ಮಂಗಳೂರು:ನಗರದ ಖಾಸಗಿ ಪಿಯು ಕಾಲೇಜೊಂದರ ವಿದ್ಯಾರ್ಥಿಗಳ ಕಿಸ್ಸಿಂಗ್​ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆದ ಬೆನ್ನಲ್ಲೇ ಸೆಕ್ಸ್​ ವಿಡಿಯೋ ಕೂಡ ವೈರಲ್​ ಆಗಿದೆ.
ಕಾಲೇಜು ಯೂನಿಫಾರಂನಲ್ಲೇ ಇರುವ ಕಾರಣದಿಂದ ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳು ಎನ್ನುವುದು ಬೆಳಕಿಗೆ ಬಂದಿದೆ. ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಮಂಗಳೂರು ಪೊಲೀಸರು ವಿದ್ಯಾರ್ಥಿಗಳನ್ನ ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ. ವಿದ್ಯಾರ್ಥಿನಿ-ವಿದ್ಯಾರ್ಥಿ ಸೆಕ್ಸ್​ ಮಾಡಿರುವ ವಿಡಿಯೋ ಕೂಡ ವೈರಲ್​ ಆಗಿದ್ದು, ವಿದ್ಯಾರ್ಥಿಗಳು ದಾರಿ ತಪ್ಪಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆತಂಕ ಮನೆ ಮಾಡಿದೆ.
ಈ ಪ್ರಕರಣದಲ್ಲಿ ತಂಡದ ಇಬ್ಬರು ವಿದ್ಯಾರ್ಥಿಗಳು ಬಾವುಟಗುಡ್ಡೆಯಲ್ಲಿರುವ ಅಪಾರ್ಟ್​ಮೆಂಟ್​ನಲ್ಲಿ ರೂಂ ಪಡೆದಿದ್ದರು. ಇಲ್ಲೇ ವಿದ್ಯಾರ್ಥಿಗಳು Truth or Dare ಆಟ ಆಡಿದ್ದಾರೆ. Truth ಅಂದ್ರೆ ಸತ್ಯ ಹೇಳಬೇಕು, Dare ಅಂದ್ರೆ ಹೇಳಿದ್ದನ್ನು ಮಾಡಿ ತೋರಿಸಬೇಕು. ಈ ಸಂದರ್ಭದಲ್ಲಿ Truth or Dare ಆಟದಂತೇ ವಿದ್ಯಾರ್ಥಿಗಳು ಪರಸ್ಪರ ಕಿಸ್ ಮಾಡಿದ್ದಾರೆ. ಅಲ್ಲಿಯೇ ಈ ವಿಡಿಯೋ ಮಾಡಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ. Truth or Dare ಆಟದ ನೆಪದಲ್ಲಿ ಕಿಸ್ಸಿಂಗ್​ ಮಾಡುತ್ತಿರುವ ದೃಶ್ಯವನ್ನು ಸೆರೆಹಿಡಿದ ವಿದ್ಯಾರ್ಥಿಯೇ ಅದನ್ನು ವೈರಲ್ ಮಾಡಿದ್ದಾನೆ. ಇದರ ಬೆನ್ನಲ್ಲೇ ಮತ್ತೊಂದು ಸೆಕ್ಸ್​ ವಿಡಿಯೋ ವೈರಲ್​ ಆಗಿದ್ದು, ಇವರ ಕೃತ್ಯಕ್ಕೆ ಕಾಲೇಜಿನ ಇರತ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಮುಜುಗರ ಉಂಟಾಗಿದೆ.
ಈ ಪ್ರಕರಣದಲ್ಲಿರುವ ವಿದ್ಯಾರ್ಥಿಗಳ ಪೈಕಿ ಹಲವರು ಅಪ್ರಾಪ್ತರು. ವಿದ್ಯಾಭ್ಯಾಸ ಮಾಡುತ್ತಲೇ ಸಾಧನೆಯ ಕನಸಿನ ಬೆನ್ನುಹತ್ತ ಬೇಕಿದ್ದ ಹದಿಹರೆಯದ ಮಕ್ಕಳು ದಾರಿ ತಪ್ಪಿರುವ ಸುದ್ದಿ ಆತಂಕ ಸೃಷ್ಟಿಸಿದೆ.
ವಿದ್ಯಾರ್ಥಿಗಳ ಕಿಸ್ಸಿಂಗ್​ ಹುಚ್ಚಾಟ: ಮಂಗಳೂರು ಪೊಲೀಸ್​ ಕಮಿಷನರ್​ ಬಿಚ್ಚಿಟ್ಟ ಮಾಹಿತಿ ಇಲ್ಲಿದೆ

ಆರತಕ್ಷತೆ ವೇಳೆ ಕುಸಿದು ಬಿದ್ದು ಮದುಮಗ ಸಾವು! ಹೊಸಪೇಟೆಯಲ್ಲಿ ದುರಂತ ಘಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
