ಬೆಂಗಳೂರು:ಪತ್ನಿಗೆ ಬೆಳಗ್ಗೆ ತಲಾಕ್​ ಕೊಟ್ಟು ಸಂಜೆ ಕತ್ತು ಕೊಯ್ದು ಕೊಲೆ ಮಾಡಿದ್ದಾರೆ ಎನ್ನಲಾದ ಘಟನೆ ಜೆಪಿ ನಗರದ ವಿಕಾಸ್ ಎನ್​ಕ್ಲೇವ್ ಅಪಾರ್ಟ್​ಮೆಂಟ್​ನಲ್ಲಿ ನಡೆದಿದೆ.
ಘಟನೆ ಬುಧವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ನಜ್ನೀನ್ ಮೃತ ದುರ್ದೈವಿ. ಕಲೀಂ ಶರೀಫ್​ ಆರೋಪಿ ಪತಿ. ಗಂಡ-ಹೆಂಡತಿ ನಡುವೆ ಪ್ರತಿನಿತ್ಯ ಹಣದ ವಿಚಾರವಾಗಿ ಜಗಳ ನಡೆಯುತ್ತಿತ್ತಂತೆ. ಅ್ಲಲದೆ, ಕಲೀಂ ತನ್ನ ಹೆಂಡತಿ ಮೇಲೆ ಅನುಮಾನ ಪಡುತ್ತಿದ್ದ ಎಂದು ಹೇಳಲಾಗಿದೆ.
ಇದನ್ನೂ ಓದಿ:ಜುಟ್ಟನಹಳ್ಳಿ ಮಾರಮ್ಮನ ಹುಂಡಿ ಹಣ ಕದ್ದ ಪೂಜಾರಿಯನ್ನು ಅಟ್ಟಾಡಿಸಿದ ಬಸವ, ದೇವರ ಹಣ ವಾಪಸ್​!
ಈ ಎರಡು ವಿಚಾರಕ್ಕೆ ಇಬ್ಬರು ಕಿತ್ತಾಡುತ್ತಿದ್ದರು. ಕೊಲೆಯಾದ ಬೆಳಗ್ಗೆ ಗಂಡ-ಹೆಂಡತಿ ಇಬ್ಬರೂ ಬನ್ನೇರುಘಟ್ಟ ರಸ್ತೆಯಲ್ಲಿನ ಮಸೀದಿಗೆ ತರಳಿ ತಲಾಕ್ ತೆಗೆದುಕೊಂಡಿದ್ದರು. ಆದ್ರೆ, ಮನೆಗೆ ಬಂದ ಕಲೀಂ ಜಗಳ ತೆಗೆದಿದ್ದ, ಇದು ತಾರಕಕ್ಕೇರಿ ಕಲೀಂ ಚಾಕುವಿನಿಂದ ಕತ್ತು ಕುಯ್ದು ಕೊಲೆ ಮಾಡಿದ್ದಾನೆ.
ಘಟನಾ ಸ್ಥಳಕ್ಕೆ ಪುಟ್ಟೇನಹಳ್ಳಿ ಪೊಲೀಸರು ಬಂದು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಆರೋಪಿ ಕಲೀಂನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಮನೆಯಲ್ಲೇ ಚೆಕ್‌ಬುಕ್‌ ಪ್ರಿಂಟ್‌ ಮಾಡ್ತಿದ್ದ ಭೂಪ! ‘ಕೋಟ್ಯಧಿಪತಿ’ಯ ಗೋಲ್‌ಮಾಲ್‌…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + thirteen =
Remember me
