ಮಂಡ್ಯ:ಸಂಸದೆ ಸುಮಲತಾ ಅಂಬರೀಶ್​ ಅವರು ಬಿಜೆಪಿಗೆ ಸೇರ್ತಾರಾ? ಎಂಬ ಕುತೂಹಲಕ್ಕೆ ಸ್ವತಃ ಸುಮಲತಾ ಅವರೇ ತೆರೆ ಎಳೆದಿದ್ದಾರೆ.
ನಾನು ಬಿಜೆಪಿ ಸೇರುವ ಬಗ್ಗೆ ಎಲ್ಲೂ ಹೇಳಿಲ್ಲ. ಸದ್ಯ ನನಗೆ ಅದರ ಅವಶ್ಯಕತೆಯೂ ಇಲ್ಲ. ಈಗ ಚುನಾವಣೆಯೂ ಇಲ್ಲ, ಸದ್ಯ ಈ ಪ್ರಸ್ತಾಪವೂ ಇಲ್ಲ ಎಂದ ಸುಮಲತಾ, ಪಕ್ಷ ಸೇರ್ಪಡೆ ವಿಚಾರವಾಗಿ ಜನರ ಅಭಿಪ್ರಾಯ ಸಂಗ್ರಹಿಸುತ್ತಿದ್ದೇನೆ. ಜನರು ಅಭಿಪ್ರಾಯವನ್ನು ಬಹಿರಂಗವಾಗಿ ಹೇಳಲು ಆಗಲ್ಲ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೇಳಿದರು.
ಮದ್ದೂರಿನಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಸುಮಲತಾ, ಎರಡು ವರ್ಷಗಳಿಂದ ಸಂಸದರ ನಿಧಿ ಬಂದಿರಲಿಲ್ಲ. ಈಗ ಸಂಸದರ ನಿಧಿ ಬಿಡುಗಡೆಯಾಗಿದೆ. ಈ ಬಗ್ಗೆ ಚರ್ಚಿಸಲು ಮುಖಂಡರ ಸಭೆ ಕರೆದಿದ್ದೇನೆಯೇ ಹೊರತು, ಬಿಜೆಪಿ ಸೇರುವ ಕುರಿತು ಸಭೆ ಮಾಡಿಲ್ಲ. ಬಿಜೆಪಿ ಮುಖಂಡರನ್ನು ಭೇಟಿಯಾಗಿದ್ರೆ, ಅದು ಅಭಿವೃದ್ಧಿ ವಿಚಾರವಾಗಿ ಮಾತ್ರ. ಅವರ ಜತೆ ಅಭಿವೃದ್ಧಿ ವಿಚಾರವನ್ನಷ್ಟೇ ಮಾತನಾಡಿದ್ದೇನೆ. ಎಲ್ಲರೂ ಸ್ವತಂತ್ರರು. ಯಾರು ಯಾವ ಪಕ್ಷಕ್ಕಾದ್ರು ಸೇರಬಹುದು. ನನ್ನ ಚುನಾವಣೆ ವೇಳೆ ಎಲ್ಲಾ ಪಕ್ಷದವರು ದುಡಿದಿದ್ದಾರೆ. ನನ್ನ ಬೆಂಬಲಿಗರು ಬಿಜೆಪಿ ಸೇರ್ಪಡೆ ಬಗ್ಗೆ ನಾನು ಏನು ಹೇಳಲ್ಲ. ಅಭಿಷೇಕ್ ಚುನಾವಣೆಯಲ್ಲಿ ಸ್ಪರ್ಧಿಸೋದು ಆತನಿಗೆ ಬಿಟ್ಟ ವಿಚಾರ. ಸಿನಿಮಾಗೆ ಬಾ ಎಂದೂ ಹೇಳಿಲ್ಲ, ರಾಜಕೀಯಕ್ಕೂ ಬಾ ಎಂದೂ ನಾನು ಹೇಳಲ್ಲ. ಇದು ಅವನ ವೈಯಕ್ತಿಕ ವಿಚಾರ ಎಂದರು.
ಅತ್ತ ರಾಮನಗರದಲ್ಲಿ ಮಾತನಾಡಿದ ಸಿ.ಪಿ.ಯೋಗೇಶ್ವರ್​, ಸುಮಲತಾ ಅವರನ್ನು ಬಿಜೆಪಿಗೆ ಆಹ್ವಾನಿಸಿದ್ದು ನಿಜ. ನಮ್ಮ ಪಕ್ಷಕ್ಕೆ ಸಪೋರ್ಟ್​ ಮಾಡಿ ಎಂದಿದ್ದೇವೆ. ಅವರ ಗೆಲುವಿಗೆ ನಮ್ಮ ಪಕ್ಷ ಬೆಂಬಲ ನೀಡಿದೆ. ಪಕ್ಷ ಬಲವರ್ಧನೆಗೆ ಬೆಂಬಲ ನೀಡಿ ಎಂದು ಮನವಿ ಮಾಡಿದ್ದೇವೆ ಎಂದರು.
ಎಸ್​ಪಿಎಂ ಅವರನ್ನ ಮುಗಿಸಲು ಕಾಂಗ್ರೆಸ್​ನವರೇ ನನ್ನನ್ನು ಬಲವಂತವಾಗಿ ಚುನಾವಣೆಗೆ ನಿಲ್ಲಿಸಿದ್ರು: ದೇವೇಗೌಡ

ಯಾದಗಿರಿಯಲ್ಲಿ ಆಟೋ ಹತ್ತಿದ ಯುವತಿಗೆ ಸುಳ್ಳು ಹೇಳಿ, ದಾರಿ ತಪ್ಪಿಸಿ ಹಾಡಹಗಲೇ ರೇಪ್​: ವಿಡಿಯೋ ಚಿತ್ರೀಕರಿಸಿ ವಿಕೃತಿ

ಶಿಕ್ಷಕಿ ಜೊತೆ ಶಾಲೆಯಲ್ಲೇ ಸಂಭೋಗ ನಡೆಸಿದ ಪ್ರಿನ್ಸಿಪಾಲ್! ಗ್ರಾಮಸ್ಥರ ಎಚ್ಚರಿಕೆ ನಡುವೆಯೂ ಕಾಮದಾಟ ಮುಂದುವರಿಸಿದ್ದ ಜೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × five =
Remember me
