ಮಂಡ್ಯ:ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಹುದ್ದೆಗೆ ಇಬ್ಬರು ಅಧಿಕಾರಿಗಳ ನೇಮಕವಾಗಿದ್ದು. ಪೈಪೋಟಿ ಜತೆಗೆ ಗೊಂದಲಕ್ಕೆ ಕಾರಣವಾಗಿದೆ.
ಇರೋ ಒಂದು ಡಿಡಿಪಿಯು ಹುದ್ದೆಗೆ ಉಮೇಶ್ ಹಾಗೂ ಮಂಜುನಾಥ್ ಪ್ರಸನ್ನ ಎಂಬುವರನ್ನು ನೇಮಕ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕಚೇರಿಯಲ್ಲಿ ಇಬ್ಬರು ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರದಿಂದಲೇ ಪರಿಹಾರ ಸಿಗಬೇಕಿದ್ದು, ಅಲ್ಲಿಯವರೆಗೂ ಗೊಂದಲ ಮುಂದುವರಿಯಲಿದೆ.
ಉಮೇಶ್ ಅವರು ಡಿಡಿಪಿಯು ಹುದ್ದೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ಸೆ.5ರಂದು ಇವರನ್ನು ಕೊಪ್ಪಳಕ್ಕೆ ವರ್ಗಾವಣೆ ಮಾಡಲಾಗಿತ್ತು. ತೆರವಾಗಿದ್ದ ಜಾಗಕ್ಕೆ ಬೆಂಗಳೂರಿನ ಪಿಯು ಬೋರ್ಡ್‌ನ ಡಿಡಿ ಮಂಜುನಾಥ ಪ್ರಸನ್ನ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಇದರನ್ವಯ ಮಂಡ್ಯಕ್ಕೆ ಬಂದು ಅಧಿಕಾರವನ್ನು ಸ್ವೀಕಾರ ಮಾಡಿದ್ದರು.
ಈ ನಡುವೆ ವರ್ಗಾವಣೆ ವಿರುದ್ಧ ಉಮೇಶ್ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ಮೆಟ್ಟಿಲೇರಿದ್ದರು. ಎರಡು ವರ್ಷಕ್ಕೆ ಮುನ್ನವೇ ಅಂದರೆ ಅವಧಿ ಪೂರ್ವವೇ ತನ್ನನ್ನು ವರ್ಗಾವಣೆ ಮಾಡಿದ್ದು, ಆದೇಶವನ್ನು ರದ್ದು ಪಡಿಸುವಂತೆ ಮನವಿ ಸಲ್ಲಿಸಿದ್ದರು. ಇದನ್ನು ಪುರಸ್ಕರಿಸಿರುವ ಮಂಡಳಿ ಮಂಡ್ಯ ಡಿಡಿ ಹುದ್ದೆಯಲ್ಲಿಯೇ ಮುಂದುವರಿಯುವಂತೆ ಉಮೇಶ್ ಅವರ ಪರವಾಗಿ ಸೆ.19ರಂದು ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಅವರು ಕೂಡ ವಾಪಸ್ ಬಂದಿದ್ದಾರೆ.
ಒಬ್ಬರಿಗೂ ಆದೇಶ ಇರುವುದರಿಂದ ಕಚೇರಿಯಲ್ಲಿ ಪ್ರತ್ಯೇಕ ಕುರ್ಚಿಗಳನ್ನು ಹಾಕಿಕೊಂಡು ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ಮುಂದಿನ ಆದೇಶದ ಬಳಿಕ ಯಾರಿಗೆ ಗೇಟ್‌ಪಾಸ್ ಸಿಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.
30 ಎಕರೆ ಭೂಮಿ, 7 ಮನೆ, 11 ಮಕ್ಕಳಿದ್ದರೂ ತಾಯಿಗಿಲ್ಲ ಆಸರೆ… ಕಣ್ಣೀರಿಡುತ್ತಲೇ ದಯಾಮರಣ ಬೇಡಿದ ಹಾವೇರಿಯ ಅಜ್ಜಿ

ಬಡತನ ಮೆಟ್ಟಿ ನಿಲ್ಲಬೇಕು ಅನ್ನುವಷ್ಟರಲ್ಲಿ ಆಟವಾಡಿದ ವಿಧಿ… ಸಾವಲ್ಲೂ ಸಾರ್ಥಕತೆ ಮೆರದ ಪಿಯು ವಿದ್ಯಾರ್ಥಿನಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 − 1 =
Remember me
