ಮಂಡ್ಯ:ಸಂಸದೆ ಸುಮಲತಾ ಅಂಬರೀಷ್​ ಅವರ ಬುದ್ಧಿ ಏನಂತ ಅರ್ಥವಾಗಿದೆ. ನಾವು ಏನು ಮಾತನಾಡಿದ್ರೂ ಸುಮಲತಾ ಬಂಡವಾಳ ಮಾಡ್ಕೊಳ್ತಾರೆ. ಕಿತಾಪತಿ-ಜಗಳ ಮಾಡಲೆಂದೇ ಬರ್ತಾರೆ. ಅದಕ್ಕೆ ನಾವು ಮಾತನಾಡದೆ ಸುಮ್ಮನಿದ್ದೀವಿ ಎಂದು ನಾಗಮಂಗಲ ಶಾಸಕ ಸುರೇಶ್ ಗೌಡ ಲೇವಡಿ ಮಾಡಿದ್ದಾರೆ.
ಶಾಸಕರ ಕೆಲಸವನ್ನೂ ನಾನೇ ಮಾಡ್ತಿದ್ದೀನಿ ಎಂದಿದ್ದ ಸುಮಲತಾಗೆ ಡಿ.ಸಿ.ತಮ್ಮಣ್ಣ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಸುರೇಶ್​ ಗೌಡ ಕೂಡ ಸಂಸದೆ ವಿರುದ್ಧ ಕಿಡಿಕಾರಿದ್ದಾರೆ. ಬಹಿರಂಗ ಚರ್ಚೆಗೆ ಬರುವಂತೆ ತಮ್ಮಣ್ಣ ಆಹ್ವಾನ ನೀಡಿದ್ದಾರೆ. ಇದೀಗ ಸುರೇಶ್​ ಗೌಡರು, ಸುಮಲತಾ ಅವರೀಗ ಎಲ್ಲಿದ್ದಾರೆ? ಮಂಡ್ಯ ಮನೆಯಲ್ಲಿದ್ದಾರಾ? ಗುದ್ದಲಿ ಪೂಜೆಗಳಿಗೆ ಕರೆಯಲು ನಾನು ಅವರನ್ನೀಗ ಹುಡುಕಾಡುತ್ತಿದ್ದೀನಿ ಎಂದು ವ್ಯಂಗ್ಯವಾಡಿದ್ದಾರೆ.
ಸುಮಲತಾ ಅವರ ಪ್ರಕಾರ ನಾವ್ಯಾವ ಶಾಸಕರೂ ಕ್ಷೇತ್ರದಲ್ಲಿ ಇಲ್ಲ. ನಾವು ನಿಸ್ಪ್ರಯೋಜಕರು, ಕ್ಷೇತ್ರ ಯಾವ ಅನುದಾನವನ್ನೂ ತಂದಿಲ್ಲ, ಬಹಳ ಸಂತೋಷ. ಈ ಕುರಿತು ಇನ್ನೊಂದು ವರ್ಷದ ಬಳಿಕ ಜನರೇ ತೀರ್ಪು ಕೊಡ್ತಾರೆ ಎಂದ ಸುರೇಶ್ ಗೌಡ, ಸಂಸದರು ನಮಗೇ ಸಿಗ್ತಿಲ್ಲ, ಅವರು ಜನಸಾಮಾನ್ಯರಿಗೆ ಹೇಗೆ ಸಿಗ್ತಾರೆ? ಅವರು ಅವರ ಅಧಿಕಾರ ವ್ಯಾಪ್ತಿ ಅರ್ಥ ಮಾಡ್ಕೊಂಡ್ರೆ ಬಹಳ ಒಳ್ಳೆಯದು. ಇಲ್ಲದಿದ್ದರೆ ಗೊಂದಲಕ್ಕೆ ಕಾರಣವಾಗುತ್ತೆ‌‌. ನಾವು ಒಬ್ಬ ಹೆಣ್ಣು ಮಗಳು, ಸೋದರಿ ಅಂತ ಸುಮ್ಮನಿದ್ದೇವೆ‌‌. ಇವರ ವಿರುದ್ಧ ನಾವು ಅಸೆಂಬ್ಲಿಯಲ್ಲಿ ಧ್ವನಿ ಎತ್ತ ಬಹುದು. ಬೇರೆಲ್ಲ‌ ಎಂಪಿ ಹೇಗಿದ್ದಾರೆ? ಇವರು ಈ ರೀತಿ ಮಾಡ್ತಾರೆ ಅಂತ. ಅದರ ಅವಶ್ಯಕತೆ ನಮಗೆ ಇಲ್ಲ. ನಾವು ಏನು ಮಾತನಾಡಿದ್ರು, ನಮ್ಮದೇ ತಪ್ಪು ಅಂತ ಬಂಡವಾಳ ಮಾಡ್ಕೊಳ್ತಾರೆ. ನಮ್ಮ ಬಗ್ಗೆ ಕ್ಷೇತ್ರದ ಜನರೇ ತೀರ್ಪು ಕೊಡ್ತಾರೆ ಎಂದರು.
ನಮ್ಮನ್ನೆಲ್ಲ ಹೊರಗಿಟ್ಟು ದಿಶಾ ಸಭೆ ಮಾಡಿದಾಗಲೇ ಸುಮಲತಾರ ಬುದ್ಧಿ ಅರ್ಥವಾಗಿದೆ. ಸರ್ಕಾರದ ರೂಲ್ಸ್ ಇದೆ, ಅಸೆಂಬ್ಲಿ ನಡೆಯುವ ಸಂದರ್ಭದಲ್ಲಿ ದಿಶಾ ಮೀಟಿಂಗ್ ಅಲ್ಲ, ದರ್ಕಾಸ್ ಮಿಟಿಂಗ್ ಸಹ ಕರೆಯುವ ಆಗಿಲ್ಲ. ಸರ್ಕಾರವೇ ಸೂಕ್ತ ನಿರ್ದೇಶನ ಕೊಟ್ಟಿದೆ. ದಿಶಾ ಸಭೆಗೆ ನಾವು ಬರಬಾರದು ಅನ್ನೊ ಒಂದು ಕಾರಣಕ್ಕೆ ನಮ್ಮನ್ನ ಬಿಟ್ಟು ಮೀಟಿಂಗ್ ಮಾಡ್ತಾರೆ. ನಾವು ಅಸೆಂಬ್ಲಿಯಲ್ಲಿ ಪಾಲ್ಗೊಳ್ಳಬೇಕಾ? ದಿಶಾ ಸಭೆಗೆ ಹೋಗಬೇಕಾ ಎಂದು ಪತ್ರ ಕೊಟ್ಟಿದ್ದೆವು. ಸ್ಪೀಕರ್ ಅವರು ಅಸೆಂಬ್ಲಿಯಲ್ಲಿ ಪಾಲ್ಗೊಳ್ಳಿ ಅಂತ ತಿಳಿಸಿದ್ರು. ನಾವು ಬಂದ್ರೆ ಸಮಸ್ಯೆ ಬಗ್ಗೆ ನೇರವಾಗಿ ಮಾತನಾಡ್ತೀವಿ. ನಾವು ಬರದೆ ಅವರೊಬ್ಬರೇ ಇದ್ರೆ ಅಧಿಕಾರಿಗಳನ್ನ ಹೆದರಿಸಬಹುದು ಎಂದರು.
ಸಂಸದೆ ಸುಮಲತಾ ಅಂಬರೀಷ್​ಗೆ ಓಪನ್​ ಚಾಲೆಂಜ್​ ಹಾಕಿದ ಜೆಡಿಎಸ್​ ಶಾಸಕ ಡಿ.ಸಿ. ತಮ್ಮಣ್ಣ

https://www.vijayavani.net/a-shidlaghatta-talluku-kundalagurki-grama-munikrishana-death-
ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಮಹಿಳೆ ಸಾವು! ಬೆಂಗಳೂರಲ್ಲಿ ಬೆಚ್ಚಿಬೀಳಿಸೋ ಘಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 7 =
Remember me
