ಮಂಡ್ಯ:ಕೆಆರ್​ಎಸ್​ ಡ್ಯಾಂ ಮೇಲೆ ಬೆಂಬಲಿಗರೊಂದಿಗೆ ಸಂಸದೆ ಸುಮಲತಾ ಫೋಟೋಶೂಟ್ ಮಾಡಿಸಿದ್ದಾರೆ. ಬಡವರು, ಸಾಮಾನ್ಯರು, ಎಂಪಿ, ಎಂಎಲ್ಎ… ಎಲ್ಲರಿಗೂ ಕಾನೂನು ಒಂದೇ. ಊರಿಗೆಲ್ಲ ಬುದ್ಧಿ ಹೇಳುವವರೇ ದಿನ ಬೆಳಗ್ಗೆ ಈ ಕೆಲಸ ಮಾಡ್ತಾರೆ. ಬೇರೆ ಯಾರಾದ್ರು ಆಗಿದ್ರೆ ಇಷ್ಟೊತ್ತಿಗೆ ಎಫ್​ಐಆರ್​ ಆಗ್ತಿತ್ತು. ಸಂಸದರು ಅನ್ನೋ ಕಾರಣಕ್ಕೆ ಫೋಟೋ ಶೂಟ್​ಗೆ ಅವಕಾಶ ಕೊಡುವುದು ಸರಿಯಲ್ಲ. ಅವರ ವಿರುದ್ಧ ಕಾನೂನು ಕ್ರಮಕ್ಕೆ ಜರುಗಿಸಬೇಕು ಎಂದು ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಆಗ್ರಹಿಸಿದ್ದಾರೆ.

ಸಂಸದರ ಫೋಟೋ ಶೂಟ್ ನೋಡಿದ್ದೇನೆ. ಭಾರತ ದೇಶದ ಬಾವುಟ ಹಿಡಿದು ಬಹಳ ಅಭಿಮಾನ, ಪ್ರೀತಿ ತೋರಿಸಿದ್ದಾರೆ. ಕೆಆರ್​ಎಸ್​ ಡ್ಯಾಮ್​ ಮೇಲೆ ಬೇರೆ ಯಾರಾದ್ರು ಫೋಟೋ ಶೂಟ್​ ಮಾಡಿಸಿದ್ದರೆ ಇಷ್ಟೊತ್ತಿಗೆ ಎಫ್​ಐಆರ್​ ದಾಖಲಾಗ್ತಿತ್ತು. ಸಂಸದರು ಡ್ಯಾಂ ಮೇಲೆ ವೈಯುಕ್ತಿಕ ಫೋಟೋ ಶೂಟ್ ಮಾಡಿದ್ದಾರೆ‌. ಜತೆಗೆ ಬಾಗಿನ ಅರ್ಪಿಸಿದ್ದಾರೆ. ಒಮ್ಮೆಗೆ ಒಂದೇ ಸಲ ಬಾಗಿನ ಅರ್ಪಿಸುವುದು. ಎರಡನೇ ಬಾರಿ ಬಾಗಿನ ಅರ್ಪಿಸುವುದು ನಮ್ಮ ಸಂಪ್ರದಾಯದಲ್ಲಿಲ್ಲ. ಕಾನೂನು ಪ್ರಕಾರವಾದ ಕ್ರಮವಾಗಬೇಕು. ಕಾನೂನು ಎಲ್ಲರಿಗೂ ಒಂದೇ. ಮಳೆ ಬಿದ್ದು ಎಷ್ಟೋ ದಿನದ ಮೇಲೆ ಮಂಡ್ಯ-ಮದ್ದೂರಿಗೆ ಭೇಟಿ ನೀಡ್ತಾರೆ. ನೀರು ತುಂಬಿದಾಗ, ಜನ ಸಂಕಷ್ಟದಲ್ಲಿದ್ದಾಗ ಜನರ ಕಷ್ಟ ಕೇಳಿಲ್ಲ. ಕೆಆರ್​ಎಸ್​ ಡ್ಯಾಂ ಭದ್ರತೆ ಕುರಿತು ಕಾರ್ಯಗಾರ ನಡೆದಾಗ ದೆಹಲಿಯಲ್ಲಿದ್ದೆ ಅಂತ ಸುಳ್ಳು ಹೇಳ್ತಾರೆ. ಈ ಕಾರ್ಯಗಾರಕ್ಕೆ ಮಂತ್ರಿಗಳೂ ಬಂದಿದ್ದರು. ಆದರೆ ಆ ದಿನ ಸಂಸದರು ಬೆಂಗಳೂರಲ್ಲೇ ಇದ್ದರು. ಅವರು ಯಾವ ಡೆಲ್ಲಿಯಲ್ಲೂ ಕುಳಿತಿರಲಿಲ್ಲ ಎಂದು ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ ನಡೆಸಿದರು.

ಮಂಡ್ಯ ಜಿಲ್ಲೆಯ ಜನ ಗಣಿ ನಂಬಿ ಬದುಕುತ್ತಿದ್ರು, ಅವರಿಗೆ ತೊಂದರೆ ಕೊಡುವುದೇ ಉದ್ದೇಶ. ಯಾವುದೋ ಏಟ್ರಿಯಾ ಹೋಟೆಲ್​ನಲ್ಲಿ ಕುಳಿತ್ತಿದ್ದರು. ಅವರಿಗೆ ಏನು ಇಂಟ್ರೆಸ್ಟ್ ಇತ್ತೋ ಗೊತ್ತಿಲ್ಲ ನಮಗೆ. ಕೆಆರ್​ಎಸ್​ ಬಗ್ಗೆ ಇಂಟ್ರೆಸ್ಟ್ ಇಲ್ಲ ಅವರಿಗೆ. ಅವರ ಉದ್ದೇಶವೇ ಬೇರೆ, ಅಕ್ರಮ ಗಣಿ ನಿಲ್ಲಿಸಿದ್ರಂತೆ. ಇವತ್ತು ಮಂಡ್ಯಕ್ಕೆ ಜಲ್ಲಿ ಸಿಕ್ತಿಲ್ಲ, ಅಭಿವೃದ್ಧಿ ಕಾರ್ಯವಾಗ್ತಿಲ್ಲ. ಬೇರೆ ಜಿಲ್ಲೆಯಲ್ಲಿ ಟೈ ಅಪ್ ಮಾಡಿಕೊಂಡು ಹೊರಗಡೆಯಿಂದ ಮೆಟೀರಿಯಲ್ಸ್ ಬರ್ತಿದೆ. ಅದರ ಉದ್ದೇಶ ಏನು? ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಡಿಸಿಗೆ ಮೌಖಿಕವಾಗಿ ಹೇಳಿದ್ರು. ಜಿಲ್ಲೆ ಅಭಿವೃದ್ಧಿಗೆ ಮೆಟೀರಿಯಲ್ ಸಿಗಲಿ, ಕ್ರಷರ್ ನಡೀಲಿ ಅಂತ. ಅದನ್ನೇ ನಂಬಿ ಬದುಕುತ್ತಿದ್ದ ಲಕ್ಷಾಂತರ ಜನಕ್ಕೆ ಸಂಸದರು ಅನ್ಯಾಯ ಮಾಡಿದ್ರು. ಹೊರಗಡೆಯಿಂದ ಮೆಟೀರಿಯಲ್ಸ್ ಬರ್ತಿದೆ. ಜನ ಮಾತನಾಡ್ತಿದ್ದಾರೆ… ಅಧಿಕಾರಿಗಳು ಮತ್ತು ಅವರು ಶಾಮಿಲಾಗಿದ್ದಾರೆ ಅಂತ ಎಂದು ರವೀಂದ್ರ ಶ್ರೀಕಂಠಯ್ಯ ಗಂಭೀರ ಆರೋಪ ಮಾಡಿದರು.

ಕೋಮುಗಲಭೆಯಲ್ಲ, ಜೂಜಿನ ವೇಳೆ ನಡೆದ ಗಲಾಟೆ: ವಿಡಿಯೋ ಸಹಿತ BJPಗೆ ಭದ್ರಾವತಿ ಶಾಸಕ ತಿರುಗೇಟು

ಸಿಎಂ ಹೇಳಿದರೆ ರಾಜೀನಾಮೆಗೆ ಸಿದ್ಧ… ಕೊನೆಗೂ ಮೌನ ಮುರಿದ ಸಚಿವ ಮಾಧುಸ್ವಾಮಿ

ಧರ್ಮಸ್ಥಳದಲ್ಲಿ ರೂಂ ಸಿಗಲಿಲ್ಲವೆಂದು ಸುಬ್ರಹ್ಮಣ್ಯಕ್ಕೆ ಹೊರಟಿದ್ದ ಭಿನ್ನಕೋಮಿನ ಜೋಡಿಗೆ ಮಾರ್ಗದಲ್ಲೇ ಕಾದಿತ್ತು ಶಾಕ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − eight =
Remember me
