ಪಾಂಡವಪುರ:ನವ ಜೀವನಕ್ಕೆ ಕಾಲಿಟ್ಟ ಮರುಕ್ಷಣವೇ ಬುಧವಾರ ಮದುಮಗಳು ನೇರವಾಗಿ ಕಾಲೇಜಿಗೆ ಬಂದು ಪರೀಕ್ಷೆ ಬರೆದಿದ್ದಾಳೆ.
ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣದ ಎಸ್‍ಟಿಜಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿನಿ ಎಲ್.ವೈ.ಐಶ್ವರ್ಯ(ತೇಜಸ್ವಿನಿ) ತಾಳಿ ಕಟ್ಟಿಸಿಕೊಂಡು ನೇರವಾಗಿ ಪರೀಕ್ಷೆಗೆ ಹಾಜರ್​ ಆಗಿ ಬೆರಗು ಮೂಡಿಸಿದರು.
ಲಿಂಗಪುರ ಗ್ರಾಮದ ಕಮಲಾ ಮತ್ತು ಯೋಗೇಂದ್ರ ಅವರ ಪುತ್ರಿ ಐಶ್ವರ್ಯಾ ಹಾಗೂ ಮೈಸೂರು ತಾಲೂಕು ಲಕ್ಷ್ಮೀಪುರ ಗ್ರಾಮದ ಭಾಗ್ಯಲಕ್ಷ್ಮೀ ಮತ್ತು ಸೋಮಶೇಖರ್​ ಅವರ ಪುತ್ರ ಎಲ್​.ಎಸ್​.ಯಶ್ವಂತ್​ ಅವರ ವಿವಾಹ ಪಟ್ಟಣದ ಟಿಎಪಿಸಿಎಂಎಸ್​ ಕಲ್ಯಾಣ ಮಂಟಪದಲ್ಲಿ ಬುಧವಾರ ನೆರವೇರಿತು. ಆದರೆ ಇದೇ ದಿನ ಬಿಕಾಂ ಪ್ರಥಮ ವರ್ಷದ ಡಿಜಿಟಲ್​ ಫ್ಲೂಯೆನ್ಸಿ ವಿಷಯ ಪರೀಕ್ಷೆ ಇದ್ದ ಕಾರಣ ಧಾರೆ ಮುಗಿದ ತಕ್ಷಣ ನವವಧು ಹಿರಿಯರ ಅನುಮತಿ ಪಡೆದು ಪರೀಕ್ಷೆಗೆ ಹಾಜರಾದರು.
ಐಶ್ವರ್ಯಳ ಮದುವೆ ಇಂದು ಅವಿನಾಶ್ ಎಲ್.ಎಸ್ ಜೊತೆಗೆ ನಿಶ್ಚಯವಾಗಿತ್ತು. ಬೆಳಗ್ಗೆ 9.30 ರಿಂದ 10.30ರವರೆಗೆ ಮುಹೂರ್ತವಿದ್ದು ನಂತರ ಆರತಕ್ಷತೆ ಮುಗಿಸಿ ಅತ್ತೆಯ ಮನೆಗೆ ಪ್ರವೇಶಿಸ ಬೇಕಿದ್ದ ಮದುಮಗಳು ಕಲ್ಯಾಣ ಮಂಟಪದಿಂದ ಮದುಮಗನೊಂದಿಗೆ ಕಾಲೇಜಿಗೆ ಆಗಮಿಸಿದಳು. ನಂತರ ವಧು ನೇರವಾಗಿ ಪರೀಕ್ಷೆಯ ಕೊಠಡಿಗೆ ಪ್ರವೇಶಿಸಿದಳು. ಮದುವೆಯ ದಿನವೇ ಮೈಸೂರು ವಿಶ್ವವಿದ್ಯಾನಿಲಯದ ಪ್ರಥಮ ಸೆಮಿಸ್ಟರ್ ಬಿಕಾಂ ಪತ್ರಿಕೆ ಡಿಜಿಟಲ್ ಫ್ಲೂಯೆನ್ಸಿ ಪರೀಕ್ಷೆ ನಿಗದಿಯಾಗಿತ್ತು, ಮದುವೆ ಕಾರಣಕ್ಕೆ ಪರೀಕ್ಷೆಗೆ ತೊಂದರೆ ಆಗಬಾರದೆಂದು ಯೋಚಿಸಿ ಗಂಡು ಮತ್ತು ಹೆಣ್ಣಿನ ಮನೆಯವರಿಬ್ಬರು ಐಶ್ವರ್ಯಳನ್ನು ಪ್ರೋತ್ಸಾಹಿಸಿ ಪರೀಕ್ಷೆ ಬರೆಯಲು ಕಳುಹಿಸಿ ಕೊಡಲು ನಿಶ್ಚಯಿಸಿದರು. ಮಧುಮಗಳ ಅಲಂಕಾರದಲ್ಲೇ ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಪರೀಕ್ಷೆ ಬರೆದು ಇತರ ಎಲ್ಲ ಹೆಣ್ಣು ಮಕ್ಕಳಿಗೂ ಪ್ರೇರಣೆಯಾಗಿದ್ದಾಳೆ.
ವಿದ್ಯಾರ್ಥಿನಿಗೆ ಶ್ಲಾಘನೆ:ಮದುವೆ ದಿನವೇ ಪರೀಕ್ಷೆ ಬರೆದ ವಿದ್ಯಾರ್ಥಿನಿ ಐಶ್ವರ್ಯ ಹಾಗೂ ಈಕೆಗೆ ಸಹಕಾರ ನೀಡಿದ ಪಾಲಕರಿಗೆ ಶಾಸಕ ಸಿ.ಎಸ್​.ಪುಟ್ಟರಾಜು ಹಾಗೂ ಎಸ್​ಟಿಜಿ ಶಿಕ್ಷಣ ಸಂಸ್ಥೆಯ ಸಿಇಒ ಸಿ.ಪಿ.ಶಿವರಾಜು ಅಭಿನಂದನೆ ಸಲ್ಲಿಸಿದ್ದಾರೆ.
ಕೊನೆಗೂ ಗುಡ್​ನ್ಯೂಸ್​ ಕೊಟ್ಟ ರಮ್ಯಾ! ಮೋಹಕ ತಾರೆಯ ಈ ನಿರ್ಧಾರದ ಹಿಂದಿದೆಯಾ ಆ ನೋವು?

ಗಂಡನ ಎದುರೇ ಮಹಿಳೆಯನ್ನ ವಿವಸ್ತ್ರಗೊಳಿಸಿ ಗ್ಯಾಂಗ್​ರೇಪ್​ಗೆ ಯತ್ನ! ಗೃಹ ಸಚಿವರ ಊರಲ್ಲೇ ಹೇಯಕೃತ್ಯ

ದಾಖಲೆ ಬರೆದ ಕೆಂಪಡಕೆ ಬೆಲೆ! ಅಡಕೆ ಬೆಳೆಗಾರರ ಮೊಗದಲ್ಲಿ ಸಂತಸ

Sign in to your account
Please enter an answer in digits:five × 1 =
Remember me
