ಮಂಡ್ಯ:ಆಸ್ಪತ್ರೆ ಮುಂಭಾಗ ಗರ್ಭಿಣಿಗೆ ನಿಂತಲ್ಲೇ ಹೆರಿಗೆಯಾಗಿ ಮಗು ಕೆಳಗೆ ಬಿದ್ದು ಮೃತಪಟ್ಟ ಘಟನೆಗೆ ಪೋಷಕರೇ ಕಾರಣವಂತೆ! ಹೀಗಂತ ಆಸ್ಪತ್ರೆ ಸಿಬ್ಬಂದಿಯನ್ನ ಮಿಮ್ಸ್ ನಿರ್ದೇಶಕ ಡಾ.ಹರೀಶ್ ಸಮರ್ಥಿಸಿಕೊಂಡಿದ್ದಾರೆ.
ಹೆರಿಗೆ ನೋವು ಬಂದಿದೆ, ಅಡ್ಮಿಟ್​ ಮಾಡಿಕೊಳ್ಳಿ ಎಂದು ಆಸ್ಪತ್ರೆ ಬಾಗಿಲಲ್ಲಿ ನಿಂತಿದ್ದ ಮಹಿಳೆಗೆ ಅಲ್ಲಿಯೇ ಹೆರಿಗೆಯಾಗಿದ್ದು, ಮಗು ಕೆಳಗೆ ಬಿದ್ದು ಸತ್ತ ಘಟನೆ ಇಂದು (ಬುಧವಾರ) ಬೆಳಗ್ಗೆ ಮಂಡ್ಯ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್ ಮುಂಭಾಗ ಸಂಭವಿಸಿತ್ತು.
ಈ ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ಮಿಮ್ಸ್ ನಿರ್ದೇಶಕ ಡಾ.ಹರೀಶ್ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥೆ ಡಾ.ಎಚ್.ಸಿ.ಸವಿತಾ, ನಿನ್ನೆಯೇ ಅಡ್ಮಿಷನ್ ಆಗಿದ್ರೆ ಇದೆಲ್ಲ ಆಗುತ್ತಲೇ ಇರಲಿಲ್ಲ. ನಿನ್ನೆ ಆಸ್ಪತ್ರೆಗೆ ಬಂದಾಗ ಪರೀಕ್ಷೆ ವೇಳೆ ಮಗುವಿನ ಎದೆ ಬಡಿತ ಕೇಳಿಸಿರಲಿಲ್ಲ. ಸ್ಕ್ಯಾನಿಂಗ್ ಮಾಡಿದಾಗ ಹೊಟ್ಟೆಯೊಳಗೆ ಮಗು ಸಾವನ್ನಪ್ಪಿತ್ತು. ನಿನ್ನೆಯೇ ಅಡ್ಮಿಷನ್ ಮಾಡುವಂತೆ ಹೇಳಿದ್ರೂ ಮಾಡಿರಲಿಲ್ಲ. ಇವತ್ತು ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕರೆದುಕೊಂಡು ಬಂದಿದ್ರು. ಕರೊನಾ ಆರ್​ಟಿಪಿಸಿಆರ್​ ರಿಪೋರ್ಟ್ ಬಂದಿರಲಿಲ್ಲ. ಹಾಗಾಗಿ ಆ್ಯಂಟಿಜನ್ ಟೆಸ್ಟ್ ಮಾಡಿ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗುತ್ತಿತ್ತು. ಮನೆಯವರಿಗೆ ಆಭರಣ ಕೊಡುವುದಾಗಿ ಗರ್ಭಿಣಿ ಹೊರಗೆ ಹೋದಾಗ ಹೆರಿಗೆ ಆಗಿದೆ. ಬೆಳಗ್ಗೆ 8 ಗಂಟೆಗೇ ಗರ್ಭಿಣಿಯನ್ನು ಕರೆದುಕೊಂಡು ಬಂದಿಲ್ಲ ಎಂದಿದ್ದಾರೆ.
ಬೆತ್ತಲೆ ಸ್ಥಿತಿಯಲ್ಲೇ ಕಂಬದಲ್ಲಿ ನೇತಾಡುತ್ತಿದ್ದ ಮಹಿಳೆ! ಬೆಳ್ಳಂಬೆಳಗ್ಗೆ ನಡೆದ ಈ ಕೃತ್ಯ ಕೇಳಿದ್ರೆ ಬೆಚ್ಚಿಬೀಳ್ತೀರಿ

ಒಂದೇ ಕುಟುಂಬದ ಮೂವರು ಸಹೋದರರ ಸಾವು!

ಗಂಡನ ಪ್ರಾಣ ಉಳಿಸಿಕೊಡಿ ಎಂದು ಅಂಗಲಾಚಿದ ಮಹಿಳೆಯನ್ನು ಮಂಚಕ್ಕೆ ಕರೆದ ಕೋವಿಡ್​ ಆಸ್ಪತ್ರೆ ಸಿಬ್ಬಂದಿ: ಮುಂದಾಗಿದ್ದು ದುರಂತ!

ಅನುಮಾನಾಸ್ಪದವಾಗಿ ಪತ್ನಿ ಸತ್ತ 5 ದಿನಕ್ಕೆ ಸಾವಿನ ಮನೆಯ ಕದ ತಟ್ಟಿದ ಟೆಕ್ಕಿ! ಕಳೆದ ತಿಂಗಳಷ್ಟೆ ಮದ್ವೆ ಆಗಿದ್ದವರ ಬದುಕಲ್ಲಿ ದುರಂತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 13 =
Remember me
