ಚನ್ನಪಟ್ಟಣ:ತೃತೀಯ ಲಿಂಗಿ ಸಹೋದರಿಯನ್ನು ಪೀಡಿಸುತ್ತಿದ್ದ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಸಹೋದರ, ಒಬ್ಬನನ್ನು ಕೊಂದಿದ್ದು, ಮತ್ತೊಬ್ಬನ ಸ್ಥಿತಿ ಗಂಭಿರವಾಗಿದೆ.
ಇಂತಹ ಘಟನರ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಲಾಳಘಟ್ಟ ಗ್ರಾಮದಲ್ಲಿ ಸೋಮವಾರ ನಡೆದಿದೆ. ಆನಂದ್​(35) ಮೃತ. ರಾಘವೇಂದ್ರ(33) ಗಾಯಾಳು. ಇಬ್ಬರೂ ಮಂಡ್ಯ ಮೂಲದವರಾಗಿದ್ದು, ತೃತೀಯ ಲಿಂಗಿ ಸಹೋದರ ದರ ಗುರು(30) ಆರೋಪಿ. ಗಾಯಾಳು ರಾಘವೇಂದ್ರ ಮಂಡ್ಯದಲ್ಲಿ ರೌಡಿಶೀಟರ್​.
ಚನ್ನಪಟ್ಟಣದ ಮೋಳೆದೊಡ್ಡಿ ಗ್ರಾಮದ ಮೌನ ಅಲಿಯಾಸ್​ ಮನು ತೃತೀಯ ಲಿಂಗಿಯಾಗಿದ್ದು, ಕಳೆದ 8 ವರ್ಷಗಳಿಂದ ಮಂಡ್ಯದಲ್ಲಿ ವಾಸವಾಗಿದ್ದು, ಆನಂದ್​ ಜತೆ ನಿಕಟ ಸಂಪರ್ಕದಲ್ಲಿದ್ದಳು. ಇತ್ತೀಚೆಗೆ ಮಂಡ್ಯ ತೊರೆದಿದ್ದ ಮೌನ ಕುಟುಂಬದ ಜತೆ ಲಾಳಘಟ್ಟ ಗ್ರಾಮದ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ಈ ಮಧ್ಯೆ ಆನಂದ್​ ಸ್ನೇಹಿತ ರಾಘವೇಂದ್ರ ಜತೆ ಈಕೆಯ ಮನೆಗೆ ಬಂದು ಈ ಮೊದಲಿನಂತೆಯೇ ತನ್ನ ಜತೆ ಇರುವಂತೆ ಪೀಡಿಸುತ್ತಿದ್ದ. ಭಾನುವಾರ ರಾತ್ರಿಯೂ ಲಾಳಘಟ್ಟಕ್ಕೆ ಬಂದು ಗುರು ಜತೆ ಗಲಾಟೆ ನಡೆಸಿದ್ದ. ಸೋಮವಾರ ಮತ್ತೆ ಬಂದು ಪೀಡಿಸಲು ಆರಂಭಿಸಿದಾಗ ಕೋಪಗೊಂಡ ಗುರು ಕುಡುಗೋಲಿನಿಂದ ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾನೆ. ಆನಂದ್​ ಸ್ಥಳದಲ್ಲೇ ಮೃತಪಟ್ಟರೆ, ಗಾಯಗೊಂಡಿರುವ ರಾಘವೇಂದ್ರನನ್ನು ಆಸ್ಪತ್ರೆಗೆ ರವಾನಿಸಲಾಗಿದೆ.
ಪೊಲೀಸರಿಗೆ ಶರಣು:ಸೋದರಿಗೆ ಕಿರುಕುಳ ನೀಡುವುದನ್ನು ಸಹಿಸಲಾಗದೆ ಕೃತ್ಯ ಎಸಗಿದ್ದಾಗಿ ಗುರು ಗ್ರಾಮಾಂತರ ಠಾಣೆಗೆ ಹೋಗಿ ಶರಣಾಗಿದ್ದಾನೆ. ವಿಷಯ ತಿಳಿಯುತ್ತಲೇ ಗ್ರಾಮಾಂತರ ಸಿಪಿಐ ಬಿ.ಶಿವಕುಮಾರ್​, ಪಿಎಸ್​ಐ ಲಿಯಾಕತ್​ ಘಟನಾ ಸ್ಥಳಕ್ಕೆ ತೆರಳಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದಾವಣಗೆರೆಯಲ್ಲಿ ತಡರಾತ್ರಿ ದಂಪತಿಯ ಭೀಕರ ಕೊಲೆ! ಬೆಚ್ಚಿಬಿದ್ದ ಸ್ಥಳೀಯರು

ಸೇತುವೆ ಮೇಲಿಂದ ಪ್ರಪಾತಕ್ಕೆ ಕಾರು ಪಲ್ಟಿ: ಬಿಜೆಪಿ ಶಾಸಕನ ಪುತ್ರ ಸೇರಿ 7 ವೈದ್ಯಕೀಯ ವಿದ್ಯಾರ್ಥಿಗಳು ದಾರುಣ ಸಾವು

ಸೊಸೆಯ ಸುತ್ತಿಗೆ ಏಟಿಗೆ ಅತ್ತೆ ಸಾವು! ಚಿತ್ರದುರ್ಗ ಜಿಲ್ಲೇಲಿ ರಾತ್ರೋರಾತ್ರಿ ಅಮಾನುಷ ಕೃತ್ಯ, ಬೆಚ್ಚಿಬಿದ್ದ ಸ್ಥಳೀಯರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 3 =
Remember me
