾ ಕಾಲಜ್ಞಾನ

ಪ್ರಾರ್ಥನೆ ವೇಳೆ ಪಾಕಿಸ್ತಾನದ ಮಸೀದಿಯಲ್ಲಿ ಬಾಂಬ್​ ಸ್ಫೋಟ: 30 ಮಂದಿ ಸಾವು, 50 ಜನರ ಸ್ಥಿತಿ ಗಂಭೀರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − one =
Remember me
