ಮಂಡ್ಯ:ಮನೆಯನ್ನು ಬಾಡಿಗೆ ಕೊಡುವ ಮುನ್ನ ಜೋಕೆ! ಮಂಡ್ಯ ಜಿಲ್ಲೆಯಲ್ಲಿ ಬಾಡಿಗೆಗೆ ಮನೆ ಪಡೆದಿದ್ದ ಮುಸ್ಲಿಂ ಕುಟುಂಬವೊಂದು ಆ ಮನೆಯನ್ನು ಬಳಸಿಕೊಂಡ ರೀತಿ ನೋಡಿ ಮನೆಯ ಮಾಲೀಕರೇ ಬೆಚ್ಚಿಬಿದ್ದಿದ್ದಾರೆ.
ಮಂಡ್ಯ ಜಿಲ್ಲೆ ಮಳವಳ್ಳಿ ಪಟ್ಟಣದ ಕೋಟೆ ಬೀದಿಯಲ್ಲಿ ಪವಿತ್ರ ರಾಜ್ ಎಂಬುವವರು ತಮ್ಮ ಮನೆಯನ್ನು ಮುಸ್ಲಿಂ ಕುಟುಂಬವೊಂದಕ್ಕೆ ಬಾಡಿಗೆಗೆ ಕೊಟ್ಟಿದ್ದರು. ತಸ್ಲೀಮ್ ಎಂಬ ಮಹಿಳೆ ಮತ್ತು ಆಕೆಯ ಐವರು ಪುತ್ರರು ಆ ಮನೆಯಲ್ಲಿ ವಾಸವಿದ್ದರು. ಮನೆ ಶಿಥಿಲಾವಸ್ಥೆಗೆ ತಲುಪಿದ್ದರಿಂದ ಮನೆ ಖಾಲಿ ಮಾಡುವಂತೆ ಮಾಲೀಕರು ಆ ಕುಟುಂಬದವರಿಗೆ ಹೇಳಿದ್ದರು. ಆದರೆ ಅವರು ಎರಡು ತಿಂಗಳಾದರೂ ಮನೆ ಖಾಲಿ ಮಾಡದೆ ನೆಪ ಹೇಳುತ್ತಿದ್ದರು.
ಮೊನ್ನೆ ಸುರಿದ ಭಾರೀ ಮಳೆಗೆ ಮನೆಯ ಒಂದು ಭಾಗದ ಗೋಡೆ ಕುಸಿದಿತ್ತು. ಅದನ್ನು ನೋಡಲು ತೆರಳಿದ ಮನೆ ಮಾಲೀಕನಿಗೆ ಶಾಕ್ ಕಾದಿತ್ತು. ಮನೆಯಲ್ಲಿ ಮಚ್ಚು ಲಾಂಗುಗಳು ಕಂಡುಬಂದವು. ಮತ್ತೊಂದು ಕೋಣೆಯಲ್ಲಿ ಗಾಂಜಾ ಸೇವನೆಯ ಬೂದಿ, ಸಲ್ಯೂಷನ್ ಪ್ಯಾಕೆಟ್‌ಗಳು ಕಂಡವು. ಅಷ್ಟೇ ಅಲ್ಲ, ಸ್ನಾನದ ಕೋಣೆಯಲ್ಲಿ 12 ಅಡಿ ಆಳದ ಸುರಂಗ ಕೊರೆಯಲಾಗಿತ್ತು.
ವಿಷಯ ಗೊತ್ತಾದ ಕೂಡಲೇ ಮನೆ ಮಾಲೀಕರು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದರು. ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಆ ಕುಟುಂಬದ ಸದಸ್ಯರು ಪರಾರಿಯಾಗಿದ್ದರು. ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಮನೆಗೆ ಹಲವಾರು ಯುವಕರು ರಾತ್ರಿ ವೇಳೆ ಬರುತ್ತಿದ್ದರು. ಬಹುಶಃ ಇಲ್ಲಿಯೇ ಗಾಂಜಾ ಮಾರಾಟ-ಸೇವನೆ ಮಾಡುತ್ತಿರಬಹುದು ಎಂದು ಸ್ಥಳೀಯರು ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್​ಗೆ ಮತ್ತೊಂದು ಶಾಕ್​: ಗುಲಾಂ ನಬಿ ಆಜಾದ್​ ಬೆನ್ನಲ್ಲೇ 50ಕ್ಕೂ ಹೆಚ್ಚು ಮುಖಂಡರು ರಾಜೀನಾಮೆ

ಗೌರಿ ಹಬ್ಬದ ದಿನವೇ ದುರಂತ: ಕಾಲುವೆಗೆ ಕಾರು ಬಿದ್ದು ದಂಪತಿ ಸಾವು, ನೀರಲ್ಲಿ ಕೊಚ್ಚಿಹೋದ ಮಗ

ಒಂದೇ ದಿನ ತಾಯಿ-ಮಗ ಇಬ್ಬರೂ ಹೃದಯಾಘಾತದಿಂದ ಸಾವು! ಮೈಸೂರು ಜಿಲ್ಲೆಯಲ್ಲಿ ಮನಕಲಕುವ ಘಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
