|ಪ್ರಕಾಶ ಎಸ್​. ಶೇಟ್​ಹುಬ್ಬಳ್ಳಿಬಲವಂತದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿರುವ ಮಂಡ್ಯ ಜಿಲ್ಲೆಯ ಮದ್ದೂರಿನ ಯಡವನಹಳ್ಳಿಯ ಶ್ರೀಧರ ಗಂಗಾಧರ ಉರ್ಫ್​ ಮೊಹ್ಮದ ಸಲ್ಮಾನ ಪ್ರಕರಣದಿಂದ ಬೆಚ್ಚಿಬೀಳಿಸುವ ಸಂಗತಿಗಳು ಒಂದೊಂದಾಗಿ ಹೊರ ಬರಲಾರಂಭಿಸಿವೆ. ಹಿಂದು ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು “ನವ ಮುಸಲ್ಮಾನ ಸಂತತಿ” ಎಂದು ಕರೆಯಿಸಿಕೊಳ್ಳುವವರಿಗೆ ಹಿಂದು ಯುವತಿಯರನ್ನು ಟಾರ್ಗೆಟ್​ ಮಾಡುವ ಗುರಿ ನಿಗದಿ ಮಾಡಲಾಗಿದೆ. ಇಂಥ ತಂಡ ದೇಶ ವ್ಯಾಪಿ ಹಬ್ಬಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಹುಬ್ಬಳ್ಳಿಯ ಹಿಂದು ಯುವತಿಯನ್ನು ಮೋಸದ ಜಾಲದಲ್ಲಿ ಬೀಳಿಸಿ ಆಕೆಯನ್ನು ಮುಸ್ಲಿಂ ಧರ್ಮಕ್ಕೆ ಮತಾಂತರಗೊಳಿಸುವ ಉದ್ದೇಶದಿಂದ ಬಂದಿದ್ದ ಯಡವನಹಳ್ಳಿಯ ಶ್ರೀಧರ ಗಂಗಾಧರ ಸ್ವತಃ ಹೇಳಿಕೆ ನೀಡಿದ್ದಾನೆ. ತಾನು ಮೋಸ ಹೋಗಿದ್ದು ಹೇಗೆ? ಎನ್ನುವ ವೃತ್ತಾಂತ ಬಿಚ್ಚಿಟ್ಟಿರುವ ಶ್ರೀಧರ, ತನ್ನ ಜತೆಗೆ ಏಕಕಾಲಕ್ಕೆ ರಾಜ್ಯದಲ್ಲಿ 50 ಹಿಂದೂ ಹುಡುಗರು ನವ ಮುಸಲ್ಮಾನ ಆಗಿ ಮತಾಂತರಗೊಂಡಿದ್ದಾಗಿ ತಿಳಿಸಿದ್ದಾನೆ. ಈ ದಿಕ್ಕಿನಲ್ಲಿ ತನಿಖೆ ಆರಂಭಿಸಿರುವ ಪೊಲೀಸರಿಗೆ ಆಘಾತಕಾರಿ ಬೆಳವಣಿಗೆಗಳ ಮಾಹಿತಿ ಸಿಗುತ್ತಿದೆ.
ನವ ಮುಸಲ್ಮಾನ ಸಂತತಿಗೆ ಸೇರಿಕೊಂಡ ಯುವಕರನ್ನು ಆಂಧ್ರಪ್ರದೇಶದ ತಿರುಪತಿ, ಇಲಿಯಾಸ್​ ನಗರ ಇತ್ಯಾದಿ ಕಡೆಗಳಲ್ಲಿ ಕರೆದುಕೊಂಡು ಹೋಗಿ ಬ್ರೇನ್​ವಾಷ್​ ಮಾಡಲಾಗುತ್ತದೆ. ಕುರಾನ್​ ಬೋಧಿಸಲಾಗುತ್ತದೆ. ಇದೇ ವೇಳೆ ಅವರಿಗೆ ನೀಡಲಾಗುತ್ತಿದ್ದ ಪ್ರಮುಖ ಟಾರ್ಗೆಟ್​ ಹಿಂದು ಯುವತಿಯರನ್ನು ಮೋಸದ ಜಾಲಕ್ಕೆ ಬೀಳಿಸಿ ಅವರನ್ನೂ ಮುಸ್ಲಿಂ ಧರ್ಮಕ್ಕೆ ಮತಾಂತರಿಸುವುದು.
ಯಾವ ಯುವತಿಯನ್ನು ಟಾರ್ಗೆಟ್​ ಮಾಡಬೇಕು ಎನ್ನುವ ನಿಶ್ಚಿತ ಗುರಿ ನವ ಮುಸಲ್ಮಾನರಿಗೆ ನೀಡಲಾಗುತ್ತದೆ. ಇದಕ್ಕಾಗಿಯೇ ಒಂದು ತಂಡ ಕೆಲಸ ಮಾಡುತ್ತಿದ್ದು, ಸಂಬಂಧಿತರ ಮಾಹಿತಿ ಕಲೆ ಹಾಕುತ್ತದೆ. ಈ ತಂಡವು ಪ್ರತಿಷ್ಠಿತ ಹಾಗೂ ಶ್ರೀಮಂತ ಕುಟುಂಬಕ್ಕೆ ಸೇರಿದ ಹಿಂದೂ ಯುವತಿಯರ ಮಾಹಿತಿಯನ್ನು ನವ ಮುಸಲ್ಮಾನ ಸಂತತಿಯ ಯುವಕರಿಗೆ ನೀಡುತ್ತದೆ. ಬಳಿಕ ಆ ಯುವಕರು ಸೂಚಿತ ಹಿಂದು ಯುವತಿಯ ಬೆನ್ನು ಬೀಳುತ್ತಾರೆ. ಸಾಮಾಜಿಕ ಜಾಲತಾಣದ ಮುಖೇನ ಯುವತಿಯರನ್ನು ಖೆಡ್ಡಾಕ್ಕೆ ಬೀಳಿಸುವ ಪ್ರಯತ್ನ ಮಾಡಲಾಗುತ್ತದೆ. ಬಳಿಕ ಯುವತಿ ಇರುವ ನಗರಕ್ಕೆ ಬಂದು ಆಕೆಯ ಹತ್ತಿರಕ್ಕೆ ಬರುವ ಪ್ರಯತ್ನ ಯುವಕರು ಮಾಡುತ್ತಾರೆ. ಪ್ರೀತಿ-ಪ್ರೇಮದ ಮೋಸಕ್ಕೆ ಯುವತಿಯನ್ನು ಬೀಳಿಸಲಾಗುತ್ತದೆ. ಮುಂದೊಂದು ದಿನ ಯುವತಿಯನ್ನು ಮುಸ್ಲಿಂ ಧರ್ಮಕ್ಕೆ ಮತಾಂತರಿಸಲಾಗುತ್ತದೆ.
ಈ ತರನಾಗಿ ವರ್ಷಕ್ಕೆ ಕನಿಷ್ಠ ಮೂವರನ್ನು ಮತಾಂತರ ಮಾಡಬೇಕು ಎಂದು ಟಾರ್ಗೆಟ್​ ನೀಡಲಾಗಿರುತ್ತದೆ. ಇಂಥ ಕಾರ್ಯಕ್ಕೆ ಬೇಕಾಗುವಷ್ಟು ಹಣವನ್ನೂ ಯುವಕರಿಗೆ ನೀಡಲಾಗುತ್ತದೆ. ಇದೇ ಉದ್ದೇಶದಿಂದ ಮಂಡ್ಯದಿಂದ ಹುಬ್ಬಳ್ಳಿಗೆ ಬಂದಿದ್ದ ಶ್ರೀಧರ, ನವ ಮುಸಲ್ಮಾನ ಸಂತತಿಯ ಕೃತ್ಯ ಪೊಲೀಸರೆದರು ಬಹಿರಂಗ ಪಡಿಸಿದ್ದಾನೆ. ಈ ದಿಸೆಯಲ್ಲಿ ಸಮಗ್ರ ತನಿಖೆಯಾದಲ್ಲಿ ದೊಡ್ಡ ಜಾಲ ಬಯಲಿಗೆ ಬರಲಿದೆ.
ಶ್ರೀಧರ ಗಂಗಾಧರ ನೀಡಿರುವ ದೂರಿನಂತೆ ಪ್ರಕರಣದ ತನಿಖೆ ನಡೆಯುತ್ತಿದೆ. ಎಸಿಪಿ ತಂಡ ಈಗಾಗಲೇ ಕಾಯೋರ್ನ್ಮುಖವಾಗಿದೆ.|ಲಾಭೂರಾಮಹು-ಧಾ ಪೊಲೀಸ್​ ಆಯುಕ್ತ
ಪರಸ್ಪರ ಮದ್ವೆಯಾಗಲು ನಿರ್ಧರಿಸಿದ್ದ ಬೆಂಗಳೂರಿನ ಶಾಲಾ ಬಾಲಕಿಯರು… ಇವರ ಕರುಣಾಜನಕ ಕಥೆ ಕೇಳಿದ್ರೆ ಕರುಳುಹಿಂಡುತ್ತೆ…
ಒಬ್ಬಳಿಗಾಗಿ ಇಬ್ಬರ ಗಲಾಟೆ: ಪ್ರಿಯತಮೆ-ನಗರಸಭೆ ಸದಸ್ಯನ ಕಿರುಕುಳ… ಚಿಕ್ಕಬಳ್ಳಾಪುರದಲ್ಲಿ ನಡೆಯಿತು ಘೋರ ದುರಂತ

Sign in to your account
Please enter an answer in digits:three × 4 =
Remember me
