ಆನೇಕಲ್​:ಹೆಬ್ಬಗೋಡಿಯ ಮನೆಯೊಂದರಲ್ಲಿ ಮಂಡ್ಯ ಮೂಲದ ಪ್ರೇಮಿಗಳಿಬ್ಬರು ಶವವಾಗಿ ಪತ್ತೆಯಾಗಿದ್ದಾರೆ.
ಮಂಡ್ಯ ಜಿಲ್ಲೆಯ ಕೆಆರ್​ ಪೇಟೆ ತಾಲೂಕಿನ ಅಕ್ಕಿಹೆಬ್ಬಾಳ ಸಮೀಪದ ಚೌಡಸಮುದ್ರ ಗ್ರಾಮದ ನೇತ್ರಾವತಿ ಹಾಗೂ ಮಲ್ಲಿಕಾರ್ಜುನ್​ ಮೃತರು.
ಒಂದೇ ಊರಿನವರಾದ ಇಬ್ಬರೂ ಕಾಲೇಜಿನಲ್ಲಿ ಓದುವಾಗಲೇ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಓದಿನ ಬಳಿಕ ನೇತ್ರಾವತಿ ಹೆಬ್ಬಗೋಡಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಇತ್ತೀಚೆಗೆ ಇವರಿಬ್ಬರ ನಡುವೆ ಬಿರುಕು ಉಂಟಾಗಿತ್ತು.
ಎರಡು ದಿನಗಳ ಹಿಂದೆ ಪ್ರೇಯಸಿಯ ಮನೆಗೆ ಬಂದಿದ್ದ ಮಲ್ಲಿಕಾರ್ಜುನ್​ ಗಲಾಟೆ ಮಾಡಿ, ಗಂಭೀರವಾಗಿ ಹಲ್ಲೆ ನಡೆಸಿದ್ದು, ಆಕೆ ಕುಸಿದು ಬಿದ್ದು ಸಾವನ್ನಪ್ಪಿರುವ ಸಾಧ್ಯತೆ ಇದೆ. ಪ್ರೇಯಸಿಯ ಸಾವಿನಿಂದ ಭಯಗೊಂಡ ಪ್ರಿಯಕರನೂ ಅದೇ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ನೇತ್ರಾವತಿ ಕೆಲಸಕ್ಕೆ ಹೋಗದೆ ಮೊಬೈಲ್​ ಸ್ವಿಚ್ಡ್​ ಆಫ್​ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಕಂಪನಿ ನೌಕರ ಮನೆಯ ಬಳಿ ಬಂದು ನೋಡಿದಾಗ ಇಬ್ಬರ ಶವ ಪತ್ತೆಯಾಗಿದೆ.
ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಭೇಟಿ ನೀಡಿ, ಮೃತದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದ ಬಳಿಕ ಕುಟುಂಬಸ್ಥರಿಗೆ ಹತ್ತಾಂತರ ಮಾಡಿದರು. ಹೆಬ್ಬಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜನಪ್ರಿಯ ಹಾಸ್ಯನಟ ರಾಜು ಶ್ರೀವಾಸ್ತವ್​ ವಿಧಿವಶ

ತಾವೇ ಬೆಳೆಸಿದ ಮರದಲ್ಲಿ ದುರಂತ ಅಂತ್ಯ ಕಂಡ ಸಾಲುಮರದ ವೀರಚಾರಿ… ಹಳ್ಳಿಗಳಲ್ಲಿ ಹಸಿರು ಹೊದಿಸಿದ ಸಾಧಕ ಇನ್ನಿಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + eight =
Remember me
