ಮಂಡ್ಯ:ಜೀವನದಿ ಕಾವೇರಿ ಪ್ರವಾಹದಲ್ಲಿ ಕಳೆದ ವಾರ ಯುವಕರಿಬ್ಬರು ಕೊಚ್ಚಿ ಹೋಗಿದ್ದು, ಎನ್‌ಡಿಆರ್‌ಎಫ್, ಅಗ್ನಿಶಾಮಕ ಹಾಗೂ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದರೂ ಅವರ ಪತ್ತೆಯ ಯಾವುದೇ ಸುಳಿವಿಲ್ಲ. ಆದರೂ ಎಚ್ಚೆತ್ತುಕೊಳ್ಳದ ಶ್ರೀರಂಗಪಟ್ಟಣ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ, ಕಾವೇರಿ ನದಿಯ ಪ್ರವಾಹದಲ್ಲಿ ಇನ್ನಷ್ಟು ಜನರನ್ನು ಬಲಿಕೊಡಲು ಪರೋಕ್ಷವಾಗಿ ನೆರವಾಗುತ್ತಿದೆ.
ಪುರಾಣ, ಪುರಾತನ ಹಾಗೂ ಪಾರಂಪರಿಕತೆಯ ಐತಿಹ್ಯದಿಂದ ವಿಶ್ವ ವಿಖ್ಯಾತವಾಗಿರುವ ಶ್ರೀರಂಗಪಟ್ಟಣದಲ್ಲಿ ಇದೀಗ ಪಿಂಡಪ್ರದಾನ ಹೆಸರಲ್ಲಿ ನಕಲಿ ವೈದ್ಧಿಕರು ಹಾಗೂ ದಂಧೆಕೋರರ ಸುಲಿಗೆಯಿಂದ ಕಳಂಕ ಹೊರುವ ಜತೆಗೆ ಇಂತಹ ಜನರ ಹಣದ ದುರಾಸೆಗೆ ಮುಗ್ಧ ಜನರು ಬಲಿಯಾಗುತ್ತಿದ್ದಾರೆ.
ನಿತ್ಯ ಸಾವಿರಾರು ಸಂಖ್ಯೆಯ ನಾಡಿನ ಜನರು ವಿವಿಧ ಧಾರ್ಮಿಕ ಪ್ರಕ್ರಿಯೆ ಸೇರಿದಂತೆ ಪಿಂಡಪ್ರದಾನ ನೆರವೇರಿಸಲು ಗಂಜಾಂನ ಗೋಸಾಯ್ ಘಾಟ್ ಹಾಗೂ ಸಂಗಮಕ್ಕೆ ಆಗಮಿಸುತ್ತಿದ್ದಾರೆ. ಪ್ರಸ್ತುತ ತಾಲೂಕು ಆಡಳಿತ ಪ್ರವಾಹದ ಹಿನ್ನಲೆ ನದಿ ತೀರಕ್ಕೆ ನಿಷೇಧಾಜ್ಞೆ ಹೇರಿ ಯಾರನ್ನೂ ಒಳಪ್ರವೇಶಿದಂತೆ ಬ್ಯಾರಿಕೇಡ್ ಅಳವಡಿಸಿ ಪೊಲೀಸರು ಮತ್ತು ಹೋಮ್ ಗಾರ್ಡ್ ಗಳನ್ನು ನೇಮಿಸಿದ್ದಾರೆ. ಭದ್ರತೆ ಕಡೆಗಣಿಸಿ ಕೆಲವರು ತಮ್ಮ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲೇಬೇಕೆಂಬ ಉದ್ದೇಶದಿಂದ ಗೋಸಾಯ್ ಘಾಟ್, ಸಂಗಮ ಹಾಗೂ ಪಟ್ಟಣದ ರಂಗನಾಥಸ್ವಾಮಿ ದೇಗುಲದ ಮಗ್ಗಲಲ್ಲಿರುವ ಜಿ.ಬಿ.ಹೊಳೆಯಲ್ಲಿನ ಖಾಸಗಿ ವ್ಯಕ್ತಿಗಳ ಕೃಷಿ ಭೂಮಿಗಳಲ್ಲಿ ಅಕ್ರಮವಾಗಿ ನಿರ್ಮಿಸಿರುವ ಶೆಡ್‌ಗಳಿಗೆ ಆಗಮಿಸಿ ಪಿಂಡಪ್ರದಾನ, ನಾರಾಯಣಬಲಿ, ಅಸ್ಥಿವಿಸರ್ಜನೆಯಂತಹ ಪೂಜಾ ಕಾರ್ಯದ ಬಳಿಕ ಸುರಕ್ಷತೆ ಹಾಗೂ ಸುರಕ್ಷತಾ ಕ್ರಮಗಳನ್ನೇ ಕೈಗೊಳ್ಳದ ಕೃಷಿ ಭೂಮಿಯ ತೀರದಲ್ಲಿ ವೈದ್ಧಿಕರ ನಿರ್ದೇಶನದಂತೆ ವಿಸರ್ಜನೆ ಸುಲುವಾಗಿ ಕಾವೇರಿ ನದಿಗಿಳಿಯುತ್ತಿದ್ದಾರೆ. ಒಂದು ವೇಳೆ ಅಚಾನಕ್ ಸಮಸ್ಯೆ ಎದುರಾದರೆ ಅಸ್ಥಿ ಅಥವಾ ಪಿಂಡ ವಿಸರ್ಜನೆಗೆ ಇಳಿದ ಜನರು ಸಹ ಪಿಂಡದೊಂದಿಗೆ ತಾವೇ ಕಾವೇರಿಯ ಪ್ರವಾಹದಲ್ಲಿ ಕೊಚ್ಚಿಹೋದರೂ ಆಶ್ಚರ್ಯವಿಲ್ಲ.
ನದಿ ತೀರಗಳಲ್ಲಿ ಜನರು ತೆರಳಲು ನಿಷೇಧಾಜ್ಞೆ ಹೊರಡಿಸಿ ತಡೆ ನೀಡಿದ ಕ್ರಮವೇ ಕೆಲವರಿಗೆ ವರದಾನವಾಗಿದೆ. ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲು ಮೇಲಿಂದ ಮೇಲೆ ಆಗಮಿಸುವವರಿಗೆ ಒಳಬಿಡಲು ಕೆಲವರು ವಾಮ ಮಾರ್ಗವನ್ನು ಬಳಸಿಕೊಂಡಿದ್ದಾರೆ. ಕಾರೊಂದರ ಪ್ರವೇಶಕ್ಕೆ 100 ರೂ., ಟಿಟಿ ವಾಹನಕ್ಕೆ 200 ರೂ. ಪಡೆದು ಕೆಲಗಂಟೆಗಳಲ್ಲೇ ವಾಪಸ್ ಬರಬೇಕೆಂಬ ತಾಕೀತು ಮಾಡಿ ಕಳುಹಿಸಲಾಗುತ್ತಿದೆ. ಇದರೊಂದಿಗೆ ತಾಲೂಕು ಆಡಳಿತ ದಾಳಿ ಮಾಡುವ ಸೂಚನೆ ನೀಡುವುದರ ಜತೆಗೆ ಅಸ್ಥಿ ವಿಸರ್ಜನೆ, ನಾರಾಯಣ ಬಲಿ, ಹೋಮ ಹವನಗಳು ಸೇರಿದಂತೆ ವಿವಿಧ ಪೂಜೆಗಳಿಗೆ ಆಗಮಿಸಿದ ಜನರಿಗೆ ವಾಹನ ಪಾರ್ಕಿಂಗ್, ಊಟಉಪಚಾರ ಸೇರಿದಂತೆ ತಲಾ 30 ರಿಂದ 35 ಸಾವಿರ ರೂ.ಗಳನ್ನು ಪಡೆಯಲಾಗುತ್ತಿದೆ ಎಂಬ ಆರೋಪ ದಟ್ಟವಾಗಿದೆ. ದಂಧೆಗಾಗಿ ಕೃಷಿ ಭೂಮಿಗಳಲ್ಲಿ ಅಕ್ರಮ ಶೆಡ್ ಹಾಗೂ ವಾಣಿಜ್ಯ ಕಟ್ಟಡಗಳ ನಿರ್ಮಾಣ ಮಾಡಿಕೊಳ್ಳಲಾಗಿದೆ. ತಾಲೂಕು ಆಡಳಿತ ಕೂಡಲೇ ಎಚ್ಚೆತ್ತುಕೊಂಡು ಇದರ ವಿರುದ್ಧ ಕ್ರಮ ವಹಿಸಬೇಕಿದೆ.
ಮಲ್ಪೆ ಕಡಲ ತೀರದಲ್ಲಿ ಬೀಳುತ್ತಿದೆ ಚಿನ್ನ! ಕಸದ ರಾಶಿಯಲ್ಲಿ ಬಂಗಾರದ ಬೇಟೆಗೆ ಮುಗಿಬಿದ್ದ ಜನ

ಬೈಕ್​ ಸ್ಕಿಡ್​ ಆಗಿ ವಿದ್ಯಾರ್ಥಿಗಳಿಬ್ಬರ ಸಾವು: ರಜೆ ಹಿನ್ನೆಲೆ ಮುರುಡೇಶ್ವರಕ್ಕೆ ತೆರಳುವಾಗ ಅವಘಡ

ಶಿವಮೊಗ್ಗದಲ್ಲಿ ವರದಕ್ಷಿಣೆ ಕಿರುಕುಳಕ್ಕೆ ತಾಯಿ-ಮಗು ಬಲಿ: ಪ್ರೀತಿಸಿ ಮದ್ವೆಯಾದವಳ ಬಾಳಲ್ಲಿ ದುರಂತ

ಹಾಸ್ಟೆಲ್​ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ: ರೊಚ್ಚಿಗೆದ್ದ ಜನರಿಂದ 14 ಶಾಲಾ ಬಸ್​ಗಳಿಗೆ ಬೆಂಕಿ ಇಟ್ಟು ದಾಂಧಲೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + fifteen =
Remember me
