ಮಂಗಳೂರು:ಬೆಂಗಳೂರು-ಮಂಗಳೂರು ನಡುವೆ ವಾರದಲ್ಲಿ ಮೂರು ದಿನ ಸಂಚರಿಸುತ್ತಿದ್ದ ನಂ.16585/86 ಬೆಂಗಳೂರು-ಮಂಗಳೂರು ಎಕ್ಸ್​ಪ್ರೆಸ್​ (ವಯಾ ಮೈಸೂರು) ರಾತ್ರಿ ರೈಲನ್ನು ವಾರದಲ್ಲಿ 6 ದಿನ ಓಡಿಸಲು ಕೇಂದ್ರ ರೈಲ್ವೆ ಮಂಡಳಿ ಅನುಮತಿಸಿದೆ.
ನೈಋತ್ಯ ರೈಲ್ವೆಯಿಂದ ಜುಲೈ 27ರಂದು ರೈಲ್ವೆ ಬೋರ್ಡ್​ಗೆ ಈ ಕುರಿಂತೆ ಹಾಗೂ ಇತರ ವಿಷಯಗಳಿಗೆ ಸಂಬಂಧಿಸಿದಂತೆ ಪತ್ರ ಬರೆಯಲಾಗಿತ್ತು. ಆ.17ರಂದು ಮಂಡಳಿಯಿಂದ ಉತ್ತರ ಬಂದಿದ್ದು, ಅದರಂತೆ ನಂ.16585/86 ಬೆಂಗಳೂರು-ಮಂಗಳೂರು ಎಕ್ಸ್​ಪ್ರೆಸ್​ ರೈಲಿನ ಸಂಚಾರವನ್ನು 3 ದಿನದಿಂದ 6 ದಿನಕ್ಕೆ ಹೆಚ್ಚು ಮಾಡಲು ಅನುಮತಿ ನೀಡಿದೆ. ಇದೇ ವೇಳೆ ವಾರದಲ್ಲಿ ಮೂರು ಬಾರಿ ಸಂಚರಿಸುತ್ತಿದ್ದ ನಂ.06547/48 ಕೆಎಸ್​ಆರ್​ ಬೆಂಗಳೂರು-ಮಂಗಳೂರು ವಿಶೇಷ ಎಕ್ಸ್​ಪ್ರೆಸ್​ ರೈಲನ್ನು ಈ ರೈಲಿನೊಂದಿಗೆ ವಿಲೀನಗೊಳಿಸಲಾಗಿದೆ. ಭಾರಿ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಿರಂತರವಾಗಿ ಭೂ ಕುಸಿತ ಉಂಟಾದ ಹಿನ್ನೆಲೆಯಲ್ಲಿ ಪ್ರಯಾಣಿಕರ ಬೇಡಿಕೆ ಮೇರೆಗೆ ಈ ವಿಶೇಷ ರೈಲನ್ನು ಆರಂಭಿಸಲಾಗಿತ್ತು.
ಟರ್ಮಿನಲ್​ ಬದಲಾವಣೆ:ನಂ.16585/86 ಕೆಎಸ್​ಆರ್​ ಬೆಂಗಳೂರು- ಮಂಗಳೂರು ಎಕ್ಸ್​ಪ್ರೆಸ್​ ರೈಲಿನ ಟರ್ಮಿನಲ್​ ಸದ್ಯ ಇರುವ ಕೆಎಸ್​ಆರ್​ (ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ಸಿಟಿ ಜಂಕ್ಷನ್​)ನಿಂದ ಎಸ್​ಎಂವಿಬಿ (ಸರ್​ ಎಂ.ವಿಶ್ವೇಶ್ವರಯ್ಯ ರೈಲು ನಿಲ್ದಾಣ ಬೈಯಪ್ಪನಹಳ್ಳಿ)ಗೆ ವಿಸ್ತರಿಸಲಾಗಿದೆ. ಟರ್ಮಿನಲ್​ ಬದಲಾವಣೆಯಾದರೂ ಬೆಂಗಳೂರು ಸಿಟಿ, ಕಂಟೋನ್ಮೆಂಟ್​, ಸಿಟಿ ಮತ್ತು ಕೆಂಗೇರಿ ಸೇರಿದಂತೆ ಈ ಹಿಂದಿನ ಮಾರ್ಗದಲ್ಲಿಯೇ ಸಂಚರಿಸಲಿದೆ.
ಕಾರವಾರಕ್ಕೂ ವಿಸ್ತರಣೆ ಬೇಡಿಕೆ:ಈ ರೈಲನ್ನು ಕಾರವಾರ ಅಥವಾ ವಾಸ್ಕೋಡಗಾಮ ನಿಲ್ದಾಣಕ್ಕೆ ವಿಸ್ತರಿಸುವ ಕುರಿತಾಗಿಯೂ ಬೇಡಿಕೆ ಕೇಳಿ ಬರುತ್ತಿದೆ. ಈಗಾಗಲೇ ಸಂಸದ ಪ್ರತಾಪಸಿಂಹ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್​ ಅವರಿಗೆ ಪತ್ರ ಬರೆದು ವಾಸ್ಕೋಡಗಾಮ ನಿಲ್ದಾಣಕ್ಕೆ ವಿಸ್ತರಿಸುವಂತೆ ಮನವಿ ಮಾಡಿದ್ದಾರೆ. ಆ ಮೂಲಕ ಗೋವಾ-ಮೈಸೂರು ನಡುವೆ ಪ್ರವಾಸಿಗರಿಗೆ ಸಂಚಾರ ಸುಲಭ ಸಾಧ್ಯವಾಗಲಿದೆ ಎನ್ನುವುದು ಸಂಸದರ ಅಭಿಪ್ರಾಯ.
ದೋಷ ನಿವಾರಣೆ ನೆಪದಲ್ಲಿ ನಕಲಿ ಹೇಯ ಕೃತ್ಯವೆಸಗಿದ ಸ್ವಾಮೀಜಿ-ಪತ್ನಿ! ಐದು ವರ್ಷದಿಂದ ಯುವತಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ

ಮೊಸಳೆ ವೇಗವಾಗಿ ಓಡೋದನ್ನ ಎಂದಾದ್ರೂ ನೋಡಿದ್ದೀರಾ? ಈ ವಿಡಿಯೋ ನೋಡಿದ್ರೆ ನಿಮ್ಮ ಹುಬ್ಬೇರೋದು ಗ್ಯಾರೆಂಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 4 =
Remember me
