ಹುಣಸೂರು:ಮೃತ ಅಣ್ಣನ ಹೆಸರಿನಲ್ಲಿ ಶಿಕ್ಷಕನಾಗಿ ಕಳೆದ 24 ವರ್ಷಗಳಿಂದ ಕೆಲಸ ಮಾಡುತ್ತಿದ್ದ ವ್ಯಕ್ತಿ ಈಗ ಕಂಬಿ ಎಣಿಸುವಂತಾಗಿದೆ. ಹುಣಸೂರು ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಕನಾಗಿ ನೇಮಕಗೊಂಡಿದ್ದ ಲೋಕೇಶ್ ಗೌಡ ಹೆಸರಲ್ಲಿ ಆತನ ಕಿರಿಯ ಸಹೋದರ ಲಕ್ಷ್ಮಣೇಗೌಡ ಕೆಲಸ ಮಾಡುತ್ತಿದ್ದ. ಈಗ ಪ್ರಕರಣ ಬೆಳಕಿಗೆ ಬಂದಿದ್ದು, ಬಂಧಿತನಿಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.
ಮೂಲತಃ ಕೆ.ಆರ್. ನಗರ ತಾಲೂಕು ಹೆಬ್ಬಾಳು ಗ್ರಾಮದಲ್ಲಿ ಲಕ್ಷ್ಮಣೇಗೌಡರ ಕುಟುಂಬ ವಾಸವಿದೆ. 1994-95ರಲ್ಲಿ ಲಕ್ಷ್ಮಣೇಗೌಡರ ಹಿರಿಯ ಸಹೋದರ ಲೋಕೇಶ್ ಗೌಡ ಸರ್ಕಾರಿ ಶಿಕ್ಷಕ ಹುದ್ದೆಗೆ ಆಯ್ಕೆಯಾಗಿದ್ದರು. ಆದರೆ, ಕೆಲಸಕ್ಕೆ ಹಾಜರಾಗುವ ಮುನ್ನವೇ ಅವರು ಅಕಾಲಿಕವಾಗಿ ಮೃತಪಟ್ಟರು. ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ನೇಮಕಾತಿ ಪತ್ರದೊಂದಿಗೆ ಲಕ್ಷ್ಮಣೇಗೌಡ ತಾನೇ ಲೋಕೇಶ್ ಎಂದು ಹೇಳಿಕೊಂಡು ಪಿರಿಯಾಪಟ್ಟಣದ ಮುದ್ದನಹಳ್ಳಿ ಗ್ರಾಮದ ಶಾಲೆಯಲ್ಲಿ ಕರ್ತವ್ಯ ಆರಂಭಿಸಿದ್ದ. ನಂತರದ ವರ್ಷಗಳಲ್ಲಿ ಜಿಲ್ಲೆಯ ಹಲವಾರು ಶಾಲೆಗಳಲ್ಲಿ ಕರ್ತವ್ಯ ಮುಂದುವರಿಸಿದ್ದರೂ ಇಲಾಖೆಗೆ ಇದು ಗೊತ್ತಾಗಲೇ ಇಲ್ಲ. 2019ರಲ್ಲಿ ಹುಣಸೂರಿನ ಪತ್ರಕರ್ತ ಇಂಟೆಕ್ ರಾಜು ಅವರಿಗೆ ಈ ಕುರಿತು ಮಾಹಿತಿ ಲಭ್ಯವಾಗಿ ಜಾಡು ಹಿಡಿದು ಹೊರಟಾಗ ಅನುಮಾನ ಮೂಡಿತು. ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಅವರು ದೂರು ನೀಡಿದರು.
ದಾಖಲೆ ಸಲ್ಲಿಸುವಲ್ಲಿ ವಿಫಲ:‘ಪ್ರಕರಣದಲ್ಲಿ ಆರೋಪಿ ಸೂಕ್ತ ಮತ್ತು ಅಧಿಕೃತ ದಾಖಲೆಗಳನ್ನು ಸಲ್ಲಿಸುವಲ್ಲಿ ವಿಫಲನಾಗಿರುವುದು ಮತ್ತು ದೂರುದಾರರು ವ್ಯಕ್ತಪಡಿಸಿರುವ ಅನುಮಾನಗಳಲ್ಲಿ ನೈಜತೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಆರೋಪಿಯ ವಿರುದ್ಧ ಮಾ.21ರಂದು ಪಿರಿಯಾಪಟ್ಟಣದ ಠಾಣೆಯಲ್ಲಿ ದೂರು ದಾಖಲಿಸಲಾಯಿತು. ಅಂದು ಮಧ್ಯಾಹ್ನ ನಕಲಿ ಶಿಕ್ಷಕನ ಆರೋಪ ಹೊತ್ತಿರುವ ಲಕ್ಷ್ಮಣೇಗೌಡನನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ. ನಾಗರಾಜ್ ವಿಜಯವಾಣಿಗೆ ತಿಳಿಸಿದ್ದಾರೆ.
ಲೋಕಾಯುಕ್ತರಿಗೆ ದೂರು:ದೂರಿನನ್ವಯ ಈ ಬಗ್ಗೆ ವರದಿ ನೀಡಲು ಕೆ.ಆರ್. ನಗರ ತಹಸೀಲ್ದಾರ್​ಗೆ ಡಿಡಿಪಿಐ ಕೋರಿದರು. ಲಕ್ಷ್ಮಣೇಗೌಡನ ಕುಟುಂಬದವರು ಮಾಹಿತಿ ನೀಡಲು ನಿರಾಕರಿಸುತ್ತಾರೆಂದು ತಹಸೀಲ್ದಾರ್ ವರದಿ ನೀಡಿದರು. ಈ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಜಿಲ್ಲಾಧಿಕಾರಿ ಸೂಚಿಸಿದರು. ಆದರೆ, 2020ರಲ್ಲಿ ಡಿಸಿ ನೀಡಿದ ಸೂಚನೆಯನ್ನು 6 ತಿಂಗಳಾದರೂ ಕ್ಷೇತ್ರ ಶಿಕ್ಷಣಾಧಿಕಾರಿ ಪಾಲಿಸಲಿಲ್ಲ ಎಂದು ಆರೋಪಿಸುವ ರಾಜು, ಲೋಕಾಯುಕ್ತರಿಗೆ ದೂರು ದಾಖಲಿಸಿದರು. ಲೋಕಾಯುಕ್ತ ಅಧಿಕಾರಿಗಳು ಆರೋಪಿ ಮತ್ತು ದೂರುದಾರರನ್ನು ಕರೆಸಿ ವಿಚಾರಣೆ ನಡೆಸಿದರು. ನೇಮಕಾತಿ ಪ್ರಾಧಿಕಾರದ ಹಂತದಲ್ಲೂ ವಿಚಾರಣೆ ನಡೆಸಲಾಯಿತು. ಈ ವೇಳೆ ಆರೋಪಿ ನೀಡಿದ್ದ ವಂಶವೃಕ್ಷದಲ್ಲಿ ಲಕ್ಷ್ಮಣೇಗೌಡ ಹೆಸರು ನಾಪತ್ತೆಯಾಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ ವಂಶವೃಕ್ಷವನ್ನು ಅಮಾನ್ಯಗೊಳಿಸಲಾಯಿತು.
ತಂದೆ ಸ್ಫೋಟಕ್ಕೆ ಬಲಿ; ಅರ್ಧ ಸುಟ್ಟು ಸಾವಿನೊಂದಿಗೆ ಸೆಣಸಾಡುತ್ತಿರುವ ಪುತ್ರಿ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 11 =
Remember me
